ಬೆಳಗಾವಿ:ಮೊದಲ ಕನ್ನಡ ಮೇಯರ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿದ್ಧನಗೌಡ ಪಾಟೀಲ್ ನಿಧನ
ಮೊದಲ ಕನ್ನಡ ಮೇಯರ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿದ್ಧನಗೌಡ ಪಾಟೀಲ್ ನಿಧನ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 26 :
ಬೆಳಗಾವಿಯ ಮಹಾನಗರ ಪಾಲಿಕೆಯ ಮೊದಲ ಕನ್ನಡ ಮೇಯರ್ ಸಿದ್ಧನಗೌಡ ಪಾಟೀಲ್(87) ಅವರು ಅನಾರೋಗ್ಯದಿಂದ ಬುದವಾರ ನಿಧನ ಹೊಂದಿದರು.
ಬೆಳಗಾವಿ ಮಹಾನಗರ ಪಾಲಿಕೆಯ ಮೊದಲ ಕನ್ನಡ ಮೇಯರ್ ಎನಿಸಿಕೊಂಡಿದ್ದಂತ ಸಿದ್ದನಗೌಡ ಪಾಟೀಲ(87) ಅವರು ಇಲ್ಲಿನ ಶಿವಬಸವನಗರದ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ.
ಬೆಳಗಾವಿ ಜಿಲ್ಲೆ ಬೈಲಹೊಂಗಲದ ಸರಿಗೆ ಮಲ್ಲಾಪುರ ಗ್ರಾಮದ ಕೃಷಿಕ ಕುಟುಂಬವೊಂದರಲ್ಲಿ 1934,ಏಪ್ರಿಲ್ 18ರಂದು ಸಿದ್ದನಗೌದ ಜನಿಸಿದ್ದರು. ಪ್ರಾಂತ್ಯಗಳ ವಿಂಗಡನೆ ಸಮಯದಲ್ಲಿ ಬಳ್ಲಾರಿಯನ್ನು ಆಂಧ್ರಪ್ರದೇಶಕ್ಕೆ ಸೇರಿಸಿದ ಸಮಯ ಅಂದಿನ ಪ್ರಧಾನಿ ಜವಹರಲಾಲ್ ನೆಹರು ಬೆಳಗಾವಿಗೆ ಆಗಮಿಸಿದ್ದ ವೇಳೆ ಅವರಿಗೆ ಕಪ್ಪು ಬಾವುಟ ತೋರಿಸಿ ವಿರೋಧ ವ್ಯಕ್ತಪಡಿಸಿದ್ದರು.
ಸತತ 2 ಬಾರಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿದ್ದ ಸಸಿದ್ದನಗೌಡ ನಾಡು ನುಡಿ, ಗಡಿ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಗುರ್ತಿಸಿಕೊಂಡಿದ್ದರು. 1956ರಿಂದಲೂ ಕನ್ನಡ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. 1984ರಲ್ಲಿ ಬೆಳಗಾವಿ ಪಾಲಿಕೆಯ ಸದಸ್ಯರಾಗಿ, 1990ರಲ್ಲಿ ಮತ್ತೆ ಪುನರಾಯ್ಕೆಯಾಗಿ, ಆನಂತರ 1991ರಲ್ಲಿ ಬೆಳಗಾವಿಯ ಪ್ರಥಮ ಕನ್ನಡ ಮಹಾಪೌರರಾಗಿ ಆಯ್ಕೆಗೊಂಡಿದ್ದರು. ಅನೇಕ ಕನ್ನಡ ಪರ ಸಂಘಟನೆಗಳು ಇವರ ನಿಧನಕ್ಕೆ ಶೋಕ ವ್ಯಕ್ತಪಡಿಸಿವೆ.