ಘಟಪ್ರಭಾ:ಗಣೇಶ ಹಬ್ಬವನ್ನು ಯಾವದೇ ಆಡಂಬರಗಳಿಲ್ಲದೆ ಸರಳವಾಗಿ ಆಚರಿಸಿ : ಪಿ.ಎಸ್.ಆಯ್ ಬಾಲದಂಡಿ
ಗಣೇಶ ಹಬ್ಬವನ್ನು ಯಾವದೇ ಆಡಂಬರಗಳಿಲ್ಲದೆ ಸರಳವಾಗಿ ಆಚರಿಸಿ : ಪಿ.ಎಸ್.ಆಯ್ ಬಾಲದಂಡಿ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಅ 14 :
ಸಾರ್ವಜನಿಕ ಸ್ಥಳಗಳಲ್ಲಿ ಪೆಂಡಾಲಗಳನ್ನು ಹಾಕದೆ ಹತ್ತಿರದ ದೇವಸ್ಥಾನದಲ್ಲಿ ಮೂರು ಅಡಿಕ್ಕಿಂತ ಕಡಿಮೆ ಎತ್ತರವಿರುವ ಗಣೇಶಣ ಮೂರ್ತಿ ಕೂಡ್ರಿಸಿ ಗಣೇಶ ಉತ್ಸವ ಆಚರಿಸುವಂತೆ ಘಟಪ್ರಭಾ ಪಿ.ಎಸ್.ಆಯ್. ಹಾಲಪ್ಪ ಬಾಲದಂಡಿ ಹೇಳಿದರು.
ಅವರು ಶುಕ್ರವಾರ ಸಂಜೆ ಪೊಲೀಸ ಠಾಣೆಯ ಆವರಣದಲ್ಲಿ ಗಣೇಶ ಹಬ್ಬದ ಶಾಂತಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಈ ವರ್ಷ ಮಹಾಮಾರಿ ಕೊರೊನಾದಿಂದಾಗಿ ಎಲ್ಲ ಹಬ್ಬಗಳನ್ನು ಸರಳವಾಗಿ ಆಚರಿಸುತ್ತ ಬಂದಿದ್ದೆವೆ. ಅದೇ ರೀತಿ ಗಣೇಶ ಹಬ್ಬವನ್ನು ಯಾವದೇ ಆಡಂಬರಗಳಿಲ್ಲದೆ ಸರಳವಾಗಿ ಆಚರಿಸಿ ಎಂದು ಮನವಿ ಮಾಡಿದರು.
ಸರ್ಕಾರದ ಆದೇಶದಂತೆ ಮಣ್ಣಿನ ಗಣಪತಿಯನ್ನೆ ಪ್ರತಿಷ್ಠಾಪಿಸಬೇಕು, ಗಣಪತಿ ತರುವಾಗ ಮತ್ತು ವಿಸರ್ಜನೆ ಸಮಯದಲ್ಲಿ ಸೌಂಡ ಸಿಸ್ಟಮಗಳನ್ನು ಹಚ್ಚಬಾರದು. ಪ್ರತಿಷ್ಠಾಪನೆ ಮಾಡಿದ ನಂತರ ಗಣಪತಿ ಹತ್ತಿರ ಇಬ್ಬರು ಖಡ್ಡಾಯವಾಗಿ ಇರಬೇಕು. ಹಾಗೂ ಗೊಂದಲ ಉಂಟಾಗದಂತೆ ಸರಳÀವಾಗಿ ಗಣೇಶ ಹಬ್ಬ ಅಚರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಲ್ಲಾಪೂರ ಪಿ.ಜಿ, ಧುಪದಾಳ, ಶಿಂದಿಕುರಬೇಟ, ದುರದುಂಡಿ, ಘಟಪ್ರಭಾ, ಪಾಮಲದಿನ್ನಿ, ಆರಬಾಂವಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಗಣೇಶ ಉತ್ಸವ ಕಮೀಟಿಯವರು ಇದ್ದರು.