RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆ

ಗೋಕಾಕ:ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆ 

ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 6 :

 

 

ಇಲ್ಲಿನ ಅಂಬೇಡ್ಕರ್ ನಗರದ ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಗುರುವಾರದಂದು ಪಠ್ಯ ಪುಸ್ತಕ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯೋಪಾಧ್ಯಾಯ ಬಿ.ಆರ್.ಮುರಗೋಡ ಅವರು ಕೊರೋನಾ ಮಹಾಮಾರಿ ಸಂದರ್ಭದಲ್ಲಿ ಸರಕಾರದ ಆದೇಶದಂತೆ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಗಿದ್ದು, ವಿದ್ಯಾರ್ಥಿಗಳು ಮನೆಯಲ್ಲೇ ಇದ್ದು ಶಿಕ್ಷಕರು ಪ್ರತಿನಿತ್ಯ ವ್ಯಾಟ್ಸಫ್ ನಲ್ಲಿ ನೀಡುವ ಹೋಮವರ್ಕನ್ನು ತಪ್ಪದೆ ಮಾಡಬೇಕು. ಪಾಲಕರು ವಾರಕ್ಕೆ ಒಂದು ಸಾರಿ ಶಾಲೆಗೆ ಬಂದು ನೋಟ್ ಬಕ್ಕನಲ್ಲಿ ಶಿಕ್ಷಕರ ಸಹಿ ಪಡೆದುಕೊಂಡು ಹೊಗಬೇಕು. ಅನಗತ್ಯವಾಗಿ ಮಕ್ಕಳನ್ನು ಹೊರಗಡೆ ಬಿಡದೆ ಅವರ ಆರೋಗ್ಯವನ್ನು ಕಾಪಾಡುವಲ್ಲಿ ಪಾಲಕರ ಪಾತ್ರ ಬಹು ಮುಖ್ಯವಾಗಿದೆ. ಸಾಮಾಜಿಕ ಅಂತರ ಮತ್ತು ಮಾಸ್ಕ ಸೇರಿದಂತೆ ಸರಕಾರ ನೀಡುವ ನಿರ್ದಶನಗಳನ್ನು ತಪ್ಪದೇ ಪಾಲಿಸಿ ಕೊರೋನಾ ವೈರಸ್ ಹರಡದಂತೆ ತಡೆಗಟ್ಟಲು ಎಲ್ಲರೂ ಸಹಕರಿಸಬೇಕೆಂದು ಮುಖ್ಯೋಪಾಧ್ಯಾಯ ಮುರಗೋಡ ಹೇಳಿದರು.

ಎಸ್.ಡಿ.ಎಂ.ಸಿ ಅಧ್ಯಕ್ಷ ನೂರಇಲಾಯಿ ಜಮಾದರ , ಸದಸ್ಯರುಗಳಾದ ಸಾದಿಕ ಹಲ್ಯಾಳ , ಅಬ್ಬಾಸ ದೇಸಾಯಿ, ಅಬ್ಬು ಮುಜಾವರ , ಶಿಕ್ಷಕರುಗಳಾದ ಶ್ರೀಮತಿ ಸಲ್ಲಾಂ ಮುಲ್ಲಾ , ಎಫ್.ಎ ಚಿಕ್ಕುಂಬಿ ಐ.ಎಂ ಮೋಮಿನ ಉಪಸ್ಥಿತರಿದ್ದರು

Related posts: