ಬೆಳಗಾವಿ:ಶಿವಾಜಿ ಮಹಾರಾಜ ಚೌಕದಲ್ಲಿ ರಾಯಣ್ಣ ಪ್ರತಿಷ್ಠಾಪನೆ : ಕನ್ನಡ ಮತ್ತು ಮರಾಠಿ ಮುಖಂಡರ ಸಭೆಯಲ್ಲಿ ಒಮ್ಮತದ ನಿರ್ಧಾರ :ಎಡಿಜಿಪಿ ಸಂಧಾನ ಸಫಲ
ಶಿವಾಜಿ ಮಹಾರಾಜ ಚೌಕದಲ್ಲಿ ರಾಯಣ್ಣ ಪ್ರತಿಷ್ಠಾಪನೆ : ಕನ್ನಡ ಮತ್ತು ಮರಾಠಿ ಮುಖಂಡರ ಸಭೆಯಲ್ಲಿ ಒಮ್ಮತದ ನಿರ್ಧಾರ :ಎಡಿಜಿಪಿ ಸಂಧಾನ ಸಫಲ
ನಮ್ಮ ಬೆಳಗಾವಿ ಇ – ವಾರ್ತೆ , ಬೆಳಗಾವಿ ಅ 28 :
ಕಳೆದ ಸುಮಾರು ಮೂರು ವರ್ಷಗಳಿಂದ ಬೆಳಗಾವಿ ಜಿಲ್ಲೆ ಪೀರನವಾಡಿ ಗ್ರಾಮದಲ್ಲಿ ವೀರ ಸಂಗೋಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ವಿಷಯದಲ್ಲಿ ನಡೆದಿದ್ದ ವಿವಾದಕ್ಕೆ ಶುಕ್ರವಾರ ನಡೆದ ಕನ್ನಡ ಮತ್ತು ಮರಾಠಿ ಭಾಷಿಕರ ಮುಖಂಡರ ಸಭೆಯಲ್ಲಿ ಒಮ್ಮತದ ನಿರ್ಧಾರವಾಗಿ ವಿವಾದಕ್ಕೆ ಸೌಹಾರ್ದಯುತ ತೆರೆ ಬಿದ್ದಿದೆ
ಸಂಗೋಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ವಿಷಯ ತಾರಕ್ಕೇರಿ ಗುರುವಾರದಂದು ತಡರಾತ್ರಿ ಕನ್ನಡ ಪರ ಸಂಘಟನೆಗಳ ಮುಖಂಡರು ಮತ್ತು ರಾಯಣ್ಣನ ಅಭಿಮಾನಿಗಳು ಪೀರನವಾಡಿ ಗ್ರಾಮದ ಶಿವಾಜಿ ಸರ್ಕಲ್ ನಲ್ಲಿ ವೀರ ಸಂಗೋಳ್ಳಿ ರಾಯಣ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ಈ ವಿಷಯ ಕಾಲ್ಗಿಚ್ಚಿನಂತೆ ಹರಡಿ ಪರಿಸ್ಥಿತಿವಿಕೋಪಕ್ಕೆ ತಿರುಗಿತ್ತು ಇದರ ಗಂಭೀರತೆ ಅರಿತ ರಾಜ್ಯ ಸರಕಾರ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಮರಕುಮಾರ ಪಾಂಡೆ ಅವರನ್ನು ಬೆಳಗಾವಿಗೆ ಕಳುಹಿಸಿ ಪರಿಸ್ಥಿತಿ ತಿಳಿದು ಇಬ್ಬರು ಭಾಷಿಕ ಮುಖಂಡರ ಸಭೆ ಕರೆದು ಸೌಹಾರ್ದಯುತವಾಗಿ ಪ್ರಕರಣವನ್ನು ಇತ್ಯರ್ಥಗೋಳಿಸುವಂತೆ ತಿಳಿಸಿತ್ತು. ಆ ಪ್ರಕಾರ ಎಡಿಜಿಪಿ ಅಮರಕುಮಾರ ಅವರು ಬೆಳಗಾವಿಗೆ ಆಗಮಿಸಿ ಕನ್ನಡ ಮತ್ತು ಮರಾಠಿ ಭಾಷಿಕರ ಮುಖಂಡರುಗಳ ಸಭೆ ನಡೆಸಿ ಅವರ ಅಭಿಪ್ರಾಯ ಸಂಗ್ರಹಿಸಿ ವಿವಾದವನ್ನು ಸೌಹಾರ್ದಯುತವಾಗಿ ಬಗೆ ಹರಿಸುವಲ್ಲಿ ಸಕ್ಸಸ್ ಆಗಿದ್ದಾರೆ.
ಸಭೆಯಲ್ಲಿ ಭಾಗವಹಿಸಿದ್ದ ಕನ್ನಡ ಮುಖಂಡರುಗಳು ಸ್ಥಾಪಿಸಿದ ಜಾಗದಲ್ಲಿಯೇ ಸಂಗೋಳ್ಳಿ ರಾಯಣ್ಣ ಫುಥಳಿ ಇರಬೇಕು ಮತ್ತು ಆ ವೃತ್ತಕ್ಕೆ ಶಿವಾಜಿ ಚೌಕ ಎಂಬ ನಾಮಕರಣ ಇರಬೇಕು ಎಂದು ನಿರ್ಣಯಕ್ಕೆ ಕನ್ನಡ ಮತ್ತು ಮರಾಠಿ ಭಾಷಿಕ ಮುಖಂಡರು ಸಮ್ಮತಿ ಸೂಚಿಸಿದ್ದರಿಂದ ವಿವಾದ ಬಗೆ ಹರಿದಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ