RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಕೃಷಿ ಪರಿಕರ ಮಾರಾಟಗಾರರ ಹಾಗೂ ರೈತ ಸಂಘದ ಮುಖಂಡರ ಸಭೆ

ಗೋಕಾಕ:ಕೃಷಿ ಪರಿಕರ ಮಾರಾಟಗಾರರ ಹಾಗೂ ರೈತ ಸಂಘದ ಮುಖಂಡರ ಸಭೆ 

ಕೃಷಿ ಪರಿಕರ ಮಾರಾಟಗಾರರ ಹಾಗೂ ರೈತ ಸಂಘದ ಮುಖಂಡರ ಸಭೆ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 29 :

 

ಇಲ್ಲಿಯ ತಾಲೂಕು ಪಂಚಾಯತಿ ಸಭಾ ಭವನದಲ್ಲಿ ಕೃಷಿ ಇಲಾಖೆಯ ನೇತ್ರತ್ವದಲ್ಲಿ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳ ಕೃಷಿ ಪರಿಕರ ಮಾರಾಟಗಾರರ ಹಾಗೂ ರೈತ ಸಂಘದ ಮುಖಂಡರ ಸಭೆಯು ಶನಿವಾರದಂದು ಜರುಗಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಚಿಕ್ಕೋಡಿ ಉಪವಿಭಾಗದ ಉಪಕೃಷಿ ನಿರ್ದೇಶಕ ಎಲ್.ಆಯ್.ರೂಡಗಿ ಅವರು ಮಾತನಾಡಿ, ಹೆಚ್ಚಿನ ದರಕ್ಕೆ ಯೂರಿಯಾ ಮಾರಾಟ ಮಾಡುವ ಕೃಷಿ ಪರಿಕರ ಮಾರಾಟಗಾರರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಅಲ್ಲದೇ ಅಂತÀವರ ಪರವಾನಿಗೆಯನ್ನು ರದ್ದು ಪಡಿಸಲಾಗುವುದು ಎಂದು ಹೇಳಿದರು.
ರೈತರಿಗೆ ಯೂರಿಯಾ ಜೊತೆಗೆ ಬೇರೆ ರಸಗೊಬ್ಬರಗಳಾದ 10:26:26 ಡಿ.ಎ.ಪಿ ಮತ್ತು ಇತರೆ ರಸಗೊಬ್ಬರಗಳನ್ನು 1 ತಿಂಗಳವರೆಗೆ ಲಿಂಕ ಮಾಡಿ ಮಾರಾಟ ಮಾಡಬಾರದು. ರೈತರಿಗೆ ಕಡ್ಡಾಯವಾಗಿ ರಶೀದಿಯನ್ನು ನೀಡಬೇಕು. ಪಿ.ಓ.ಎಸ್ ಮಶೀನಗಳನ್ನು ಕಡ್ಡಾಯವಾಗಿ ಉಪಯೋಗಿಸಬೇಕು. ಕೃಷಿ ಪರಿಕರ ಮಾರಾಟಗಾರರು ಇಲಾಖೆಗೆ ಒಳ್ಳೆಯ ಹೆಸರು ಬರುವ ಹಾಗೆ ಕಾರ್ಯನಿರ್ವಹಿಸಬೇಕು. ಅಲ್ಲದೇ ರೈತರೊಡನೆ ಸೌಜನ್ಯವಾಗಿ ವರ್ತಿಸಬೇಕು ಎಂದು ಎಚ್ಚರಿಕೆ ನೀಡಿದರು.
ಕೃಷಿ ಪರಿಕರ ಮಾರಾಟಗಾರರ ಪ್ರತಿನಿಧಿಗಳಾದ ಎಸ್.ಆರ್.ಹೆಗಡೆ ಮತ್ತು ಬಸವರಾಜ ಕಡಾಡಿ ಅವರು ಮಾತನಾಡಿ ಕೋರೋನಾ ಮಹಾಮಾರಿಯಿಂದ ಮಾರಾಟಗಾರರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ.ಲಾರಿಗಳ ಬಾಡಿಗೆ ಹಾಗೂ ಇತರೆ ವೆಚ್ಚಗಳನ್ನು ಪರಿಕರ ಮಾರಾಟಗಾರರೆ ಭರಿಸಬೇಕಾಗಿದೆ. ಅದರೂ ಅವುಗಳನೆಲ್ಲ ಬದಿಗೊತ್ತಿ ರೈತರಿಗೆ ಸಹಕಾರ ನೀಡಲಾಗುವುದು.ಯೂರಿಯಾವನ್ನು ಹೆಚ್ಚಿನ ದರಕ್ಕೆ (ಎಂ.ಆರ್.ಪಿ) ಕ್ಕಿಂತ ಹೆಚ್ಚಿಗೆ ಮಾಡಿದರೆ ಅಂತಹ ಪರಿಕರ ಮಾರಾಟಗಾರರ ಪರವಾನಿಗೆಯನ್ನು ಸಂಘದಿಂದಲೇ ರದ್ದು ಮಾಡಲು ಕೃಷಿ ಅಧಿಕಾರಿಗಳಿಗೆ ತಿಳಿಸಲಾಗುವುದು ಹಾಗೂ ಅಂತವರನ್ನು ಸಂಘದಿಂದ ಉಚ್ಚಾಟನೆ ಮಾಡಲಾಗುವುದು ಎಂದರು.
ಸಭೆಯಲ್ಲಿ ಮುಖಂಡರಾದ ಚೂನಪ್ಪ ಪೂಜೇರಿ ಮತ್ತು ಗಣಪತಿ ಈಳಿಗೇರ ಅವರು ಮಾತನಾಡಿ, ಯೂರಿಯಾ ಪೂರೈಕೆಗಾಗಿ ಕೃಷಿ ಇಲಾಖೆ ಅಧಿಕಾರಿಗಳು ಅವಿರತ ಶ್ರಮ ವಹಿಸುತ್ತಿದ್ದು, ಕೃಷಿ ಪರಿಕರ ಮಾರಾಟಗಾರರು ಯೂರಿಯಾ ರಸಗೊಬ್ಬರಕ್ಕೆ ರೈತರಿಗೆ ಹೆಚ್ಚಿನ ಬೆಲೆ ಪಡೆಯಬಾರದು ರೈತ ಸಂಘದ ಮಾತನಾಡಿ ಕೃಷಿ ಪರಿಕರ ಮಾರಾಟಗಾರರು ರೈತರಿಗೆ ಲಿಂಕ ಸೇರಿಸಿ ಯೂರಿಯಾವನ್ನು ಮಾರಾಟ ಮಾಡಬಾರದೆಂದು ಹೇಳಿದರು.
ಸಹಾಯಕ ಕೃಷಿ ನಿರ್ದೇಶಕ ಎಂ.ಎಂ.ನದಾಫ. ಮಾತನಾಡಿ ಯೂರಿಯಾ ಚೀಲದ ಮೇಲೆ ಇರುವ (ಎಂ.ಆರ್.ಪಿ) ದರವನ್ನು ರೈತರಿಂದ ಪಡೆಯಬೇಕು. ದರಪಟ್ಟಿ ಬೋರ್ಡ ಹಾಕಿರಬೇಕು ಮತ್ತು ಪರವಾಣಿಗೆ ರೈತರಿಗೆ ಕಾಣುವಂತೆ ಹಾಕಿರಬೇಕು. ಹೆಚ್ಚಿನ ದರಕ್ಕೆ ಮಾರಾಟ ಮಾಡಿದ್ದು ಕಂಡು ಬಂದರೆ ರಸಗೊಬ್ಬರ ಗುಣನಿಯಂತ್ರ ಕಾಯ್ದೆ-(1968) ಪ್ರಕಾರ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಅಲ್ಲದೇ ಕೃಷಿ ಪರಿಕರಗಳಾದ ಬೀಜ, ರಸಗೊಬ್ಬರ, ಕೀಟನಾಶಗಳು (ಇsseಟಿಣiಚಿಟ ಛಿommoಜiಣಥಿ ಚಿಛಿಣ 1955) ಅಡಿಯಲ್ಲಿ ಬರುತ್ತಿದ್ದು ಪರಿಕರ ಮಾರಾಟಗಾರರು ತಪ್ಪು ಮಾಡಿದರೆ ಸೂಕ್ರ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ರೈತ ಮುಖಂಡರಾದ ಭೀಮಶಿ ಗದಾಡಿ, ಗೋಪಾಲ ಕುಕನೂರ, ಕೃಷಿ ಪರಿಕರ ಮಾರಾಟಗಾರರ ಪ್ರತಿನಿಧಿ ಧನಂಜಯ ಹಟ್ಟಿ, ಗೋಕಾಕ ಗ್ರಾಮೀಣ ಪಿ.ಎಸ್.ಐ ನಾಗರಾಜ ಖಿಲಾರೆ ಕೃಷಿ ಅಧಿಕಾರಿಗಳಾದ ಶ್ರೀಮತಿ ಎಲ್.ಎನ್.ಕೌಜಗೇರಿ, ಕರಗಣ್ಣಿ, ಶಂಕರ ಹಳದಮನಿ, ವಿದ್ಯಾ ಸೇರಿದಂತೆ ರೈತರು ಇದ್ದರು.

Related posts: