ಗೋಕಾಕ:ಯೋಗಿಕೊಳ್ಳ ದೇವಸ್ಥಾನಕ್ಕೆ ಹೋಗುವ ರಸ್ತೆ ಸಂರ್ಪಕ ಕಡಿತ
ಯೋಗಿಕೊಳ್ಳ ದೇವಸ್ಥಾನಕ್ಕೆ ಹೋಗುವ ರಸ್ತೆ ಸಂರ್ಪಕ ಕಡಿತ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 8 :
ಕಳೆದ 4 ದಿನಗಳಿಂದ ಖಾನಾಪೂರ ಅರಣ್ಯ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಮಾರ್ಕೆಂಡೆಯ ನದಿ ತುಂಬಿ ಹರಿಯುತ್ತಿರುವ ಪರಿಣಾಮ ಶಿರೂರು ಜಲಾಶಯ ಸಂರ್ಪೂಣ ಭರ್ತಿಯಾಗಿದೆ. ಜಲಾಶಯದಿಂದ ಸುಮಾರು 10 ಸಾವಿರ ಕ್ಯೂಸೆಕ್ಸ ನೀರನ್ನು ನದಿಗೆ ಹರಿಬಿಡಲಾಗಿದ್ದು , ನಗರದ ಯೋಗಿಕೊಳ್ಳ ರಸ್ತೆಯಲ್ಲಿರುವ ಘಟ್ಟಿ ಬಸವಣ್ಣ ಯಾತ ನೀರಾವರಿ ಚಿಕ್ಕ ಡ್ಯಾಂ ಪೂರ್ಣ ಭರ್ತಿಯಾಗಿ ನೀರು ರಸ್ತೆಗೆ ಬಂದ ಪರಿಣಾಮ ಯೋಗಿಕೊಳ್ಳ ದೇವಸ್ಥಾನಕ್ಕೆ ಹೋಗುವ ರಸ್ತೆ ಸಂರ್ಪಕ ಕಡಿತವಾಗಿದೆ.
ಯೋಗಿಕೊಳ್ಳ ದೇವಸ್ಥಾನಕ್ಕೆ ಹೋಗುವ ರಸ್ತೆಯುದ್ದಕ್ಕೂ ಸುಮಾರು 50 ಕುಟುಂಬಗಳು ವಾಸವಾಗಿದ್ದು, ರಸ್ತೆಯಲ್ಲಿ 2 ಅಡಿಯಷ್ಟು ನೀರು ಹರಿಯುತ್ತಿರುವ ಪರಿಣಾಮ ಅಲ್ಲಿ ವಾಸಿಸುತ್ತಿರು ಕುಟುಂಬದ ಸದಸ್ಯರು ಕಳೆದ ಎರೆಡು ದಿನಗಳಿಂದ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಯುವಕರು ಪಕ್ಕದ ಗುಡ್ಡದ ಮೇಲಿನಿಂದ ದಾಟಿ ಬಂದು ಅಗತ್ಯ ವಸ್ತುಗಳನ್ನು ಖರೀದಿಸಿಕೊಂಡು ಹೋಗುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಇದರಿಂದ ವಯೋವೃದ್ದರು, ಮಕ್ಕಳು ತುಂಬು ತೊಂದರೆಯನ್ನು ಅನುಭವಿಸುತ್ತಿದ್ದಾರೆ.