RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ಶ್ರೇಷ್ಠವಾದ ಅನ್ನದಾನದಲ್ಲಿ ಅಡುಗೆ ತಯಾರಕರ ಪಾತ್ರ ಮಹತ್ವದಾಗಿದೆ

ಗೋಕಾಕ:ಶ್ರೇಷ್ಠವಾದ ಅನ್ನದಾನದಲ್ಲಿ ಅಡುಗೆ ತಯಾರಕರ ಪಾತ್ರ ಮಹತ್ವದಾಗಿದೆ 

ಶ್ರೇಷ್ಠವಾದ ಅನ್ನದಾನದಲ್ಲಿ ಅಡುಗೆ ತಯಾರಕರ ಪಾತ್ರ ಮಹತ್ವದಾಗಿದೆ

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಸೆ 7 :

 

ಎಲ್ಲ ದಾನಗಳಲ್ಲಿ ಶ್ರೇಷ್ಠವಾದ ಅನ್ನದಾನದಲ್ಲಿ ಅಡುಗೆ ತಯಾರಕರ ಪಾತ್ರ ಮಹತ್ವದಾಗಿದೆ ಎಂದು ಕರವೇ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು.
ಸೋಮವಾರದಂದು ನಗರದ ಕಾಡಸಿದ್ದೇಶ್ವರ ಮಠದಲ್ಲಿ ಗೋಕಾಕ ತಾಲೂಕಾ ಅಡುಗೆ ತಯಾರಕರ ಸಂಘವನ್ನು ಉಧ್ಘಾಟಿಸಿ ಅವರು ಮಾತನಾಡಿ, ಎಲ್ಲ ಕಾರ್ಯಕ್ರಮಗಳಲ್ಲಿ ಶುಚಿ-ರುಚಿಯಾದ ಭೋಜನವನ್ನು ಸಿದ್ದಪಡಿಸಿ ಜನತೆಗೆ ಊಣಬಡಿಸಿ ಅವುಗಳ ಮಹತ್ವವನ್ನು ಹೆಚ್ಚಿಸುವಂತಹ ಶ್ರೇಷ್ಠ ಕಾರ್ಯ ಅಡುಗೆ ತಯಾರಕರದ್ದಾಗಿದೆ. ತಮ್ಮ ಶ್ರೇಷ್ಠತೆಯಿಂದಲೇ ಜನರ ಮನದಲ್ಲಿ ಸದಾ ತಾವು ಇದ್ದೀರಿ ಎಂದು ತಿಳಿಸಿದರು.
ಅಡುಗೆ ಮಾಡುವುದು ಒಂದು ಕಲೆಯಾಗಿದ್ದು ತಮ್ಮ ನೈಪುಣ್ಯತೆಯಿಂದ ಗುಣಮಟ್ಟದ ಆಹಾರವನ್ನು ಸಿದ್ದಪಡಿಸಿ ಆಧುನಿಕ ಶೈಲಿಯೊಂದಿಗೆ ನಮ್ಮ ಸಾಂಪ್ರದಾಯಿಕ ಆಹಾರ ಪದ್ದತಿಯನ್ನು ಇಂದಿನ ಯುವ ಪೀಳಿಗೆ ಪರಿಚಯಿಸಿ ಅವರ ಆರೋಗ್ಯ ರಕ್ಷಣೆಗೂ ಮುಂದಾಗಬೇಕು. ರುಚಿಯಾದ ಅಡುಗೆ ತಯ್ಯಾರಿಯಲ್ಲಿ ನಮ್ಮ ರಾಜ್ಯ ದೇಶದಲ್ಲಿ ಮುಂಚೂಣಿಯಲ್ಲಿದ್ದು ಅದರ ಘನತೆಯನ್ನು ಉಳಿಸಿ ಇನ್ನೂ ಹೆಚ್ಚಿಸುವ ಕಾರ್ಯವನ್ನು ಮಾಡಬೇಕು. ಈ ಸಂಘದ ಮೂಲಕ ತಮ್ಮ ಬದುಕನ್ನು ಕಟ್ಟಿಕೊಂಡು ಜನತೆಗೂ ಸವಿಯಾದ ಭೋಜನವನ್ನು ಉಣಬಡಿಸುವಂತೆ ಕರೆ ನೀಡಿದರು.
ವೇದಿಕೆ ಮೇಲೆ ಗೋಕಾಕ ಸಪ್ಲಾಯರ್ಸ್‍ನ ಬಸವರಾಜ ಹತ್ತರಕಿ, ಗಣ್ಯರಾದ ನಾರಾಯಣ ವಾಗುಲೆ, ಸಿದ್ದಲಿಂಗಯ್ಯ ಹುಕ್ಕೇರಿಮಠ, ಸಂಘದ ಅಧ್ಯಕ್ಷ ಆನಂದ ಪಟೋಳಿ, ಪದಾಧಿಕಾರಿಗಳಾದ ಸತ್ತೆಪ್ಪ ಬನ್ನಿಶೆಟ್ಟಿ, ಬಸವರಾಜ ದೇಸಾಯಿ, ಅಡಿವೆಪ್ಪ ಸಂಗನ್ನವರ, ಸುರೇಶ ಚಂದರಗಿ, ಪ್ರಭು ಹಿರೇಮಠ ಎಸ್.ಕೆ.ಮಠದ ಇದ್ದರು.

Related posts: