ಘಟಪ್ರಭಾ:ಶ್ರೀ ಮಾರುತಿ ದೇವಸ್ಥಾನದಲ್ಲಿ ಅಭಿಷೇಕ ಹಾಗೂ ಪೂಜೆ
ಶ್ರೀ ಮಾರುತಿ ದೇವಸ್ಥಾನದಲ್ಲಿ ಅಭಿಷೇಕ ಹಾಗೂ ಪೂಜೆ
ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಅ 5 :
ಅಯೋದ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಂಕು ಸ್ಥಾಪನೆ ನಿಮಿತ್ಯ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಶ್ರೀ ಮಾರುತಿ ದೇವಸ್ಥಾನದಲ್ಲಿ ಅಭಿಷೇಕ ಹಾಗೂ ಪೂಜೆ ನೇರವೆರಿಸಿದರು.
ಬುಧವಾರದಂದು ಬಿಜೆಪಿ ಕಾರ್ಯಕರ್ತರು ಹಾಗೂ ಪ.ಪಂ ಸದಸ್ಯರು ಮಲ್ಲಾಪೂರ ಪಿ.ಜಿ ಪಟ್ಟಣದ ಶ್ರೀ ಮಾರುತಿ ದೇವಸ್ಥಾನದಲ್ಲಿ ಅಭಿಷೇಕ ಹಾಗೂ ಪೂಜೆ ನೇರವೆರಿಸಿ ಸಿಹಿ ಹಂಚಿ ಅಯೋದ್ಯೆಯಲ್ಲಿ ಬೇಗನೆ ರಾಮಮಂದಿರದ ನಿರ್ಮಾಣ ಪೂರ್ಣಗೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಡಿ.ಎಮ್.ದಳವಾಯಿ, ಸುರೇಶ ಪಾಟೀಲ, ಜಿ.ಎಸ್.ರಜಪೂತ, ಮಡಿವಾಳಪ್ಪ ಮುಚಳಂಬಿ, ರಾಜು ಕತ್ತಿ, ಕಿರಣ ವಾಲಿ, ಚಿರಾಕಲಿ ಮಕಾನದಾರ, ಸುರೇಶ ಪೂಜಾರಿ, ಪ.ಪಂ ಸದಸ್ಯರಾದ ಮಲ್ಲು ಕೋಳಿ, ಸಲೀಮ ಕಬ್ಬೂರ, ನಾಗರಾಜ ಚಚಡಿ, ಈರಣ್ಣಾ ಕಲಕುಟಗಿ, ವಿಕ್ರಮ ದಳವಾಯಿ ಸೇರಿದಂತೆ ಬಿಜೆಪಿಯ ಕಾರ್ಯಕರ್ತರು ಇದ್ದರು.