ಗೋಕಾಕ:ಪ್ರವಾಹದಿಂದ ಹಾನಿಗೊಳಗಾದ ಮನೆಗಳ ಹಾಗೂ ಬೆಳೆಗಳ ಮರು ಸಮೀಕ್ಷೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮನವಿ
ಪ್ರವಾಹದಿಂದ ಹಾನಿಗೊಳಗಾದ ಮನೆಗಳ ಹಾಗೂ ಬೆಳೆಗಳ ಮರು ಸಮೀಕ್ಷೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮನವಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 20- :
ಕಳೆದ ವರ್ಷ ಪ್ರವಾಹದಿಂದ ಹಾನಿಗೊಳಗಾದ ಮನೆಗಳ ಹಾಗೂ ಬೆಳೆಗಳ ಮರು ಸಮೀಕ್ಷೆ ನಡೆಸಿ ಪರಿಹಾರ ನೀಡುವಂತೆ ಹಾಗೂ ರಸಗೊಬ್ಬರಗಳ ಕೊರತೆಯನ್ನು ನೀಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ತಹಶೀಲದಾರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕಳೆದ ವರ್ಷ ಬೀಕರ ಪ್ರವಾಹದಿಂದ ತತ್ತರಿಸಿದ್ದ ಅಪಾರ ಪ್ರಮಾಣದಲ್ಲಿ ಕೋಟ್ಯಾಂತರ ರೂಗಳ ಬೆಳೆಹಾನಿ ಹಾಗೂ ಸಾವಿರಾರು ಸಂಖ್ಯೆಯಲ್ಲಿ ಮನೆಗಳು ಬಿದ್ದು ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗಿತ್ತು. ಪರಿಹಾರವನ್ನು ಒಂದು ವರ್ಷ ಕಳೆದರೂ ಕೂಡಾ ನೀಡಿಲ್ಲ, ಪರಿಹಾರ ನೀಡುವಲ್ಲಿ ಅನೇಕ ಗೊಂದಲಗಳಿದ್ದು ಗೊಂದಲಗಳನ್ನು ನಿವಾರಿಸಲು ಮತ್ತೊಮ್ಮೆ ಸಮೀಕ್ಷೆಯನ್ನು ಮಾಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಪರಿಹಾರ ನೀಡುವ ಕಾರ್ಯವಾಗಬೇಕು. ಅಲ್ಲದೇ ತಾಲೂಕಿನಲ್ಲಿ ರಸಗೊಬ್ಬರಗಳ ಕೊರತೆ ಇದ್ದು ಕೂಡಲೇ ಒದಗಿಸುವ ಕಾರ್ಯವಾಗಬೇಕು. ಒಂದು ವೇಳೆ ತಪ್ಪಿದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಶಂಕರ ಮದಿಹಳ್ಳಿ, ಕುಮಾರ ತಿಗಡಿ, ರಾಯಪ್ಪ ಗೌಡಪ್ಪನವರ, ಲಕ್ಷ್ಮಣ ಹಳ್ಳೂರ, ಶಿವಾನಂದ ಈಳಿಗೇರ, ಪರಸಪ್ಪ ಕಣವಿ, ಮಂಜುನಾಥ ಜಲ್ಲಿ ಸೇರಿದಂತೆ ಅನೇಕರು ಇದ್ದರು.