RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:1992ರಲ್ಲಿ ಅಯೋಧ್ಯೆಗೆ ತೆರಳಿದ್ದ ಕರಸೇವಕರಿಗೆ ಸತ್ಕಾರ

ಗೋಕಾಕ:1992ರಲ್ಲಿ ಅಯೋಧ್ಯೆಗೆ ತೆರಳಿದ್ದ ಕರಸೇವಕರಿಗೆ ಸತ್ಕಾರ 

1992ರಲ್ಲಿ ಅಯೋಧ್ಯೆಗೆ ತೆರಳಿದ್ದ ಕರಸೇವಕರಿಗೆ ಸತ್ಕಾರ

 

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 5 :

 
ಅಯೋಧ್ಯೆಯ ರಾಮಜನ್ಮ ಭೂಮಿಯಲ್ಲಿ ಶ್ರೀರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮದ ಅಂಗವಾಗಿ ಗೋಕಾಕ ವಿಧಾನಸಭಾ ಮತಕ್ಷೇತ್ರದಿಂದ 1992ರಲ್ಲಿ ಅಯೋಧ್ಯೆಗೆ ತೆರಳಿದ್ದ ಕರಸೇವಕರನ್ನು ಗುರುತಿಸಿ ಸನ್ಮಾನಿಸಲಾಯಿತು.
ಬುಧವಾರದಂದು ನಗರದ ಸಚಿವರ ಕಾರ್ಯಾಲಯದಲ್ಲಿ ಅಯೋಧ್ಯೆ ಶ್ರೀ ರಾಮ ಮಂದಿರ ಭೂಮಿಪೂಜೆ ಕಾರ್ಯಕ್ರಮ ನಿಮಿತ್ಯ, ಕರಸೇವಕರಾದ ಸುರೇಶ ಪಾಟೀಲ, ಸುಮೀತ್ರಾ ಪಾಟೀಲ, ಬಸವರಾಜ ಹುದ್ದಾರ, ಶಿವಲೀಲಾ ಹುದ್ದಾರ, ರಾಜೇಂದ್ರ ಪೇಟಕರ, ಅರುಣ ದೇಶಪಾಂಡೆ, ಚಿರಾಕಅಲಿ ಮಕಾಂದಾರ, ಸುಭಾಷ ಗಾಯಕವಾಡ, ಕೆಂಪಣ್ಣ ತುಕ್ಕಾನಟ್ಟಿ, ನಾಗಲಿಂಗ ಪೋತದಾರ, ಶಿವಾನಂದ ಕಮ್ಮಾರ, ಗನುಸಿಂಗ ರಜಪೂತ, ಮಹಾಂತೇಶ ಹಳ್ಳಿ ಸೇರಿದಂತೆ ಇನ್ನಿತರ ಕರಸೇವಕರಿಗೆ ಸನ್ಮಾನ ಮಾಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕರ ಮುಖಂಡ ಅಂಬಿರಾವ ಪಾಟೀಲ ಹಾಗೂ ಗೋಕಾಕ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಮಂಡಲದ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಪದಾಧಿಕಾರಿಗಳಾದ ಜಯಾನಂದ ಹುಣಶ್ಯಾಳ, ತವನರಾಜ ಬೇನ್ನಾಡಿ, ಮುಖಂಡರಾದ ಸುರೇಶ ಸನದಿ, ಶಶಿಧರ ದೇಮಶೆಟ್ಟಿ, ಕೆಂಪಣ್ಣ ಮೈಲನ್ನವರ ಸೇರಿದಂತೆ ಇತರರು ಇದ್ದರು.

Related posts: