RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಲಕ್ಷ್ಮೀ ಹೆಬ್ಬಾಳಕರ ಜೈ ಮಹಾರಾಷ್ಟ್ರ ಹೇಳಿಕೆಗೆ ಕರವೇ ಖಂಡನೆ : ಗೋಕಾಕನಲ್ಲಿ ಹೆಬ್ಬಾಳಕರ ಪ್ರತಿಕೃತಿ ಧಹಿಸಿ ಆಕ್ರೋಶ

ಗೋಕಾಕ:ಲಕ್ಷ್ಮೀ ಹೆಬ್ಬಾಳಕರ ಜೈ ಮಹಾರಾಷ್ಟ್ರ ಹೇಳಿಕೆಗೆ ಕರವೇ ಖಂಡನೆ : ಗೋಕಾಕನಲ್ಲಿ ಹೆಬ್ಬಾಳಕರ ಪ್ರತಿಕೃತಿ ಧಹಿಸಿ ಆಕ್ರೋಶ 

ಲಕ್ಷ್ಮೀ ಹೆಬ್ಬಾಳಕರ ಜೈ ಮಹಾರಾಷ್ಟ್ರ ಹೇಳಿಕೆಗೆ ಕರವೇ ಖಂಡನೆ : ಗೋಕಾಕನಲ್ಲಿ ಹೆಬ್ಬಾಳಕರ ಪ್ರತಿಕೃತಿ ಧಹಿಸಿ ಆಕ್ರೋಶ
ಗೋಕಾಕ ಅ 31: ದಿನಾಂಕ 27 ರಂದು ಬಸರಿಕಟ್ಟಿ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಮಹಾರಾಷ್ಟ್ರಕ್ಕೆ ಜೈ ಅನ್ನುತ್ತೇನೆಂದು ಹೇಳಿದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾ ಘಟಕದ ಕಾರ್ಯಕರ್ತರು, ತಾಲೂಕಾ ಅಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿಂದು ಪ್ರತಿಭಟನೆ ನಡೆಯಿಸಿದರು.

ಗುರುವಾರ ಮುಂಜಾನೆ ನಗರದ ವಾಲ್ಮೀಕಿ ವೃತ್ತದಲ್ಲಿ ಸೇರಿದ ಕ.ರ.ವೇ. ಕಾರ್ಯಕರ್ತರು ನಾಡ ವಿರೋಧಿ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಘೋಷಣೆಗಳನ್ನು ಕೂಗಿ ಅವರ ಪ್ರತಿಕೃತಿ ದಹಿಸಿ ಹೆಬ್ಬಾಳ್ಕರರಿಗೆ ಗಡಿಪಾರು ಮಾಡುವಂತೆ ಆಗ್ರಹಿಸಿದರು.

ಪ್ರತಿಭಟನಾ ನಿರತರನ್ನು ಉದ್ಧೇಶಿಸಿ ಮಾತನಾಡಿದ ಕ.ರ.ವೇ. ಅಧ್ಯಕ್ಷ ಬಸವರಾಜ ಖಾನಪ್ಪನವರ ಮಹಾರಾಷ್ಟಕ್ಕೆ ಜೈ ಎಂದು ಘೋಷಣೆ ಕೂಗುತ್ತೇನೆಂದು ಹೇಳಿರುವ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ನಾಡವಿರೋಧೆ ಲಕ್ಷ್ಮೀ ಹೆಬ್ಬಾಳ್ಕರ ಬೆಳಗಾವಿಯಲ್ಲಿ ರಾಜಕಾರಣ ಮಾಡಲು ಯೋಗ್ಯರಲ್ಲ. ಮರಾಠಿಗರ ಮೇಲೆ ಅಷ್ಟೊಂದು ಪ್ರೀತಿ ಇದ್ದರೆ ಲಕ್ಷ್ಮೀ ಹೆಬ್ಬಾಳಕರ ಕರ್ನಾಟಕ ಬಿಟ್ಟು ತೊಲಗಲಿ, ಅದನ್ನು ಬಿಟ್ಟು ಕರ್ನಾಟಕದಲ್ಲಿಯೇ ಇದ್ದುಕೊಂಡು ಮಹಾರಾಜ್ಯದ ಪರ ಘೋಷಣೆ ಕೂಗುತ್ತೇನೆ ಎಂದು ಹೇಳಿರುವುದು ಅಕ್ಷಮ್ಯ ಅಪರಾಧ. ಮಹಾಜನ ವರದಿಯಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವೆಂದು ರುಜುವಾತಾಗಿದೆ. ಇದರ ಕನಿಷ್ಠ ಜ್ಞಾನವಿಲ್ಲದೆ ಮಾತನಾಡಿರುವುದು ತರವಲ್ಲ. ನೈತಿಕ ಹೊಣೆಹೊತ್ತು ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಮರಾಠಿಗರನ್ನು ಓಲೈಕೆ ಮಾಡುವುದನ್ನು ಬಿಟ್ಟು ಮೊದಲು ಕನ್ನಡಿಗರ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಲಕ್ಷ್ಮೀ ಹೆಬ್ಬಾಳಕರ ಮನೆ ನುಗ್ಗಿ ಮಹಿಳಾ ಕ.ರ.ವೇ. ಕಾರ್ಯಕರ್ತರಿಂದ ಮಸಿ ಬಳೆಯಲಾಗುವುದೆಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಬೆಳಗಾವಿಯ ರಾಜಕಾರಣಿಗಳು ಮರಾಠಿಗರೊಂದಿಗೆ ಹೊಂದಾಣಿಕೆಯ ರಾಜಕಾರಣ ಮಾಡವುದನ್ನು ಬಿಟ್ಟು ಕನ್ನಡಿಗರ ಸ್ವಾಭಿಮಾನವನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು.

ಜಿಲ್ಲಾಡಳಿತ ಈ ಕೂಡಲೆ ಮಧ್ಯ ಪ್ರವೇಶಿಸಿ ನಾಡವಿರೋಧಿ ಹೇಳಿಕೆ ನೀಡಿರುವ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಗಡಿಪಾರು ಮಾಡಬೇಕೆಂದು ಜಿಲ್ಲಾಡಳಿತವನ್ನು ಎಚ್ಚರಿಸಿದ್ದಾರೆ.

ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಸಾಧಿಕ ಹಲ್ಯಾಳ, ರೀಯಾಜ ಚೌಗಲಾ, ದೀಪಕ ಹಂಜಿ, ಕೃಷ್ಣಾ ಖಾನಪ್ಪನವರ, ಮುಗುಟ ಫೈಲವಾನ, ನೀಯಾಜ ಪಟೇಲ, ಗುರು ಯಮಕನಮರಡಿ, ಮೂಸಾ ಕಲ್ಲೋಳಿ, ಶೆಟ್ಟೆಪ್ಪ ಗಾಡಿವಡ್ಡರ, ಮಲ್ಲಪ್ಪ ತಲೆಪ್ಪಗೋಳ, ರಮೇಶ ನಾಕಾ, ಲಕ್ಕಪ್ಪ ನಂದಿ, ಬಸವರಾಜ ಗಾಡಿವಡ್ಡರ, ಕೆಂಪಣ್ಣ ಕಡಕೋಳ, ಸಂಜು ಗಾಡಿವಡ್ಡರ, ರವಿ ನಾವಿ, ಮೈನುದ್ಧೀನ ಪಾತ್ರೆ, ಗಣಿ ನರೋ, ಶಬ್ಬೀರ ಮುಜಾವರ, ಮೈಬೂಬ ಮತ್ತೆ, ಸಲೀಂ ಸೈಯ್ಯದ, ಇಸ್ಮಾಯಿಲ್ ನದಾಫ, ನದೀಪ ಪಾಜನಿಗರ, ಮಹ್ಮದ ಸುಳೇಭಾವಿ, ವಾಹಬ್ ಉಮರ್, ಆಸೀಫ ಕಿಲ್ಲೇದಾರ, ಅಲ್ತಾಫ ಕಾರಬಾರಿ, ಯುನೂಸ್ ಅಂಡಗಿ, ಸದ್ದಾಂ ಪಾಂಡೆ, ರಮಜಾನ ಶೇಖ, ಯಾಸೀನ ಶಿರಹಟ್ಟಿ, ಮುಬಾರಕ ಶಿರಹಟ್ಟಿ, ನಯೀಮ ಪೀರಜಾದೆ, ರಾಜಾಭಕ್ಷ ನದಾಫ, ಜಹಾಂಗೀರ ಬಾಗಿ, ರುಸ್ತುಂ ಮೋಹಿನ್, ಮುದಸರ ಪರಾಹಿತ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದು.

Related posts: