ಗೋಕಾಕ:ಬಣಜಿಗ ಸಮಾಜದವರಿಗೆ ಪ್ರವರ್ಗ-2(ಎ) ಅಡಿ ಪ್ರಮಾಣ ಪತ್ರ ನೀಡಲು ಆಗ್ರಹಿಸಿ ಮನವಿ
ಬಣಜಿಗ ಸಮಾಜದವರಿಗೆ ಪ್ರವರ್ಗ-2(ಎ) ಅಡಿ ಪ್ರಮಾಣ ಪತ್ರ ನೀಡಲು ಆಗ್ರಹಿಸಿ ಮನವಿ
ಗೋಕಾಕ ಅ 30: ಬಣಜಿಗ ಸಮಾಜದವರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರದಲ್ಲಿ ಪ್ರವರ್ಗ-2(ಎ) ಅಂತಾ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ದಿ ಸಂಘದ ಮೂಡಲಗಿ ಘಟಕದ ವತಿಯಿಂದ ಬುಧವಾರದಂದು ತಹಶೀಲದಾರ ಜಿ.ಎಸ್.ಮಳಗಿ ವರಿಗೆ ಮನವಿ ಸಲ್ಲಿಸಿದರು.
ಬಣಜಿಗ ಸಮಾಜದ ಮಕ್ಕಳ ವಿದ್ಯಾಬ್ಯಾಸ ಮತ್ತು ಇತರೆ ಕಾರ್ಯಗಳಿಗಾಗಿ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದರು ಕೂಡಾ ಪ್ರವರ್ಗ-2(ಎ) ಅಡಿ ಪ್ರಮಾಣ ಪತ್ರ ನೀಡಲು ನೀರಾಕರಿಸುತ್ತಿದ್ದಾರೆ. 2011ರಲ್ಲಿ ಸರ್ಕಾರದ ಆದೇಶದಂತೆ ರಾಜ್ಯದ ಪ್ರತಿ ತಾಲೂಕಿನಲ್ಲಿ ಪ್ರಮಾಣ ಪತ್ರಗಳನ್ನು ನೀಡುತ್ತಿದ್ದರು ಕೂಡಾ ತಮ್ಮ ಇಲಾಖೆಯಲ್ಲಿ 2010 ರ ಆದೇಶದಂತೆ ಪ್ರಮಾಣ ಪತ್ರಗಳನ್ನು ನೀಡುತ್ತಿರುವುದರಿಂದ ಬಣಜಿಗ ಸಮಾಜದವರಿಗೆ ತುಂಬಾ ತೊಂದರೆಯಾಗುತ್ತಿದೆ. ವಿದ್ಯಾರ್ಥಿಗಳ ಶಾಲಾ ದಾಖಲಾತಿಯಲ್ಲಿ ಬಣಜಿಗ ಎಂದು ನಮೂದ ಇದ್ದರು, ಪಾಲಕರ ಶಾಲಾ ದಾಖಲಾತಿಗಳನ್ನು ಕೇಳುತ್ತಿರುವುದು ಸರಿಯಲ್ಲ, ಸುಮಾರು ವರ್ಷಗಳಿಂದ ಲಿಂಗಾಯತ ಉಪಜಾತಿಗಳು ಆಚರಣೆಯಲ್ಲಿ ಇದ್ದರೂ ಕೂಡಾ ಹಿಂದಿನ ಹಿರಿಯರು ಹೆಚ್ಚಿನವರು ಅನಕ್ಷರಸ್ಥರಾಗಿದ್ದರಿಂದ ತಮ್ಮ ಮಕ್ಕಳ ಶಾಲಾ ದಾಖಲಾತಿಯ ಜಾತಿ ಕಾಲಂನಲ್ಲಿ ಹಿಂದೂ-ಲಿಂಗಾಯತ ಅಂತಾ ಮಾತ್ರ ಬರೆಯಿಸಿದ್ದಾರೆ. ಶಿಕ್ಷಕರ ತಪ್ಪಿನಿಂದಾಗಿ ಉಪಜಾತಿ ಕಾಲಂನ್ನು ಖಾಲಿ ಬಿಟ್ಟಿದ್ದಾರೆ. ಆದರೆ ಇತ್ತಿಚೆಗೆ 15 ವರ್ಷಗಳಿಂದ ನಮ್ಮ ಮಕ್ಕಳ ಶಾಲಾ ದಾಖಲಾತಿಯಲ್ಲಿ ಬಣಜಿಗ ಅಂತಾ ನಮೂದಿಸುತ್ತಾ ಬಂದಿದ್ದು ಸರ್ಕಾರ ನಿಗದಿಪಡಿಸಿದ ಆದೇಶದನ್ವಯ ವಿದ್ಯಾರ್ಥಿಗಳ ಶಾಲಾ ದಾಖಲಾತಿಯಂತೆ ಬಣಜಿಗ ಸಮಾಜದವರಿಗೆ ಪ್ರವರ್ಗ-2(ಎ) ಅಡಿ ಪ್ರಮಾಣ ಪತ್ರ ನೀಡಬೇಕೆಂದು ಮನವಿಯಲ್ಲಿ ಕೋರಿದ್ದಾರೆ.
ಈ ಸಂದರ್ಭದಲ್ಲಿ ಮೂಡಲಗಿ ಘಟಕದ ಅಧ್ಯಕ್ಷ ಚನ್ನಬಸಪ್ಪ ಅಂಗಡಿ, ಎಸ್.ಎಸ್.ಕೋಟಗಿ, ರಾಜು ಅಂಗಡಿ, ಶಿವಬಸು ನೀಲಣ್ಣವರ, ಶಂಕರ ಅಂಗಡಿ, ಈರಣ್ಣ ಜಕಾತಿ, ಪ್ರಕಾಶ ಪುಠಾಣಿ, ಬಸವರಾಜ ಜಕಾತಿ, ಸದಾಶಿವ ಶೀಲವಂತ, ಮಹಾಂತೇಶ ಶೆಟ್ಟಿ, ಅಜಪ್ಪ ಅಂಗಡಿ, ಶಿವಯೋಗಿ ಸಬರದ, ಶಿವಾನಂದ ಗಾಡವಿ, ಮಲ್ಲಪ್ಪ ಸಾವಡಕರ, ಅಶೋಕ ವಾಣಿ, ಜಯಾನಂದ ಪಾಟೀಲ, ನಿಂಗಪ್ಪ ಪೀರೋಜಿ ಸೇರಿದಂತೆ ಹಲವರು ಇದ್ದರು.