ಗೋಕಾಕ:ಬೆಳಗಾವಿಯಲ್ಲಿ ಪ್ರವಾಹ : ಸಚಿವ ಜಾರಕಿಹೊಳಿ ಕ್ಷೇತ್ರಕ್ಕೆ ಡಿಕೆಶಿ ಲಗ್ಗೆ : ಪರಿಸ್ಥಿತಿ ಪರಿಶೀಲನೆ : ಕಾಂಗ್ರೆಸ್ ನಾಯಕ ಲಖನ್ ನಡೆ ನಿಗೂಢ
ಬೆಳಗಾವಿಯಲ್ಲಿ ಪ್ರವಾಹ : ಸಚಿವ ಜಾರಕಿಹೊಳಿ ಕ್ಷೇತ್ರಕ್ಕೆ ಡಿಕೆಶಿ ಲಗ್ಗೆ : ಪರಿಸ್ಥಿತಿ ಪರಿಶೀಲನೆ : ಕಾಂಗ್ರೆಸ್ ನಾಯಕ ಲಖನ್ ನಡೆ ನಿಗೂಢ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 22 :
ಉತ್ತರ ಕರ್ನಾಟಕ ಅದರಲ್ಲೂ ಬೆಳಗಾವಿ ಜಿಲ್ಲೆಯಲ್ಲಿ ಉಂಟಾದ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅ 24 ಸೋಮವಾರದಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಕ್ಷೇತ್ರ
ಗೋಕಾಕ ಹಾಗೂ ಕೆಎಂಎಫ್ ಅಧ್ಯಕ್ಷ , ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಅರಭಾವಿ ಮತಕ್ಷೇತ್ರದ ನೆರೆ ಪಿಡಿತ ಪ್ರದೇಶಗಳಿಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯನ್ನ ಪರಿಶೀಲನೆ ನಡೆಸಲಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಲು ಆ. 25 ರಂದು ಆಗಮಿಸಲಿದ್ದಾರೆ. ಆದರೆ, ಡಿಕೆಶಿ ಸಿಎಂ ಆಗಮಿಸುವ ಮೊದಲು ಜಿಲ್ಲೆಗೆ ಆಗಮಿಸಲಿದ್ದಾರೆ.
ಟಾರ್ಗೆಟ್ ಗೋಕಾಕ ಮತಕ್ಷೇತ್ರ : ಬೆಳಗಾವಿಯ ಪಿ.ಎಲ್.ಡಿ ಬ್ಯಾಂಕ್ ರಾಜಕಾಣರದಿಂದ ಬದ್ದ ವೈರಿಗಳಾಗಿರುವ ಡಿಕೆಶಿ ಮತ್ತು ಸಚಿವ ರಮೇಶ ಜಾರಕಿಹೊಳಿ ಅವರು ಅವಕಾಶ ಸಿಕ್ಕಾಗಲೆಲ್ಲ ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಾ ಬಂದು ಮಾಧ್ಯಮಗಳಿಗೆ ಆಹಾರವಾಗುತ್ತಿದ್ದಾರೆ. ಜಿಲ್ಲೆಯ ಅನೇಕ ಪ್ರದೇಶಗಳಲ್ಲಿ ಪ್ರವಾಹ ಹಾನಿ ಉಂಟು ಮಾಡಿದರು ಸಹ ಡಿಕೆಶಿ ಗೋಕಾಕ ಕ್ಷೇತ್ರವನ್ನೇ ಟಾರ್ಗೆಟ್ ಮಾಡಿಕೊಂಡು ಪ್ರವಾಸ ಹೆಣೆದಿದ್ದಾರೆ ಎಂಬ ಚರ್ಚೆಗಳು ಜಿಲ್ಲೆಯಲ್ಲಿ ಹರಿದಾಡುತ್ತಿವೆ.ಗೋಕಾಕ ಸೇರಿದಂತೆ ಜಿಲ್ಲೆಯ ಅನೇಕ ತಾಲೂಕುಗಳು ಪ್ರವಾಹದಿಂದ ತತ್ತರಿಸಿವೆ ಅದರಲ್ಲೂ ಅಥಣಿ ಹಾಗೂ ಚಿಕ್ಕೋಡಿ ತಾಲೂಕುಗಳು ಕೃಷ್ಣಾ ಮತ್ತು ಹಿರಣ್ಯಕೇಶಿ ನದಿಗಳಿಗೆ ಉಂಟಾದ ಪ್ರವಾಹಕ್ಕೆ ಭಾಗಶಃ ತತ್ತರಿಸಿ ಹೋಗಿವೆ ಅವುಗಳನ್ನು ಬಿಟ್ಟು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬರೀ ಗೋಕಾಕ ಮತ್ತು ಅರಭಾವಿ ಕ್ಷೇತ್ರಗಳಿಗಷ್ಟೆ ಭೇಟಿ ನೀಡುತ್ತಿರುವುದು ಸಾಕಷ್ಟು ಸಂಶಯಕ್ಕೆ ಎಡೆ ಮಾಡಿದೆ. ಸೋಮವಾರದಂದು ನಗರಕ್ಕೆ ಭೇಟಿ ನೀಡಲಿರುವ ಡಿ.ಕೆ ಶಿವಕುಮಾರ್ ಅವರು ಗೋಕಾಕ ನೆರೆ ಪಿಡಿತ ಪ್ರದೇಶಗಳಿಗೆ ಮತ್ತು ಅರಭಾವಿ ಕ್ಷೇತ್ರದ ನೆರೆ ಪಿಡಿತ ಪ್ರದೇಶಗಳಿಗೆ ಭೇಟಿ ನೀಡಿ ಘಟಪ್ರಭಾದಲ್ಲಿ ಸೇವಾದಳ ತರಬೇತಿ ಸಂಸ್ಥೆಯನ್ನು ವಿಕ್ಷೀಸಿ ಅಲ್ಲಿಯೇ ಬೆಳಗಾವಿ ನಗರ , ಗ್ರಾಮೀಣ , ಚಿಕ್ಕೋಡಿ ಜಿಲ್ಲೆ ಕಾಂಗ್ರೆಸ್ ಸಮಿತಿಗಳ ಸಭೆ ನಡೆಸುವವರು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಕಾಂಗ್ರೆಸ್ ಮುಖಂಡ ಲಖನ್ ನಡೆ ನಿಗೂಢ : ಕಳೆದ ಉಪ ಚುನಾವಣೆಯಲ್ಲಿ ಸಹೋದರ ರಮೇಶ ಜಾರಕಿಹೊಳಿ ಅವರೊಂದಿಗೆ ಮುನಿಸಿಕೊಂಡು ಮತ್ತೋರ್ವ ಸಹೋದರ ಸತೀಶ ಜಾರಕಿಹೊಳಿ ಅವರೊಂದಿಗೆ ಕೂಡಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದು ಉಪ ಚುನಾವಣೆಯನ್ನು ಎದುರಿಸಿ, 29 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲನ್ನುಭವಿಸಿ ಪ್ರಚಾರ ಸಂದರ್ಭದಲ್ಲಿ ಸಹೋದರ ರಮೇಶ ಜಾರಕಿಹೊಳಿ ಅವರ ಜನ್ಮ ಜಾಲಾಡಿದ ಲಖನ್ , ಜೂನ ತಿಂಗಳಲ್ಲಿ ಸಚಿವ ರಮೇಶ ಜಾರಕಿಹೊಳಿ ಅವರ ಗೃಹ ಪ್ರವೇಶಕ್ಕೆ ಹೋಗಿಬಂದು ಸ್ವಲ್ಪ ತಣ್ಣಗಾದಂತೆ ಕಾಣುತ್ತದೆ. ತಾವಾಗಲ್ಲಿ ತಮ್ಮ ಬೆಂಬಲಿಗರಾಗಿ ಕಳೆದ ಎರೆಡು ತಿಂಗಳಿನಿಂದ ಕ್ಷೇತ್ರದಲ್ಲಿ ಸ್ವೀಚ್ ಆಫ್ ಆಗಿ ಬಿಟ್ಟಿದ್ದಾರೆ . ಬಿಜೆಪಿ ವಿರುದ್ದ ಯಾವುದೇ ಬಹಿರಂಗ ಹೇಳಿಕೆ ನೀಡುವುದಾಗಲಿ , ಪಕ್ಷದ ನಡೆಯನ್ನು ಖಂಡಿಸುವುದಾಗಲ್ಲಿ ಯಾವುದೇ ವ್ಯತಿರಿಕ್ತ ನಡೆಗಳು ಲಖನ್ ಆಂಡ್ ಟೀಂ ನಿಂದ ನಡೆಯುತ್ತಿಲ್ಲ . ಮೊನ್ನೆಯಷ್ಟೇ ದಿ.20 ರಂದು ಕೆಪಿಸಿಸಿ ವತಿಯಿಂದ ಬಿಜೆಪಿ ಸರಕಾರದ ವಿರುದ್ಧ ರಾಜ್ಯಾದ್ಯಂತ ನಡೆದ ಹೋರಾಟದಲ್ಲಿ ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ಅವರಾಗಲ್ಲಿ ಅವರ ಬೆಂಬಲಿಗರಾದ ನಗರಸಭೆ ಸದಸ್ಯರುಗಳಾಗಲ್ಲಿ ಪ್ರತಿಭಟನೆಗೆ ಗೈರಾಜರಾಗಿ ಇಡೀ ತಾಲೂಕಿನ ಜನರ ಹುಬ್ಬೇರಿಸಿದ್ದಾರೆ. ಇದರ ಬೆನ್ನಲ್ಲೇ ಪಕ್ಷದ ರಾಜ್ಯಾಧ್ಯಕ್ಷರಾಗಿ ಮೊದಲ ಬಾರಿ ಅದರಲ್ಲೂ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಲು ನಗರಕ್ಕೆ ಬರುತ್ತಿರುವ ಡಿಕೆಶಿ ಅವರಿಗೆ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರಿಗೆ ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ಸಾಥ್ ನೀಡುತ್ತಾರಾ ಅಥವಾ ಕೈ ಕೊಟ್ಟು ನಡು ನೀರಲ್ಲಿ ಬಿಡುತ್ತಾರ ಎಂಬುದನ್ನು ಸೋಮವಾರದ ದಿನದವೇ ನಿರ್ಧರಿಸಲಿದೆ.