RNI NO. KARKAN/2006/27779|Sunday, November 24, 2024
You are here: Home » breaking news » ಗೋಕಾಕ:ಖಾಸಗಿ ವೈದ್ಯರು ಕರೋನಾ ಸೇವಾ ಕೇಂದ್ರ ಪ್ರಾರಂಭಿಸಲು ಮುಂದೆ ಬಂದಿರುವದು ಸ್ವಾಗತಾರ್ಹ : ಅಶೋಕ

ಗೋಕಾಕ:ಖಾಸಗಿ ವೈದ್ಯರು ಕರೋನಾ ಸೇವಾ ಕೇಂದ್ರ ಪ್ರಾರಂಭಿಸಲು ಮುಂದೆ ಬಂದಿರುವದು ಸ್ವಾಗತಾರ್ಹ : ಅಶೋಕ 

ಖಾಸಗಿ ವೈದ್ಯರು ಕರೋನಾ ಸೇವಾ ಕೇಂದ್ರ ಪ್ರಾರಂಭಿಸಲು ಮುಂದೆ ಬಂದಿರುವದು ಸ್ವಾಗತಾರ್ಹ : ಅಶೋಕ

 
ನಮ್ಮ ಬೆಳಗಾವಿ ಇ – ವಾರ್ತೆ ,ಗೋಕಾಕ ಅ 22 :

 

 
ದೇಶದಲ್ಲಿ ಮತ್ತು ರಾಜ್ಯದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕರೋನಾ ಬಾಧಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಸರಕಾರ ಮತ್ತು ಖಾಸಗಿ ಆಸ್ಪತ್ರೆಗಳು ಹೆಚ್ಚಿನ ಸಂಖ್ಯೆಯಲ್ಲಿ ಅವರ ಉಪಚಾರಕ್ಕೆ ಮುಂದಾಗುವ ಅವಶ್ಯಕತೆ ಇದ್ದು, ಅದಕ್ಕೆ ಪೂರಕವಾಗಿ ಗೋಕಾಕ ತಾಲೂಕಿನ ಖಾಸಗಿ ಆಸ್ಪತ್ರೆಗಳ ವೈದ್ಯರುಗಳು ಕೂಡಲೇ ಕರೋನಾ ರೋಗಿಗಳ ಉಪಚಾರಕ್ಕೆ ಕರೋನಾ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲು ಸಾರ್ವಜನಿಕರ ಪರವಾಗಿ ಇತ್ತೀಚೆಗೆ ಕಳಕಳಿಯ ಮನವಿಯ ಮೂಲಕ ವಿನಂತಿಸಲಾಗಿದ್ದು, ಅದಕ್ಕೆ ಪೂರಕವಾಗಿ ಸ್ಪಂಧಿಸಿರುವ ನಗರದ ಖಾಸಗಿ ಆಸ್ಪತ್ರೆಗಳ ವೈದ್ಯರುಗಳು ಸುಸಜ್ಜಿತ ಕರೋನಾ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲು ಮುಂದೆ ಬಂದಿರುವದು ಸ್ವಾಗತಾರ್ಹ ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಜೆ.ಡಿ.ಎಸ್. ಮುಖಂಡ ಅಶೋಕ ಪೂಜಾರಿ ಹೇಳಿದ್ದಾರೆ.

ನಗರದಲ್ಲಿ ಇಂದು ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿರುವ ಅವರು ಬಹುಶಃ ಒಂದೇರಡು ದಿನಗಳಲ್ಲಿ ಅಂತಹ ಆಸ್ಪತ್ರೆಗಳು ನಗರದಲ್ಲಿ ವೈದ್ಯಕೀಯ ಸೇವೆಗೆ ಅಣಿಯಾಗಿದ್ದಾರೆ. ಆದರೆ ಸರಕಾರಿ ಆಸ್ಪತ್ರೆಯಲ್ಲಿ ಇನ್ನು ಹೆಚ್ಚಿನ ಬೆಡ್‍ಗಳೊಂದಿಗೆ ಕರೋನಾ ಪೀಡಿತರ ಉಪಚಾರಕ್ಕೆ ಅಣಿಯಾಗಬೇಕಾದ ಅವಶ್ಯಕತೆ ತುಂಬಾ ಇದೆ ಎಂದು ಹೇಳಿದ್ದಾರೆ.
ಆದರೆ ತಾಲೂಕಿನ ಎರಡು ಪ್ರಮುಖ ವೈದ್ಯಕೀಯ ಸೇವಾ ಸಂಸ್ಥೆಗಳಾದ ಕರ್ನಾಟಕ ಆರೋಗ್ಯ ಧಾಮ (ಕೆ.ಎಚ್.ಆಯ್) ಹಾಗೂ ಜೆ.ಜಿ.ಕೋ-ಆಪ್ ಆಸ್ಪತ್ರೆ ಘಟಪ್ರಭಾ ಇವರು ಇನ್ನೂ ಇದಕ್ಕೆ ಪೂರಕವಾಗಿ ಸ್ಪಂದಿಸದಿರುವದು ಸಾರ್ವಜನಿಕರಲ್ಲಿ ಆತಂಕವನ್ನುಂಟುಮಾಡಿದೆ ಎಂದು ಅವರು ಖೇಧ ವ್ಯಕ್ತಪಡಿಸಿದ್ದಾರೆ. ಈ ಸಂಸ್ಥೆಗಳ ಮೂಲ ಉದ್ದೇಶವೇ ಜನಸಾಮಾನ್ಯ ಬಡವರ ಆರೋಗ್ಯದ ರಕ್ಷಣೆಯಾಗಿದ್ದು ಅದಕ್ಕೆ ಪೂರಕವಾಗಿ ಕರೋನಾ ಅಟ್ಟಹಾಸದ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ಎರಡೂ ಆಸ್ಪತ್ರೆಗಳು ಕೂಡಲೇ ಅದಕ್ಕೆ ಪೂರಕವಾಗಿ ಕ್ರಮ ಕೈಗೊಂಡು ಕರೋನಾ ರೋಗಿಗಳ ವೈಧ್ಯಕೀಯ ಸೇವಾ ಕೇಂದ್ರಗಳನ್ನು ಕೂಡಲೇ ಪ್ರಾರಂಭಿಸಬೇಕೆಂದು ಅವರನ್ನು ಸಾರ್ವಜನಿಕರ ಪರವಾಗಿ ಮತ್ತೊಮ್ಮೆ ಒತ್ತಾಯಿಸಿದ್ದಾರೆ.
ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮತ್ತು ಜಿಲ್ಲಾಢಳಿತ ಕೂಡಲೇ ಸಂಬಂಧಪಟ್ಟವರೊಂದಿಗೆ ಮಾತನಾಡಿ ಈ ಎರಡೂ ಸಂಸ್ಥೆಗಳಿಂದ ಕೂಡಲೇ ಕರೋನಾ ರೋಗಿಗಳ ಸೇವಾ ಕೇಂದ್ರಗಳನ್ನು ಪ್ರಾರಂಭಿಸುವಂತೆ ಮಾಡಲು ಮತ್ತು ನಗರದ ಸರಕಾರಿ ಆಸ್ಪತ್ರೆಯ ಕೋವಿಡ್ ವಾರ್ಡದ ಬೆಡ್‍ಗಳ ಸಂಖ್ಯೆಯನ್ನು 100 ಕ್ಕೆ ಹೆಚ್ಚಿಸಲು ತಕ್ಷಣ ಕ್ರಮಕೈಗೊಳ್ಳಬೇಕೆಂದು ವಿನಂತಿಸಿ ಒತ್ತಾಯಿಸಿದ್ದಾರೆ.

Related posts: