RNI NO. KARKAN/2006/27779|Friday, December 13, 2024
You are here: Home » breaking news » ಬೆಳಗಾವಿ:ರಾತ್ರೋರಾತ್ರಿ ಪೀರನವಾಡಿ ಗ್ರಾಮದಲ್ಲಿ ಸಂಗೋಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ

ಬೆಳಗಾವಿ:ರಾತ್ರೋರಾತ್ರಿ ಪೀರನವಾಡಿ ಗ್ರಾಮದಲ್ಲಿ ಸಂಗೋಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ 

ರಾತ್ರೋರಾತ್ರಿ ಪೀರನವಾಡಿ ಗ್ರಾಮದಲ್ಲಿ ಸಂಗೋಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ

 
ನಮ್ಮ ಬೆಳಗಾವಿ ಇ – ವಾರ್ತೆ , ಬೆಳಗಾವಿ ಅ 28 :

 
ಕಳೆದ 15 ದಿನಗಳಿಂದ ಜಿಲ್ಲೆ ಅಷ್ಠೆಅಲ್ಲಾ ಇಡೀ ರಾಜ್ಯದ ಗಮನ ಸೆಳೆದಿರುವ ಬೆಳಗಾವಿ ಜಿಲ್ಲೆಯ ಪೀರನವಾಡಿ ಗ್ರಾಮದ ವೀರ ಸಂಗೋಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ವಿವಾದ ಜಿಲ್ಲಾಡಳಿತ ಬಗ್ಗೆ ಹರಿಸುವ ಮೊದಲೇ ರಾಯಣ್ಣನ ಅಭಿಮಾನಿಗಳು ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಗುರುವಾರ ರಾತ್ರೋರಾತ್ರಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ
ಗುರುವಾರ ರಾತ್ರಿ ಸಂಗೋಳ್ಳಿ ರಾಯಣ್ಣನ ನೂರಾರು ಅಭಿಮಾನಿಗಳು ಹಾಗೂ ಕರವೇ ಕಾರ್ಯಕರ್ತರು ಪೀರನವಾಡಿ ಗ್ರಾಮದ ಸರ್ಕಲ್ ಕ್ಕೆ ಆಗಮಿಸಿ ಸಂಗೋಳ್ಳಿ ರಾಯಣ್ಣನ ಮೂರ್ತಿಯನ್ನು ತಾನು ಬಯಸಿದ್ದ ಜಾಗದಲ್ಲಿಯೇ ಪ್ರತಿಷ್ಠಾಪಿಸಿ, ರಾಯಣ್ಣನ ಪರ ಘೋಷಣೆಗಳನ್ನು ಕೂಗಿ, ಬೃಹದಾಕಾರದ ಹೂಮಾಲೆಗಳನ್ನು ಹಾಕಿ ವಿಜಯೋತ್ಸವ ಆಚರಿಸಿದ್ದಾರೆ.

ಗುರುವಾರದಂದು ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಹಾಲುಮತ ಸಮಾಜ ಭಾಂಧವರ ಸಭೆ ನಡೆಯಿಸಿ ಶನಿವಾರ ದಿ.29 ರಂದು ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವ ಭರವಸೆ ನೀಡಿದ್ದರು. ಹಾಲುಮತ ಸಮಾಜದ ಮುಖಂಡ ಸಚಿವ ಈಶ್ವರಪ್ಪ ಅವರು ಸಹ ದಿ‌.29 ರಂದು ಬೆಳಗಾವಿ ನಗರಕ್ಕೆ ಭೇಟಿ ನೀಡಿ ಸಂಗೋಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಬಗ್ಗೆ ಜಿಲ್ಲಾಡಳಿತ ಮತ್ತು ಸಚಿವ ರಮೇಶ ಜಾರಕಿಹೊಳಿ ಅವರೊಂದಿಗೆ ಚರ್ಚಿಸುವವರಿದ್ದರು . ಆದರೆ ಈ ನಿರ್ಣಯಕ್ಕೆ ಸ್ಥಳೀಯ ಕರವೇ ಕಾರ್ಯಕರ್ತರು ಉಸ್ತುವಾರಿ ಸಚಿವರ ಮತ್ತು ಸಚಿವ ಈಶ್ವರಪ್ಪ ನವರ ಮಧ್ಯಸ್ಥಿಕೆಗೆ ವಿರೋಧ ವ್ಯಕ್ತಪಡಿಸಿ ಸಂಗೋಳ್ಳಿ ರಾಯಣ್ಣನನ್ನು ಜಿಲ್ಲಾಡಳಿತ ಮತ್ತು ಹಾಲುಮತ ಸಮಾಜದವರು ಒಂದು ಕೋಮಿಗೆ ಸೀಮಿತಗೋಳಿಸುತ್ತಿದ್ದಾರೆ‌ ಸಂಗೋಳ್ಳಿ ರಾಯಣ್ಣ ಒಂದು ಕೋಮಿನ ಆಸ್ತಿಯಲ್ಲಾ ಇಡೀ ದೇಶದ ಆಸ್ತಿ ಎಂದು ಹಾಲುಮತ ಸಮಾದ ಮುಖಂಡ ರಾಜೇಂದ್ರ ಸಣ್ಣಕ್ಕಿ ಅವರನ್ನು ತರಾಠೆಗೆ ತಗೆದುಕೊಂಡಿದ್ದರು.
ಜಿಲ್ಲಾಡಳಿತ ಈ ವಿವಾದವನ್ನು ಬಗೆ ಹರಿಸುವ ಮೊದಲೆ ಕರವೇ ಕಾರ್ಯಕರ್ತರು ಮತ್ತು ಸಂಗೋಳ್ಳಿ ರಾಯಣ್ಣನ ಅಭಿಮಾನಿಗಳು ತಾನು ಬಯಸಿದ ಜಾಗದಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಜಿಲ್ಲಾಡಳಿತ ಸಂಗೋಳ್ಳಿ ರಾಯಣ್ಣನ ಅಭಿಮಾನಿಗಳ ಈ ಕ್ರಮವನ್ನು ಯಾವ ರೀತಿ ಸ್ವೀಕರಿಸಿಸುತ್ತದೆ ಎಂಬುದನ್ನು ಕಾದು ನೋಡಬೇಕಷ್ಠೆ

Related posts: