ಗೋಕಾಕ:ಇನ್ನೂ ಎರಡು ತಿಂಗಳು ಬೆಟಗೇರಿ ರವಿವಾರದ ಸಂತೆ ರದ್ದು :ಈಶ್ವರ ಬಳಿಗಾರ
ಇನ್ನೂ ಎರಡು ತಿಂಗಳು ಬೆಟಗೇರಿ ರವಿವಾರದ ಸಂತೆ ರದ್ದು :ಈಶ್ವರ ಬಳಿಗಾರ
ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಸೆ 5 :
ಕರೊನಾ ಸೋಂಕು ಹರಡುವಿಕೆ ಸಂಪೂರ್ಣ ನಿಯಂತ್ರಣದಲ್ಲಿಲ್ಲದ ಕಾರಣ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಪ್ರತಿ ಭಾನುವಾರ ನಡೆಯುತ್ತಿದ್ದ ವಾರದ ಸಂತೆಯನ್ನು ಇನ್ನೂ ಎರಡು ತಿಂಗಳು ಸೆಪ್ಟಂಬರ್ ಮತ್ತು ನವ್ಹಂಬರ್ ತಿಂಗಳ ಪೂರ್ಣ ಅವಧಿಯಲ್ಲಿ ಬರುವ ಎಲ್ಲಾ ರವಿವಾರ ದಿನದ ವಾರದ ಸಂತೆಯನ್ನು ಸಂಪೂರ್ಣ ರದ್ದು ಮಾಡಲಾಗಿದೆ ಎಂದು ಸ್ಥಳೀಯ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಈಶ್ವರ ಬಳಿಗಾರ ತಿಳಿಸಿದ್ದಾರೆ.
ಶನಿವಾರ ಸೆ.5ರಂದು ಪತ್ರಿಕಾ ಪ್ರಕಟನೆ ನೀಡಿರುವ ಅವರು, ಸ್ಥಳೀಯ ಹಿರಿಯ ನಾಗರಿಕರ ಮಾರ್ಗದರ್ಶನದಂತೆ ಪ್ರತಿ ವಾರ ರವಿವಾರ ನಡೆಯುತ್ತಿದ್ದ ಸಂತೆಯನ್ನು ರದ್ದುಗೊಳಿಸಿದ ಹಿನ್ನಲೆಯಲ್ಲಿ, ದಿನ ಬಳಕೆಯ ಗೃಹಪಯೋಗಿ ವಿವಿಧ ವಸ್ತುಗಳನ್ನು ಮಾರಾಟ ಮಾಡುವ ಬೀದಿ ವ್ಯಾಪಾರಸ್ಥರು, ಹಣ್ಣು, ತರಕಾರಿ ಮಾರಾಟಗಾರರು, ರೈತರು ಗ್ರಾಮದಲ್ಲಿರುವ ಮನೆ ಮನೆಗೆ ಹೋಗಿ ಹಣ್ಣು, ತರಕಾರಿ, ದಿನ ಬಳಕೆಯ ವಸ್ತುಗಳನ್ನು ಮಾರಾಟ ಮಾಡಬೇಕು. ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸ್ವಯಂ ಪ್ರೇರಿತರಾಗಿ ಸ್ಥಳೀಯರು ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಅನುಸರಿಸಬೇಕು. ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗ್ರಾಮಸ್ಥರು, ನಿತ್ಯ ಗೃಹಪಯೋಗಿ ವಿವಿಧ ವಸ್ತುಗಳ ಬೀದಿ ವ್ಯಾಪಾರಸ್ಥರು ಸಹಕರಿಸಬೇಕು ಎಂದು ಗ್ರಾಪಂ ಮಾಜಿ ಅಧ್ಯಕ್ಷ ಈಶ್ವರ ಬಳಿಗಾರ ಮನವಿ ಮಾಡಿಕೊಂಡಿದ್ದಾರೆ.