ಗೋಕಾಕ:ನಗರಸಭೆ ಹಿರಿಯ ಸದಸ್ಯ ಕೋತವಾಲ ಗೌಡ ನಿಧನ
ನಗರಸಭೆ ಹಿರಿಯ ಸದಸ್ಯ ಕೋತವಾಲ ಗೌಡ ನಿಧನ
ನಮ್ಮ ಬೆಳಗಾವಿ ಇ – ವಾರ್ತೆ ,ಗೋಕಾಕ ಅ 8 :
ನಗರಸಭೆ ಹಿರಿಯ ಸದಸ್ಯ ಮತ್ತು ಮಾಜಿ ಅಧ್ಯಕ್ಷ ಶೇಖ್ ಫತೆವುಲ್ಲಾ .ಎ.ಕೋತವಾಲ (ಗೌಡ) ಅವರು ಇಂದು ನಿಧನರಾಗಿದ್ದಾರೆ
ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತಿದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಗೋಕಾಕ ನಗರಸಭೆಗೆ 8 ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದ ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅಂಜುಮನ್ ಇಸ್ಲಾಂ ಕಮಿಟಿ ಗೋಕಾಕ ಮತ್ತು ತಂಜೀಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಮತ್ತು ಗ್ರಾಮ ದೇವತೆ ಜಾತ್ರಾ ಕಮಿಟಿ ಸದಸ್ಯರಾಗಿಯೂ ಜನಸೇವೆ ಮಾಡಿದ್ದಾರೆ. ಜಾರಕಿಹೊಳಿ ಸಹೋದರರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ಅವರು ಸಚಿವ ರಮೇಶ ಜಾರಕಿಹೊಳಿ ಅವರ ಆಪ್ತರಾಗಿದ್ದರು.
ಊರಿನ ಗೌಡ ಎಂದೇ ಖ್ಯಾತಿ ಪಡೆದಿದ್ದ ಎಸ್.ಎ ಕೋತವಾಲ ಅವರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಕೋತವಾಲ ಅವರ ನಿಧನಕ್ಕೆ ಜಾರಕಿಹೊಳಿ ಸಹೋದರರರಾದ ಸಚಿವ ರಮೇಶ ಜಾರಕಿಹೊಳಿ, ಶಾಸಕ ಸತೀಶ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಲಖನ್ ಜಾರಕಿಹೊಳಿ ಮತ್ತು ಭಿಮಶಿ ಜಾರಕಿಹೋಳಿ ಸಂತಾಪ ವ್ಯಕ್ತಪಡಿಸಿದ್ದಾರೆ.