ಗೋಕಾಕ:ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ 61 ಜನರಿಗೆ ಕೊರೋನಾ ಸೋಂಕು ದೃಡ : ಡಾ.ಜಗದೀಶ ಜಿಂಗಿ
ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ 61 ಜನರಿಗೆ ಕೊರೋನಾ ಸೋಂಕು ದೃಡ : ಡಾ.ಜಗದೀಶ ಜಿಂಗಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 16 :
ಗೋಕಾಕ ಮತ್ತು ಮೂಡಲಗಿ ತಾಲೂಕಿನಲ್ಲಿ ರವಿವಾರದಂದು 61 ಜನರಿಗೆ ಕೊರೋನಾ ಸೋಂಕು ದೃಡಪಟ್ಟಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ .
ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿರುವ ಅವರು ಗೋಕಾಕ ನಗರ – 43, ಅಂಕಲಗಿ -4 , ದೂಪಧಾಳ -3, ಮಲ್ಲಾಪೂರ ಪಿ.ಜಿ -2 , ಶಿಂಧಿಕೂರಬೇಟ, ಮದವಾಲ,ಮಲ್ಲಾಪೂರ, ಅವರಾಧಿ, ಕೌಜಲಗಿ, ತುಕ್ಕಾನಟ್ಟಿ, ಗಣೇಶವಾಡಿ, ಗೋಕಾಕ ಫಾಲ್ಸ, ಪಂಚನಾಯಕನಹಟ್ಟಿ ಗ್ರಾಮಗಳಲ್ಲಿ ತಲಾ ಒಬ್ಬರಿಗೆ ಕೊರೋನಾ ಸೋಂಕು ದೃಡಪಟ್ಟಿದೆ ಎಂದು ಡಾ.ಜಗದೀಶ ತಿಳಿಸಿದ್ದಾರೆ.