RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಆನ್‍ಲೈನ್ ಕಲಾಶಿಬಿರಕ್ಕೆ ನಗರದ ಕಲಾವಿದ ಎಮ್, ಆರ್,ಹೊಸಕೋಟಿ ಹಾಗೂ ನಿಪ್ಪಾಣಿಯ ಗಿರೀಶ ಆದನ್ನವರ ಆಯ್ಕೆ.

ಗೋಕಾಕ:ಆನ್‍ಲೈನ್ ಕಲಾಶಿಬಿರಕ್ಕೆ ನಗರದ ಕಲಾವಿದ ಎಮ್, ಆರ್,ಹೊಸಕೋಟಿ ಹಾಗೂ ನಿಪ್ಪಾಣಿಯ ಗಿರೀಶ ಆದನ್ನವರ ಆಯ್ಕೆ. 

ಆನ್‍ಲೈನ್ ಕಲಾಶಿಬಿರಕ್ಕೆ ನಗರದ ಕಲಾವಿದ ಎಮ್, ಆರ್,ಹೊಸಕೋಟಿ ಹಾಗೂ ನಿಪ್ಪಾಣಿಯ ಗಿರೀಶ ಆದನ್ನವರ ಆಯ್ಕೆ.

 

 
ನಮ್ಮ ಬೆಳಗಾವಿ – ವಾರ್ತೆ – ಗೋಕಾಕ ಸೆ 17

 

 

 
ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರು, ಕೊರೋನಾ ಸಂಕಷ್ಟದಲ್ಲಿರುವ ಚಿತ್ರಕಲಾವಿದರ ಚೇತರಿಕೆ ಹಾಗೂ ಕಲಾಚಟುವಟಿಕೆ ಕ್ರೀಯಾಶೀಲಗೊಳಿಸುವ ದೃಷ್ಟಿಯಿಂದ, ರಾಜ್ಯಮಟ್ಟದ ಆನ್‍ಲೈನ್ ಕಲಾಶಿಬಿರವನ್ನು ಹಮ್ಮಿಕೊಂಡಿದೆ. ಗೋಕಾಕದ ಕಲಾವಿದ ಎಮ್, ಆರ್,ಹೊಸಕೋಟಿ ಹಾಗೂ ನಿಪ್ಪಾಣಿಯ ಗಿರೀಶ ಆದನ್ನವರ ಈ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ ಎಂದು ಅಕಾಡೆಮಿ ಸದಸ್ಯ ಪ್ರಾ ಜಯಾನಂದ ಮಾದರ ತಿಳಿಸಿದ್ದಾರೆ

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಇದೆ 18 ರಿಂದ 25/09/2020 ವರೆಗೆ ಎಂಟು ದಿನಗಳ ವರೆಗೆ ಕಲಾವಿದರು ಸಾಮಾಜಿಕ ಅಂತರ ಕಾಯ್ದುಕೊಂಡು ಕಲಾವಿದರು ತಮ್ಮ ಆರ್ಟ ಸ್ಟುಡಿಯೋಗಳಲ್ಲಿಯೇ ಕುಳಿತು ವರ್ಣ ಚಿತ್ರಗಳನ್ನು ರಚಿಸಲಿದ್ದಾರೆ. ರಾಜ್ಯಾದ್ಯಂತ ಒಟ್ಟು 60 ಜನ ಕಲಾವಿದರು ಈ ರಾಜ್ಯಮಟ್ಟದ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದು ಬೆಳಗಾವಿ ಜಿಲ್ಲೆಯ ಈ ಇಬ್ಬರು ಕಲಾವಿದರು ಈಗಾಗಲೆ ಬೆಂಗಳೂರು, ಮುಂಬಯಿ, ಪೂನಾ, ಹಾಗೂ ದೆಹಲಿಯಲ್ಲಿ ತಮ್ಮ ಕಲಾಕೃತಿಗಳ ಪ್ರದರ್ಶನಗೈದು ತಮ್ಮ ಸೃಜನಶೀಲ ಕಲೆಯ ಪ್ರತಿಭೆ ಮೆರದಿದ್ದಾರೆ, ಸಮಕಾಲೀನ ಕಲಾಶೈಲಿಯ ಈ ಕಲಾವಿದರು ರಾಷ್ಟ್ರಮಟ್ಟದ ಮುನ್ನಣೆ ಪಡೆದಿದ್ದಾರೆಂದು ಅಕಾಡೆಮಿ ಸದಸ್ಯ ಪ್ರಾ ಜಯಾನಂದ ಮಾದರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

Related posts: