ಗೋಕಾಕ:ಪ್ರತ್ಯೇಕ ಗ್ರಾಮ ಪಂಚಾಯತಿಗೆ ಆಗ್ರಹ : ಸಹಕಾರಿ ಸಚಿವರಿಗೆ ಮನವಿ ಸಲ್ಲಿಸಿದ ಕೆಂಚಾನಟ್ಟಿ ಗ್ರಾಮಸ್ಥರು
ಪ್ರತ್ಯೇಕ ಗ್ರಾಮ ಪಂಚಾಯತಿಗೆ ಆಗ್ರಹ : ಸಹಕಾರಿ ಸಚಿವರಿಗೆ ಮನವಿ ಸಲ್ಲಿಸಿದ ಕೆಂಚಾನಟ್ಟಿ ಗ್ರಾಮಸ್ಥರು
ಗೋಕಾಕ ಸೆ 2: ಪ್ರತ್ಯೇಕ ಗ್ರಾಮ ಪಂಚಾಯತಿಗೆ ಆಗ್ರಹಿಸಿ ಚಿಕ್ಕೋಡಿ ತಾಲೂಕಿನ ಕೆಂಚಾನಟ್ಟಿ ಗ್ರಾಮಸ್ಥರು ರಾಜ್ಯದ ನೂತನ ಸಹಕಾರಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಮನವಿ ಅರ್ಪಿಸಿದರು.
ಶನಿವಾರ ಮುಂಜಾನೆ ಗೋಕಾಕಿನ ಅವರ ಗೃಹ ಕಛೇರಿಯಲ್ಲಿ ಸಚಿವರಿಗೆ ಬೇಟ್ಟಿಯಾದ ಗ್ರಾಮಸ್ಥರು ತೀರಾ ಹಿಂದುಳಿದ ಗ್ರಾಮಗಳಾದ ಕೆಂಚಾನಟ್ಟಿ , ಮೀರಾಪುರಹಟ್ಟಿ , ಜೋಡಟ್ಟಿ ಗ್ರಾಮಗಳನ್ನು ಸೇರಿಸಿ ಪ್ರತ್ಯೇಕ ಗ್ರಾಮ ಪಂಚಾಯಿತಿ ಮಾಡುವಂತೆ ಕೋರಿದರು
ಮನವಿ ಸ್ವೀಕರಿಸಿ ಮಾತನಾಡಿದ ಸಹಕಾರಿ ಸಚಿವ ರಮೇಶ ಜಾರಕಿಹೊಳಿ ಅವರು ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೋಳುವ ಭರವಸೆ ನೀಡಿದರು
ಈ ಸಂದರ್ಭದಲ್ಲಿ ಕೆಂಚನಟ್ಟಿ ಗ್ರಾಮದ ಹಿರಿಯರಾದ ಕೆಂಚಪ್ಪಾ ರಾ. ಕಾಮಗೌಡ, ಸಿದ್ರಾಮ ಈ. ಕರಗಾವಿ, ಮನೋಹರ ಶಿ. ಶಿರಗಾಂವಿ, ರುದ್ರಗೌಡಾ ಮಾ. ಹುಲ್ಲೊಳಿ, ಮಹಾನಿಂಗ ಬ. ಕಾಮಗೌಡ, ಮೀರಾಪುರಹಟ್ಟಿ ಗ್ರಾಮದ ಹಿರಿಯರಾದ ಲಕ್ಷ್ಮಣ ಯ. ಹುಡೇದ, ಮಾರುತಿ ಸಿ. ಬಿರಾದಾರಪಾಟೀಲ, ಶ್ರೀಪಾಲ ಬಾ. ರೊಟ್ಟಿ, ಮಾಯಪ್ಪಾ ಶಿ. ಬಾತಿ, ವಸಂತ ಲ. ಪುಲಗಡ್ಡಿ, ರಾಜಕುಮಾರ ನಿಂ. ಕಿಲಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು