RNI NO. KARKAN/2006/27779|Wednesday, November 6, 2024
You are here: Home » breaking news » ಗೋಕಾಕ:ಬಿಜೆಪಿ ಅರಭಾವಿ ಮಂಡಲಕ್ಕೆ ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳ ನೇಮಕ ಮಾಡಿದ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ

ಗೋಕಾಕ:ಬಿಜೆಪಿ ಅರಭಾವಿ ಮಂಡಲಕ್ಕೆ ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳ ನೇಮಕ ಮಾಡಿದ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ 

ಬಿಜೆಪಿ ಅರಭಾವಿ ಮಂಡಲಕ್ಕೆ ವಿವಿಧ ಮೋರ್ಚಾಗಳಿಗೆ ಪದಾಧಿಕಾರಿಗಳ ನೇಮಕ ಮಾಡಿದ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ

 

ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಸಂಸದ ಈರಣ್ಣಾ ಕಡಾಡಿ ಮಾರ್ಗದರ್ಶನ

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 29 :

 

ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅವರ ಮಾರ್ಗದರ್ಶನದಲ್ಲಿ ಅರಭಾವಿ ಮಂಡಲಕ್ಕೆ ವಿವಿಧ ಮೋರ್ಚಾಗಳ ಪದಾಧಿಕಾರಿಗಳನ್ನಾಗಿ ಪಕ್ಷದ ಜಿಲ್ಲಾಧ್ಯಕ್ಷ ಮತ್ತು ಮಾಜಿ ಶಾಸಕ ಸಂಜಯ ಪಾಟೀಲ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಅರಭಾವಿ ಮಂಡಲ ಅಧ್ಯಕ್ಷರಾಗಿ ಮೂಡಲಗಿಯ ಮಹಾದೇವ ಶೆಕ್ಕಿ, ಪ್ರಧಾನ ಕಾರ್ಯದರ್ಶಿಗಳಾಗಿ ನಾಗನೂರಿನ ಪರಸಪ್ಪ ಬಬಲಿ, ಶಿವಾಪೂರ(ಹ) ಗ್ರಾಮದ ಮಹಾಂತೇಶ ಕುಡಚಿ, ಉಪಾಧ್ಯಕ್ಷರಾಗಿ ಹಳ್ಳೂರಿನ ಭೀಮಶಿ ಮಗದುಮ್ಮ, ಯಾದವಾಡದ ಲಕ್ಷ್ಮೀ ಮಾಳೇದ, ಬಳೋಬಾಳದ ಸುನೀಲ ಈರೇಶನವರ, ರಾಜಾಪೂರದ ಕೆಂಪಣ್ಣಾ ಗಡಹಿಂಗ್ಲಜ್, ಮೂಡಲಗಿಯ ಸತೀಶ ಲಂಕೆಪ್ಪನವರ, ದುರದುಂಡಿಯ ಇಂದಿರಾ ಅಂತರಗಟ್ಟಿ, ಕಾರ್ಯದರ್ಶಿಗಳಾಗಿ ಕುಲಗೋಡದ ಸುಶೀಲಾ ಮಳಲಿ, ಚಿಗಡೊಳ್ಳಿಯ ಕಸ್ತೂರಿ ಗಿರಣಿ, ಬಡಿಗವಾಡದ ಲಕ್ಷ್ಮೀ ಸನದಿ, ಲೋಳಸೂರಿನ ಯಮನಪ್ಪ ಬಾಗಾಯಿ, ಮೂಡಲಗಿಯ ಪಾಂಡು ಮಹೇಂದ್ರಕರ, ಕಲ್ಲೋಳಿಯ ಮಹಾದೇವ ಮದಭಾವಿ, ಕೋಶಾಧ್ಯಕ್ಷರಾಗಿ ಮೂಡಲಗಿಯ ಕೃಷ್ಣಾ ನಾಶಿ ಹಾಗೂ ಕಾರ್ಯಾಲಯದ ಕಾರ್ಯದರ್ಶಿಯಾಗಿ ಸುಣಧೋಳಿ ಗ್ರಾಮದ ಸಿದ್ಧಾರೂಢ ಕಮತಿ ಅವರು ನೇಮಕಗೊಂಡಿದ್ದಾರೆ.
ರೈತ ಮೋರ್ಚಾ : ಅರಭಾವಿ ಮಂಡಲ ರೈತ ಮೋರ್ಚಾ ಅಧ್ಯಕ್ಷರಾಗಿ ಕುಲಗೋಡದ ತಮ್ಮಣ್ಣ ದೇವರ, ಪ್ರಧಾನ ಕಾರ್ಯದರ್ಶಿಯಾಗಿ ಹಳ್ಳೂರಿನ ಶ್ರೀಕಾಂತ ಕೌಜಲಗಿ, ಉಪಾಧ್ಯಕ್ಷರಾಗಿ ನಾಗನೂರಿನ ಸುರೇಶ ಮಠಪತಿ, ಯಾದವಾಡದ ಆನಂದ ರೂಗಿ, ಸುರೇಶ ವಣಕಿ, ಹುಣಶ್ಯಾಳ ಪಿಜಿಯ ಬಸವರಾಜ ನಿಡಗುಂದಿ, ಕಾರ್ಯದರ್ಶಿಗಳಾಗಿ ಮೂಡಲಗಿಯ ಹನಮಂತ ಸತರಡ್ಡಿ, ಕಲ್ಲೋಳಿಯ ಅಡಿವೆಪ್ಪ ಕುರಬೇಟ, ಖಾನಟ್ಟಿಯ ಚೇತನ ರಡ್ಡೇರಟ್ಟಿ, ಅರಭಾವಿಯ ಭೀಮಪ್ಪ ಬಂಗಾರಿ ಮತ್ತು ಖಜಾಂಚಿಯಾಗಿ ರಂಗಾಪೂರದ ಮಹಾದೇವ ಮಸರಗುಪ್ಪಿ ಅವರು ನೇಮಕಗೊಂಡಿದ್ದಾರೆ.
ಯುವ ಮೋರ್ಚಾ : ಅರಭಾವಿ ಮಂಡಲ ಯುವ ಮೋರ್ಚಾ ಅಧ್ಯಕ್ಷರಾಗಿ ಕಲ್ಲೋಳಿಯ ಪ್ರಮೋದ ನುಗ್ಗಾನಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಹಳ್ಳೂರಿನ ಸಿದ್ದು ದುರದುಂಡಿ, ಉಪಾಧ್ಯಕ್ಷರಾಗಿ ಬೆಟಗೇರಿಯ ಬಸವರಾಜ ಪ. ಕೋಣಿ, ಕೌಜಲಗಿಯ ಮಂಜು ಗೋವಿಂದಪ್ಪಗೋಳ, ಹುಣಶ್ಯಾಳ ಪಿಜಿಯ ಅಜೀತ ಪಾಟೀಲ, ಖಾನಟ್ಟಿಯ ಮದನ ದಾನನ್ನವರ, ಕಾರ್ಯದರ್ಶಿಗಳಾಗಿ ರಾಜಾಪೂರದ ಸಿದ್ದು ಯಕ್ಕುಂಡಿ, ಮೂಡಲಗಿಯ ಸುರೇಶ ಅಂತರಗಟ್ಟಿ, ಅರಭಾವಿಯ ಮಂಜುನಾಥ ಝಲ್ಲಿ, ರಾಜಾಪೂರದ ಅಡಿವೆಪ್ಪ ಮುತ್ನಾಳ ಹಾಗೂ ಖಜಾಂಚಿಯಾಗಿ ಗುರ್ಲಾಪೂರದ ನಾಗರಾಜ ಯದ್ದಲಗುಡ್ಡ ನೇಮಕಗೊಂಡಿದ್ದಾರೆ.
ಓಬಿಸಿ ಮೋರ್ಚಾ : ಅರಭಾವಿ ಮಂಡಲದ ಓಬಿಸಿ ಮೋರ್ಚಾ ಅಧ್ಯಕ್ಷರಾಗಿ ವೆಂಕಟಾಪೂರ ಸಂಗಣ್ಣಾ ಕಂಠಿಕಾರ, ಪ್ರಧಾನ ಕಾರ್ಯದರ್ಶಿಯಾಗಿ ಹುಣಶ್ಯಾಳ ಪಿವಾಯ್ ಗ್ರಾಮದ ವೆಂಕನಗೌಡ ಪಾಟೀಲ, ಉಪಾಧ್ಯಕ್ಷರಾಗಿ ಬಡಿಗವಾಡದ ಶಿವು ಕುಡ್ಡೆಮ್ಮಿ, ಹೊನಕುಪ್ಪಿಯ ಸುರೇಶ ಸಣ್ಣಕ್ಕಿ, ತುಕ್ಕಾನಟ್ಟಿಯ ಪುಂಡಲೀಕ ಅರಭಾವಿ, ಸಂಗನಕೇರಿಯ ಅಶೋಕ ಚಿಕ್ಕೋಡಿ, ಕಾರ್ಯದರ್ಶಿಗಳಾಗಿ ಕಲ್ಲೋಳಿಯ ಅಶೋಕ ಮಕ್ಕಳಗೇರಿ, ಗಣೇಶವಾಡಿಯ ಶಿವಲಿಂಗ ಪೂಜೇರಿ, ಬೆಟಗೇರಿಯ ವಿಠ್ಠಲ ಕೋಣಿ, ತಪಸಿಯ ವಿಠ್ಠಲ ಕುಲಗೋಡ ಹಾಗೂ ಖಜಾಂಚಿಯಾಗಿ ಗೋಸಬಾಳದ ಸತ್ತೆಪ್ಪ ಹೊಸಟ್ಟಿ ಅವರು ನೇಮಕಗೊಂಡಿದ್ದಾರೆ.
ಎಸ್‍ಸಿ ಮೋರ್ಚಾ : ಅರಭಾವಿ ಮಂಡಲ ಎಸ್‍ಸಿ ಮೋರ್ಚಾ ಅಧ್ಯಕ್ಷರಾಗಿ ನಾಗಪ್ಪ ಕುದರಿ, ಪ್ರಧಾನ ಕಾರ್ಯದರ್ಶಿಯಾಗಿ ರಾಜಾಪೂರದ ವಿಲಾಸ ಗಾಡಿವಡ್ಡರ, ಉಪಾಧ್ಯಕ್ಷರಾಗಿ ಯಾದವಾಡದ ಬಸವರಾಜ ಬೆಣಗಿ, ಅರಭಾವಿಯ ಕೃಷ್ಣಾ ಬಂಡಿವಡ್ಡರ, ಮೂಡಲಗಿಯ ರಾಜು ಭಜಂತ್ರಿ, ಮುನ್ಯಾಳದ ಮಹಾದೇವ ಮಾಸನ್ನವರ, ಕಾರ್ಯದರ್ಶಿಗಳಾಗಿ ಕಳ್ಳಿಗುದ್ದಿಯ ಗೋಪಾಲ ಹರಿಜನ, ಮೆಳವಂಕಿಯ ಯಲ್ಲಪ್ಪ ಭಜಂತ್ರಿ, ಖಾನಟ್ಟಿಯ ರಮೇಶ ಚಂದರಗಿ, ಕುಲಗೋಡದ ಭೀಮಶಿ ಭಜಂತ್ರಿ ಮತ್ತು ಖಜಾಂಚಿಯಾಗಿ ಮೂಡಲಗಿಯ ನಂಜುಂಡಿ ಸರ್ವಿ ಅವರು ನೇಮಕಗೊಂಡಿದ್ದಾರೆ.
ಎಸ್‍ಟಿ ಮೋರ್ಚಾ : ಅರಭಾವಿ ಮಂಡಲ ಎಸ್‍ಟಿ ಮೋರ್ಚಾ ಅಧ್ಯಕ್ಷರಾಗಿ ಶಿವಾಪೂರ(ಹ) ಗ್ರಾಮದ ಯಲ್ಲಾಲಿಂಗ ವಾಳದ, ಪ್ರಧಾನ ಕಾರ್ಯದರ್ಶಿಯಾಗಿ ಕಪರಟ್ಟಿಯ ಬಸು ನಾಯಿಕ, ಉಪಾಧ್ಯಕ್ಷರಾಗಿ ಕೆಮ್ಮನಕೋಲದ ಮಾರುತಿ ಸಾಯನ್ನವರ, ಉದಗಟ್ಟಿಯ ಮಹಾದೇವ ಗೋಡೇರ, ವಡೇರಹಟ್ಟಿಯ ಕೃಷ್ಣಾ ನಂದಿ, ತಳಕಟ್ನಾಳದ ಲಕ್ಷ್ಮಣ ಬಾಣಿ, ಕಾರ್ಯದರ್ಶಿಗಳಾಗಿ ಉದಗಟ್ಟಿಯ ಪಾಂಡು ದೊಡಮನಿ, ಸಜ್ಜಿಹಾಳದ ಕಲ್ಲಪ್ಪ ಕುದರಿ, ಕಲ್ಲೋಳಿಯ ಹನಮಂತ ನಂದಿ, ಕೆಮ್ಮನಕೋಲದ ಶಂಕರ ಸಾಯನ್ನವರ ಮತ್ತು ಖಜಾಂಚಿಯಾಗಿ ಗುಜನಟ್ಟಿಯ ಸಿದ್ಧಾರೂಢ ಜಮನಾಳ ಅವರು ನೇಮಕಗೊಂಡಿದ್ದಾರೆ.
ಅಲ್ಪಸಂಖ್ಯಾತ ಮೋರ್ಚಾ : ಅರಭಾವಿ ಮಂಡಲ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾಗಿ ಅರಭಾವಿಯ ಇಕ್ಬಾಲ್ ಸರ್ಕಾವಸ್, ಪ್ರಧಾನ ಕಾರ್ಯದರ್ಶಿಯಾಗಿ ಹುಣಶ್ಯಾಳ ಪಿಜಿಯ ಶಬ್ಬೀರ ತಾಂಬಿಟಗಾರ, ಉಪಾಧ್ಯಕ್ಷರಾಗಿ ಕೌಜಲಗಿಯ ಜಾಕೀರ ಜಮಾದಾರ, ಉದಗಟ್ಟಿಯ ರಾಜೇಸಾಬ ಬಳಗಾರ, ಪಟಗುಂದಿಯ ಸಾವಂತ ಹೊಸಮನಿ, ಹಳ್ಳೂರಿನ ಶ್ರೀಕಾಂತ ಸಪ್ತಸಾಗರ, ಕಾರ್ಯದರ್ಶಿಗಳಾಗಿ ಯಾದವಾಡದ ಹನೀಫ ರಕೀಪದಾರ, ಹಳ್ಳೂರಿನ ಇಬ್ರಾಹಿಂ ಮುಜಾವರ, ಮೂಡಲಗಿಯ ಮಲೀಕಸಾಬ ಡಾಂಗೆ, ಉದಗಟ್ಟಿಯ ಮಲ್ಲಿಕಜಾನ್ ಮಿರ್ಜಾನಾಯ್ಕ ಮತ್ತು ಖಜಾಂಚಿಯಾಗಿ ಸಂಗನಕೇರಿಯ ಇಬ್ರಾಹಿಂ ಮುಲ್ಲಾ ಅವರು ನೇಮಕಗೊಂಡಿದ್ದಾರೆ.
ಮಹಿಳಾ ಮೋರ್ಚಾ : ಅರಭಾವಿ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಹಳ್ಳೂರಿನ ವಾಸಂತಿ ತೇರದಾಳ, ಪ್ರಧಾನ ಕಾರ್ಯದರ್ಶಿಯಾಗಿ ನಾಗನೂರಿನ ಕಮಲಾದೇವಿ ಬಡಗಾಂವಿ, ಉಪಾಧ್ಯಕ್ಷರಾಗಿ ಮೂಡಲಗಿಯ ದ್ರಾಕ್ಷಾಯಣಿ ಸವದಿ, ಧರ್ಮಟ್ಟಿಯ ಪ್ರೇಮಾ ಸನದಿ, ಹುಣಶ್ಯಾಳ ಪಿಜಿಯ ಸುಜಾತಾ ಹುಡೇದ, ತಪಸಿಯ ಗೌರವ್ವ ಸುಳ್ಳನವರ, ಕಾರ್ಯದರ್ಶಿಗಳಾಗಿ ದುರದುಂಡಿಯ ಸುಮಿತ್ರಾ ಅಂತರಗಟ್ಟಿ, ಯಾದವಾಡದ ಮಹಾನಂದಾ ಬೆಳಗಲಿ, ನಾಗನೂರಿನ ದಾನವ್ವ ಕಂಠಿಕಾರಮಠ, ಲೋಳಸೂರಿನ ಶಿವಕ್ಕಾ ಕುರಿ ಮತ್ತು ಖಜಾಂಚಿಯಾಗಿ ಸರಸ್ವತಿ ಪೂಜೇರಿ ಅವರು ನೇಮಕಗೊಂಡಿದ್ದಾರೆ.
ಅರಭಾವಿ ಮಂಡಲದ ವಿವಿಧ ಮೋರ್ಚಾಗಳಿಗೆ ನೇಮಕರಾದ ನೂತನ ಪದಾಧಿಕಾರಿಗಳನ್ನು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮತ್ತು ಸಂಸದ ಈರಣ್ಣಾ ಕಡಾಡಿ ಅವರು ಅಭಿನಂದಿಸಿದ್ದಾರೆ. ಜೊತೆಗೆ ಪಕ್ಷದ ಎಲ್ಲ ಕಾರ್ಯಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕಾರ್ಯನಿರ್ವಹಿಸುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮತ್ತು ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ ಅವರು ಹೊಸ ಪದಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Related posts: