ಗೋಕಾಕ:ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಆಗ್ರಹಿಸಿ ದಿ.21ರಂದು ಬೆಂಗಳೂರುನಲ್ಲಿ ಪ್ರತಿಭಟನೆ
ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಆಗ್ರಹಿಸಿ ದಿ.21ರಂದು ಬೆಂಗಳೂರುನಲ್ಲಿ ಪ್ರತಿಭಟನೆ
ನಮ್ಮ ಬೆಳಗಾವಿ ಇ – ವಾರ್ತೆ,ಗೋಕಾಕ ಸೆ 15 :
ಭೂ ಸುಧಾರಣಾ ಕಾಯ್ದೆ ಸೇರಿದಂತೆ ರೈತರಿಗೆ ಮಾರಕವಾಗಿರುವ ಕಾಯ್ದೆಗಳ ತಿದ್ದುಪಡಿಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ದಿ. 21 ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಬೃಹತ್ ಸತ್ಯಾಗ್ರಹದಲ್ಲಿ ಬೆಳಗಾವಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತ ಭಾಂದವರು ಪಾಲ್ಗೊಳ್ಳಬೇಕೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಸತ್ತೆಪ್ಪ ಮಲ್ಲಾಪೂರೆ ಕರೆ ನೀಡಿದರು.
ಬುಧವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರೈತರ ಮಾರಕವಾಗಿರುವ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಾಲ್ಗೊಂಡು ಸತ್ಯಾಗ್ರಹ ಯಶಸ್ವಿಗೊಳಿಸುವಂತೆ ವಿನಂತಿಸಿದರಲ್ಲದೇ ಕಳೆದ ವರ್ಷ ಪ್ರವಾಹದಿಂದ ಹಾನಿಗೊಳಗಾದ ಆಸ್ತಿ ಹಾಗೂ ಬೆಳೆ ಹಾನಿಯನ್ನು ಕೂಡಲೇ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಲಾಗುವುದೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗೋಕಾಕ ತಾಲೂಕಾ ಸಮಿತಿಯನ್ನು ಪುನರಚಿಸಲಾಯಿತು. ರೈತ ಸಂಘದ ತಾಲೂಕಾಧ್ಯಕ್ಷರನ್ನಾಗಿ ಮಂಜುನಾಥ ಪೂಜೇರಿ, ಉಪಾಧ್ಯಕ್ಷರಾಗಿ ಮಾರುತಿ ನಾಯಿಕ, ಕಾರ್ಯಾಧ್ಯಕ್ಷರಾಗಿ ಯಲ್ಲಪ್ಪ ತಿಗಡಿ, ಕಾರ್ಯದರ್ಶಿಗಳಾಗಿ ಸಿದ್ರಾಮ ಪೂಜೇರಿ, ಅಮರ ಮಡಿವಾಳರ, ಲಗಮಣ್ಣ ಕರಿಗಾರ, ಹಸಿರು ಸೇನೆಯ ತಾಲೂರ್ಕಾಧ್ಯಕ್ಷರಾಗಿ ಸಿದ್ದಲಿಂಗ ಪೂಜೇರಿ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ರೈತ ಸಂಘದ ರಾಜ್ಯ ಕಾರ್ಯದರ್ಶಿ ಭೀಮಶಿ ಗದಾಡಿ, ರಾಜ್ಯ ಸಂಚಾಲಕ ಗಣಪತಿ ಈಳಿಗೇರ, ಜಿಲ್ಲಾ ಮುಖಂಡರಾದ ಗೋಪಾಲ ಕುಕನೂರ, ಭರಮು ಖೇಮಲಾಪೂರ, ತಾಲೂಕು ಮುಖಂಡರಾದ ಸಾತಪ್ಪ ಸಾತಗೌಡ, ರಮೇಶ ಗೂದಿಗೊಪ್ಪ, ಜೈನುಲ್ಲಾ ಹಾಥಿ, ಶಂಕರ ಧಾರವಾಡಿ, ಅಲ್ಲಪ್ಪ ಖನಗಾಂವ ಸೇರಿದಂತೆ ಅನೇಕರು ಇದ್ದರು.