RNI NO. KARKAN/2006/27779|Friday, December 13, 2024
You are here: Home » breaking news » ಬೆಳಗಾವಿ:ಹೆಬ್ಬಾಳ್ಕರ್ ಹೇಳಿಕೆಗೆ ಜಾರಕಿಹೊಳಿ ಸಹೋದರರ ಪ್ರತಿಕ್ರಿಯೆ : ಕರ್ನಾಟಕದ ವಿರುದ್ಧ ಯಾರೇ ಮಾತನಾಡಿದ್ದರೂ ತಪ್ಪು: ಸಚಿವ ರಮೇಶ

ಬೆಳಗಾವಿ:ಹೆಬ್ಬಾಳ್ಕರ್ ಹೇಳಿಕೆಗೆ ಜಾರಕಿಹೊಳಿ ಸಹೋದರರ ಪ್ರತಿಕ್ರಿಯೆ : ಕರ್ನಾಟಕದ ವಿರುದ್ಧ ಯಾರೇ ಮಾತನಾಡಿದ್ದರೂ ತಪ್ಪು: ಸಚಿವ ರಮೇಶ 

ಹೆಬ್ಬಾಳ್ಕರ್ ಹೇಳಿಕೆಗೆ ಜಾರಕಿಹೊಳಿ ಸಹೋದರರ ಪ್ರತಿಕ್ರಿಯೆ : ಕರ್ನಾಟಕದ ವಿರುದ್ಧ ಯಾರೇ ಮಾತನಾಡಿದ್ದರೂ ತಪ್ಪು: ಸಚಿವ ರಮೇಶ

ಬೆಳಗಾವಿ ಅ 31  ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕರ್ನಾಟಕದ ವಿರುದ್ಧವಾಗಿ ಮಾತನಾಡಿರುವುದು ತಪ್ಪು, ಅದು ಹೆಬ್ಬಾಳ್ಕರ್ ಅವರ ವೈಯಕ್ತಿಕ ಹೇಳಿಕೆ, ಹೆಬ್ಬಾಳ್ಕರ್ ಅವರ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಶಾಸಕ  ಸತೀಶ ಜಾರಕಿಹೊಳಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು,  ಬೆಳಗಾವಿ ಎಂದಿದ್ದರೂ ಕರ್ನಾಟಕದ್ದೇ. ಈ ಮಾತನ್ನು ಹಿಂದೆಯೂ  ಈಗಲೂ, ಮುಂದೆಯೂ ಹೇಳುತ್ತೇವೆ. ಬೆಳಗಾವಿ ವಿಷಯದಲ್ಲಿ ಕರ್ನಾಟಕದ ವಿರುದ್ಧ ಯಾರೂ ಮಾತನಾಡುವುದು ಸಾಧ್ಯವಿಲ್ಲ. ಬೆಳಗಾವಿ ಶಾಸಕರೆಲ್ಲ  ಒಂದಾಗಿ ಇದ್ದೇವೆ, ಬೆಳಗಾವಿ ವಿಷಯದಲ್ಲಿ ಭಿನ್ನಾಭಿಪ್ರಾಯಗಳೇ ಇಲ್ಲ ಎಂದು ಹೇಳಿದ್ದಾರೆ.

ಮರಾಠಿಗರನ್ನು ಓಲೈಸಲು ಲಕ್ಷ್ಮೀ ಹೆಬ್ಬಾಳ್ಕರ್ ಈ ರೀತಿ ಪ್ರತಿಕ್ರಿಯೆ ನೀಡಿರುವುದಕ್ಕೆ  ಸಾಧ್ಯವಿಲ್ಲ, ನನ್ನ ಕ್ಷೇತ್ರದಲ್ಲೂ 40 ಸಾವಿರ ಮರಾಠಿಗರು ಇದ್ದಾರೆ, ನಾನು ಯಾವತ್ತೂ  ಆ ರೀತಿಯಾದ ಹೇಳಿಕೆ ನೀಡಿಲ್ಲ ಎಂದು ಪ್ರಶ್ನೆಗಳಿಗೆ ಶಾಸಕ ಸತೀಶ ಉತ್ತರಿಸಿದ್ದಾರೆ.

ಸಚಿವ ರಮೇಶ ಜಾರಕಿಹೊಳಿ ಪ್ರತಿಕ್ರಿಯೆ ನೀಡಿ, ಯಾರೇ ಆಗಲಿ, ಈ ರೀತಿ ಹೇಳಿಕೆ ನೀಡಿರುವುದು ಖಂಡನೀಯ. ಯಾರೂ ಹಾಗೆ ಬೇಜವಾಬ್ದಾರಿ ಹೇಳಿಕೆ ನೀಡಲು ಸಾಧ್ಯವಿಲ್ಲ. ಮಹಾರಾಷ್ಟ್ರದ ಪರವಾಗಿ ಹೆಬ್ಬಾಳ್ಕರ್  ಅವರು ಹೇಳಿಕೆ ನೀಡುವುದಿಲ್ಲ, ಏನಾಗಿದೆ ಅನ್ನೋದನ್ನು ಸಂಪೂರ್ಣ ತಿಳಿದುಕೊಳ್ಳದೇ ಮಾತನಾಡುವುದಿಲ್ಲ. ಆದರೆ ಕರ್ನಾಟಕದ ವಿರುದ್ಧವಾಗಿ ಹೇಳಿಕೆ ನೀಡೋದು ತಪ್ಪು ಎಂದಿದ್ದಾರೆ

Related posts: