ಗೋಕಾಕ:ಕೆಎಲ್ಇ ಸಂಸ್ಥೆ ಇಂದು ದೇಶದಲ್ಲಿಯೇ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆಯುತ್ತಿದೆ : ಜಯಾನಂದ ಮುನ್ನೋಳಿ
ಕೆಎಲ್ಇ ಸಂಸ್ಥೆ ಇಂದು ದೇಶದಲ್ಲಿಯೇ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆಯುತ್ತಿದೆ : ಜಯಾನಂದ ಮುನ್ನೋಳಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 4 :
ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಗುಣಮಟ್ಟದ ಸೇವೆಯನ್ನು ಜನತೆಗೆ ನೀಡುತ್ತಾ ಕೆಎಲ್ಇ ಸಂಸ್ಥೆ ಇಂದು ದೇಶದಲ್ಲಿಯೇ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆಯುತ್ತಿದೆ ಎಂದು ಕೆಎಲ್ಇ ಸಂಸ್ಥೆಯ ನಿರ್ದೇಶಕ ಜಯಾನಂದ ಮುನ್ನೋಳಿ ಹೇಳಿದರು
ಮಂಗಳವಾರದಂದು ನಗರದ ಕೆಎಲ್ಇ ಸಂಸ್ಥೆಯ ಸಿ.ಎಸ್.ಅಂಗಡಿ ಪದವಿಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಿಂದ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸತ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ಜನತೆಯ ಆರ್ಶಿವಾದ, ಸಿಬ್ಬಂದಿಗಳ ಸಹಕಾರದಿಂದ ಸಂಸ್ಥೆಯು ಈ ಸಾಧನೆ ಮಾಡುತ್ತಿದೆ ಎಂದರು.
ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಕೆಎಲ್ಇ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದು ಮಾದರಿಯಾಗಿದೆ. ಕಠಿಣ ಪರಿಶ್ರಮದಿಂದ ವಿದ್ಯಾರ್ಥಿಗಳು ಮುಂದಿನ ಶಿಕ್ಷಣದಲ್ಲಿಯೂ ಸಾಧಕರಾಗಿ ಸಂಸ್ಥೆ, ಶಿಕ್ಷಕರಿಗೆ ಹಾಗೂ ಪಾಲಕರಿಗೆ ಕೀರ್ತಿ ತನ್ನಿರೆಂದು ಹಾರೈಸಿದ ಅವರು ಕೆಎಲ್ಇ ಸಂಸ್ಥೆ ಹಾಗೂ ಮಹಾದೇವಪ್ಪ ಮುನ್ನೋಳಿ ಚಾರಿಟೇಬಲ್ ಟ್ರಸ್ಟಿನಿಂದ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಪಿ.ಯು.ಸಿ ವಿದ್ಯಾರ್ಥಿಗಳ ಜ್ಞಾನಮಟ್ಟವನ್ನು ಹೆಚ್ಚಿಸಿ ಅವರನ್ನು ಪ್ರತಿಭಾನ್ವಿತರನ್ನಾಗಿ ಮಾಡಲು ಗ್ರಂಥಾಲಯವನ್ನು ಪ್ರಾರಂಭಿಸಲಾಗುವುದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ವಿಜ್ಞಾನ ವಿಭಾಗದಲ್ಲಿ ಕಾಲೇಜಿಗೆ ಹಾಗೂ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವೈಷ್ಣವಿ ಶಿರಾಳಕರ , ಕಾಲೇಜಿಗೆ ದ್ವಿತೀಯ ಹಾಗೂ ತಾಲೂಕಿಗೆ
ತೃತಿಯ ಸ್ಥಾನ ಪಡೆದ ಬಿಬಿಆಯಿಶಾ ಪಟೇಲ ಹಾಗೂ ಗಣಿತ ವಿಷಯದಲ್ಲಿ 100ಕ್ಕೆ 100 ಅಂಕ ಪಡೆದ ವೈಷ್ಣವಿ ಶಿರಾಳಕರ , ಸಾಗರ ಕಂಬಾರ, ವಾಣಿ ದೊಡ್ಡಮನಿ ಸೇರಿದಂತೆ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು
ವೇದಿಕೆಯ ಮೇಲೆ ಸ್ಥಳೀಯ ಕೆಎಲ್ಇ ಸಂಸ್ಥೆಗಳ ಅಧ್ಯಕ್ಷ ಎಂ.ಡಿ.ಚುನಮರಿ, ಆಡಳಿತ ಅಧಿಕಾರಿ ಜಿ.ಎಂ ಅಂದಾನಿ , ಪ್ರಾಚಾರ್ಯ ಕೆ.ಬಿ.ಮೆವುಂಡಿಮಠ ಇದ್ದರು.
ಉಪನ್ಯಾಸಕಿ ಜ್ಯೋತಿ ಮಾಸ್ತಿಹೋಳಿ ಸ್ವಾಗತಿಸಿದರು ಶಾಂತಾ ಭುಜನ್ನವರ ನಿರೂಪಿಸಿ ವಂದಿಸಿದರು