RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ನೋಂದಾಯಿತ ಕಾರ್ಮಿಕರಿಗೆ ತ್ವರಿತವಾಗಿ ಸೌಲಭ್ಯ ವಿತರಿಸುವಂತೆ ಆಗ್ರಹಿಸಿ ಕೆಎಂವಿಪಿ ಮನವಿ

ಗೋಕಾಕ:ನೋಂದಾಯಿತ ಕಾರ್ಮಿಕರಿಗೆ ತ್ವರಿತವಾಗಿ ಸೌಲಭ್ಯ ವಿತರಿಸುವಂತೆ ಆಗ್ರಹಿಸಿ ಕೆಎಂವಿಪಿ ಮನವಿ 

ನೋಂದಾಯಿತ ಕಾರ್ಮಿಕರಿಗೆ ತ್ವರಿತವಾಗಿ ಸೌಲಭ್ಯ ವಿತರಿಸುವಂತೆ ಆಗ್ರಹಿಸಿ ಕೆಎಂವಿಪಿ ಮನವಿ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 4 :

 

ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತ ಕಾರ್ಮಿಕರಿಗೆ ಸರಕಾರದಿಂದ ಸಿಗುವ ಸಕಲ ಸೌಲಭ್ಯಗಳನ್ನು ತ್ವರಿತವಾಗಿ ವಿತರಿಸುವಂತೆ ಆಗ್ರಹಿಸಿ ಇಲ್ಲಿನ ಕರ್ನಾಟಕ ಮುಸ್ಲಿಂ ವಿಕಾಸ್ ಪರಿಷತ್ತಿನ ಪದಾಧಿಕಾರಿಗಳು ಮಂಗಳವಾರದಂದು ನಗರದ ಕಾರ್ಮಿಕರ ಕಾರ್ಯಾಲಯದಲ್ಲಿ ಸೇರಿ ಕಾರ್ಮಿಕ ಇಲಾಖೆಯ ವಿಳಂಬ ನೀತಿಯನ್ನು ಖಂಡಿಸಿ ತಾಲೂಕಾ ಕಾರ್ಮಿಕ ನಿರೀಕ್ಷಕ ಪಿ.ವಿ‌. ಮಾವರಕರ ಮುಖಾಂತರ ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಮನವಿ ಅರ್ಪಿಸಿದರು.

ಲಾಕಡೌನ ಸಂದರ್ಭದಲ್ಲಿ ಸರಕಾರದಿಂದ ಪ್ರತಿ ನೋಂದಾಯಿತ ಕಾರ್ಮಿಕರಿಗೆ ಮೊದಲು ಹಂತದಲ್ಲಿ 3 ಸಾವಿರ ಹಾಗೂ 2ನೇ ಹಂತದಲ್ಲಿ 2 ಸಾವಿರ ರೂಪಾಯಿ ಅಂದರೆ ಒಟ್ಟಾರೆ ಪ್ರತಿ ನೋಂದಾಯಿತ ಕಾರ್ಮಿಕನಿಗೆ ಒಟ್ಟು 5 ಸಾವಿರ ರೂಪಾಯಿ ಜಮಾ ಆಗಬೇಕು ಆದರೆ ಇಲ್ಲಿಯ ವರೆಗೆ ಗೋಕಾಕ ತಾಲೂಕಿನ ಭಾಗಶಃ ಕಾರ್ಮಿಕರಿಗೆ ಈ ಸೌಲಭ್ಯ ದೊರೆತಿಲ್ಲಾ ಇದರ ಬಗ್ಗೆ ಜಿಲ್ಲಾ ಕಾರ್ಮಿಕ ಅಧಿಕಾರಿ ಅವರಿಗೆ ಗೋಕಾಕಿನ ಕಾರ್ಮಿಕ ಅಧಿಕಾರಿ ಅವರು ಸಾಕಷ್ಟು ಬಾರಿ ಗಮನ ಹರಿಸಿದರು ಸಹ ಇತ್ತ ಗಮನ ಹರಿಸುವಲ್ಲಿ ಈ ಉನ್ನತ್ತಾಧಿಕಾರಿ ಎಡವಿದ್ದಾರೆ. ನೋಂದಣಿತ 8 ಸಾವಿರ ಕಾರ್ಮಿಕರಲ್ಲಿ 1800 ಕಾರ್ಮಿಕರಿಗೆ ಮಾತ್ರ 5 ಸಾವಿರ ರೂ ಜಮಾ ಆಗಿವೆ. ಉಳಿದ 6200 ಕಾರ್ಮಿಕರಿಗೆ ಸರಕಾರದ ಈ ಸೌಲಭ್ಯ ದೊರೆತಿಲ್ಲ

ಗೋಕಾಕ ಕಾರ್ಮಿಕರ ಇಲಾಖೆಯಲ್ಲಿ 1300 ಜನ ಕಾರ್ಮಿಕರು ಶೈಕ್ಷಣಿಕ ಸಹಾಯಧನ (ಕಲಿಕಾ ಭಾಗ್ಯ) ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇದುವರೆಗೆ ಯಾವಬ್ಬ ಕಾರ್ಮಿಕನಿಗೆ ಈ ಕಲಿಕಾ ಭಾಗ್ಯ ಶೈಕ್ಷಣಿಕ ಸಹಾಯಧನ ದೊರೆತಿಲ್ಲಾ. ಮದುವೆ ಸಹಾಯಧನಕ್ಕಾಗಿ ಹಾಕಿದ್ದ ಅರ್ಜಿಗಳಲ್ಲಿ 53 ಫಲಾನುಭವಿಗಳು ಬಾಕಿ ಉಳಿದಿದ್ದಾರೆ. ಇವರ ಮದುವೆ ಮುಗಿದು 2 ವರ್ಷ ಕಳೆದರು ಸಹ ಇಲ್ಲಿಯವರೆಗೆ ಸಹಾಯಧನ ಜಮಾ ಆಗಿಲ್ಲ, ಈ ಕಾರ್ಮಿಕರು ಇಲಾಖೆಗೆ ಅಲಿದು ಅಲಿದು ಸುಸ್ತಾಗಿದ್ದಾರೆ. ಇಲಾಖೆಯಲ್ಲಿ ಉಂಟಾಗುವ ತಾಂತ್ರಿಕ ತೊಂದರೆಗಳನ್ನು ಸರಿಪಡಿಸಿ ಕಾರ್ಮಿಕರಿಗೆ ನ್ಯಾಯ ದೊರೆಕಿಸಿ ಕೊಡಬೇಕಾಗಿರುವ ಉನ್ನತ ಅಧಿಕಾರಿಗಳೆ ಕೈಚಲ್ಲಿದರೆ ಕಾರ್ಮಿಕರ ಕಲ್ಯಾಣ ಮಾಡುವವರು ಯಾರು ಎಂಬ ಪ್ರಶ್ನೆ ಕಾರ್ಮಿಕ ವಲಯದಲ್ಲಿ ಹರಿದಾಡುತ್ತಿದೆ.

ಇದಲ್ಲದೆ ಕಾರ್ಮಿಕರಿಗಾಗಿ ಪಿಂಚಣಿ ಸೌಲಭ್ಯ, ದುರ್ಬಲತೆ ಪಿಂಚಿಣಿ , ಕಾರ್ಮಿಕ ಗೃಹ ಭಾಗ್ಯ, ಹೆರಿಗೆ ಸೌಲಭ್ಯ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ , ವೈದ್ಯಕೀಯ ಸೌಲಭ್ಯ , ಅಪಘಾತ ಪರಿಹಾರ, ಮದುವೆ ಸಹಾಯಧನ ಸೇರಿದಂತೆ ಹತ್ತಾರು ಸಹಾಯ ಸವಲತ್ತುಗಳು ಕಾರ್ಮಿಕ ಇಲಾಖೆ ನೋಂದಾಯಿತ ಕಾರ್ಮಿಕರಿಗೆ ನೀಡುತ್ತದೆ. ಇದರ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿ ಪ್ರತಿಯೊಬ್ಬ ಕಾರ್ಮಿಕ ಇಲಾಖೆಯಿಂದ ನೋಂದಾಯಿತವಾಗಬೇಕು ಎಂಬ ಉದ್ದೇಶದಿಂದ ಸರಕಾರ ಸಾಕಷ್ಟು ಕಾರ್ಮಿಕರನ್ನು ಇಲಾಖೆಗೆ ನೋಂದಾಯಿಸಿ ಕೊಳ್ಳುತ್ತಿದೆ ಆದರೆ ಜಿಲ್ಲಾ ಕಾರ್ಮಿಕ ಅಧಿಕಾರಿಯವರ ನಿರ್ಲಕ್ಷ್ಯದಿಂದ ಹೆಚ್ಚಿನ ಸೌಲಭ್ಯ ಗೋಕಾಕ ಕಾರ್ಮಿಕರಿಗೆ ದೊರೆಯದಾಗಿದೆ. ಇಗಲಾರದು ಜಿಲ್ಲಾ ಕಾರ್ಮಿಕ ಅಧಿಕಾರಿ ತರನುಂ ಬೆಂಗಾಲಿ ಅವರು ತಾಲೂಕಾ ಕಾರ್ಮಿಕ ಅಧಿಕಾರಿಯೊಂದಿಗೆ ಸಹಕರಿಸಿ ತಾಲೂಕಿನ ಕಾರ್ಮಿಕರಿಗೆ ಸರಕಾರದಿಂದ ದೊರಕಬೇಕಾದ ಸೌಲಭ್ಯಗಳನ್ನು ದೊರಕಿಸಿ ಕೊಡಬೇಕೆಂದು ಸಮಸ್ತ ಕಾರ್ಮಿಕ ವತಿಯಿಂದ ಕರ್ನಾಟಕ ಮುಸ್ಲಿಂ ವಿಕಾಸ್ ಪರಿಷತ್ ಪದಾಧಿಕಾರಿಗಳು ಮನವಿಯಲ್ಲಿ ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ಪರಿಷತ್ತಿನ ಜಿಲ್ಲಾಧ್ಯಕ್ಷ ಅಬ್ಬಾಸ ದೇಸಾಯಿ, ಕಾರ್ಯದರ್ಶಿ ಸಾದಿಕ ಹಲ್ಯಾಳ, ಜಾವೇದ ನಿಂಬರಗಿ, ಮುಗುಟ ಪೈಲವಾನ, ಯಾಸೀನ ಮುಲ್ಲಾ, ಖಾಜಾಸಾಬ ಮತ್ತೆ, ರಪೀಕ ಗುಳೆದಗುಡ್ಡ , ಅಬ್ಬು ಮುಜಾವರ, ಮೊಸಿನ ಮಕಾನದಾರ, ರಮಜಾನ ಅಂಡಗಿ ಉಪಸ್ಥಿತರಿದ್ದರು

Related posts: