RNI NO. KARKAN/2006/27779|Tuesday, December 24, 2024
You are here: Home » breaking news » ಗೋಕಾಕ:ತಾಲೂಕಿನಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಸಕಲ ಸಿದ್ಧತೆ : ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಮಾಹಿತಿ

ಗೋಕಾಕ:ತಾಲೂಕಿನಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಸಕಲ ಸಿದ್ಧತೆ : ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಮಾಹಿತಿ 

ತಾಲೂಕಿನಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಸಕಲ ಸಿದ್ಧತೆ : ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಮಾಹಿತಿ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 6 :

 

ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗೋಕಾಕ ಫಾಲ್ಸ ಜಲಪಾತ ತುಂಬಿ ದುಮುಕುತ್ತಿರುವುದು

 

ತಾಲೂಕಿನಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ತಿಳಿಸಿದ್ದಾರೆ .

ಈ ಕುರಿತು ತಮ್ಮನ್ನು ಬೇಟಿಯಾದ ಪತ್ರಕರ್ತರನ್ನು ಉದ್ಧೇಶಿಸಿ ಮಾತನಾಡಿರುವ ಅವರು ಮಾರ್ಕಂಡೇಯ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಶಿರೂರು ಜಲಾಶಯದಿಂದ 10 ಸಾವಿರ ಕ್ಯೂಸೆಕ್ಸ ನೀರನ್ನು ಬಿಡಲಾಗಿದೆ. ಈಗಾಗಲೇ ತಾಲೂಕಿನಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು 17 ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಮಾರ್ಕಂಡೇಯ , ಘಟಪ್ರಭಾ , ಹಿರಣ್ಯಕೇಶಿ ನದಿ ತಟದಲ್ಲಿ ಇರುವ ಗ್ರಾಮಗಳ ನಿವಾಸಿಗಳಿಗೆ ಗ್ರಾಮಗಳನ್ನು ಬಿಟ್ಟು ಎತ್ತರದ ಸುರಕ್ಷಿತ ಪ್ರದೇಶಗಳಿಗೆ ತೆರಳಲು, ಧನ ಕರುಗಳನ್ನು ಸುರಕ್ಷಿತ ಪ್ರದೇಶಗಳಲ್ಲಿ ಸಾಗಿಸಲು ಎಲ್ಲಾ ಗ್ರಾಮಗಳಲ್ಲಿ ಡಂಗುರ ಸಾರಲು ನಿರ್ದೆಶನಗಳನ್ನು ನೀಡಲಾಗಿದೆ. ನೋಡಲ್ ಅಧಿಕಾರಿಗಳು ಮತ್ತು ಪಂಚಾಯಿತಿ ಪಿಡಿಓ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಇಂದಿನಿಂದಲೆ ಪಿಲ್ಡಗೆ ಇಳಿದು ಕಾರ್ಯಪ್ರವೃತವಾಗಿದ್ದಾರೆ ಎಂದು ತಹಶೀಲ್ದಾರ ತಿಳಿಸಿದ್ದಾರೆ.

51 ಕ್ಯೂಸೆಕ್ಸ ನೀರು ಸಂಗ್ರಹ ಸಾರ್ಮಥ್ಯ ವಿರುವ ಹಿಡಕಲ್ ಜಲಾಶಯದಲ್ಲಿ ಈಗಾಗಲೇ 34 ಕ್ಯೂಸೆಕ್ಸ ನಷ್ಟು ನೀರು ಭರ್ತಿಯಾಗಿದೆ. ಇನ್ನೂ 17 ಕ್ಯೂಸೆಕ್ಸ ರಷ್ಟು ನೀರು ತುಂಬುವುದು ಬಾಕಿ ಇದೆ. ಕಳೆದ ವರ್ಷ ಸಂಭವಿಸಿದ ಪ್ರವಾಹ ಈ ವರ್ಷ ಸಂಭವಿಸುವ ಲಕ್ಷಣಗಳು ಇಲ್ಲವಾದರೂ ಸಹ ಮುಂಜಾಗ್ರತಾ ಕ್ರಮವಾಗಿ ತಾಲೂಕಿಗೆ 8 ಬೋಟ್ ಗಳ ಬೇಡಿಕೆಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಅಲ್ಲದೆ ಬೆಳಗಾವಿಯ ಆರ್ಮಿ ಅಧಿಕಾರಿಗಳಿಗೆ ಬೋಟ್ ಹಾಗೂ ಸುರಕ್ಷಿತಾ ಪರಿಕರಗಳೊಂದಿಗೆ ಪ್ರವಾಹ ಎದುರಾದರೆ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಲು ವಿನಂತಿಸಕೊಳ್ಳಲಾಗಿದೆ ಎಂದು ತಹಶೀಲ್ದಾರ ತಿಳಿಸಿದ್ದಾರೆ.

ನಗರದ ಚಿಕ್ಕೋಳಿ ಸೇತುವೆ ತುಂಬಲು ಕೇವಲ 10 ಅಡಿ ಬಾಕಿ ಉಳಿದಿರುವುದು..

ಗಂಜಿ ಕೇಂದ್ರಗಳನ್ನು ಗುರುತಿಸಲು ಸೂಚನೆ : ಪ್ರವಾಹ ಪರಿಸ್ಥಿತಿ ಎದುರಾದರೆ ಪರಿಸ್ಥಿತಿ ಎದುರಿಸಲು ತಾಲೂಕಿನ ಗಂಜಿ ಕೇಂದ್ರಗಳನ್ನಾಗಿಸಲು ಸರಕಾರಿ ಹಾಗೂ ಖಾಸಗಿ ಶಾಲೆ, ಹಾಸ್ಟೆಲ್ ಸೇರಿದಂತೆ ಇತರೆ ಕಟ್ಟಡಗಳನ್ನು ಗುರುತಿಸಲು ನೋಡಲ್ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಅಧಿಕಾರಿಗಳು ಆ ಒಂದು ಕಾರ್ಯದಲ್ಲಿ ನಿರತರಾಗಿದ್ದಾರೆ

ಲೋಳಸೂರ ಗ್ರಾಮಕ್ಕೆ ಸಂರ್ಪಕ ಕಲ್ಪಿಸುವ ಸೇತುವೆ ಸಂರ್ಪೂಣ ಮುಳುಗಡೆಯಾಗಿರುವುದು

ಶಿಂಗಳಾಪೂರ ಸೇತುವೆ ಸಂರ್ಪಕ ಕಡಿತ : ಕಳೆದ ಎರೆಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ನಗರದಲ್ಲಿರುವ ಮಾರ್ಕಂಡೇಯ , ಘಟಪ್ರಭಾ ನದಿಗಳ ಹರಿವು ಹೆಚ್ಚಾಗಿದ್ದು , ಶಿಂಗಳಾಪೂರ ಗ್ರಾಮಕ್ಕೆ ಸಂರ್ಪಕ ಕಲ್ಪಿಸುವ ಚಿಕ್ಕ ಸೇತುವೆ ಸಂರ್ಪೂಣ ಮುಳುಗಡೆ ಯಾಗಿದೆ. ಲೋಳಸೂರ ಮತ್ತು ಚಿಕ್ಕೋಳಿ ಸೇತುವೆಗಳು ಸಹ ಮುಳುಗಡೆ ಯಾಗಲು ಸುಮಾರು 10 ರಿಂದ 15 ಅಡಿಯಷ್ಟು ಬಾಕಿ ಇದೆ .

ಎರೆಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನಗರದ ಲೋಳಸೂರ ಸೇತುವೆ ಮುಳುಗಡೆಯಾಗಲು 10 ಅಡಿ ಬಾಕಿ ಉಳಿದಿರುವುದು .

Related posts: