ಗೋಕಾಕ:ಕೊರೋನಾ ವಾರಿಯರ್ಸ್ ರ ಕಾರ್ಯ ಶ್ಲಾಘನೀಯ : ಸನತ ಜಾರಕಿಹೊಳಿ
ಕೊರೋನಾ ವಾರಿಯರ್ಸ್ ರ ಕಾರ್ಯ ಶ್ಲಾಘನೀಯ : ಸನತ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಸೆ 23 :
ಸೈನಿಕರಂತೆ ಜೀವದ ಹಂಗು ತೊರೆದು ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸಲು ಶ್ರಮಿಸುತ್ತಿರುವ ಕೊರೋನಾ ವಾರಿಯರ್ಸ್ ರ ಕಾರ್ಯ ಶ್ಲಾಘನೀಯ ಎಂದು ಲಕ್ಷ್ಮೀ ಎಜುಕೇಶನ್ ಟ್ರಸ್ಟಿನ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಹೇಳಿದರು
ಮಂಗಳವಾರದಂದು ನಗರದ ಲಕ್ಷ್ಮೀ ಎಜುಕೇಶನ್ ಟ್ರಸ್ಟಿನ ಸಭಾಂಗಣದಲ್ಲಿ ಅವರ ಹುಟ್ಟು ಹಬ್ಬದ ನಿಮಿತ್ತ ಅಭಿಮಾನಿ ಬಳಗದವರು ಹಮ್ಮಿಕೊಂಡ ಕೋವಿಡ್ ಯೋಧರ ಸನ್ಮಾನ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು
ಜಗತ್ತೆ ಕೊರೋನಾ ವೈರಸ್ ನಿಂದ ತತ್ತರಿಸುತ್ತಿರುವ ಸಂದರ್ಭದಲ್ಲಿ ವೈದ್ಯರು ಹಾಗೂ ಇತರೇ ಇಲಾಖೆಗಳ ಸಿಬ್ಬಂದಿಗಳು ತಮ್ಮ ಜೀವನವನ್ನು ಪನಕ್ಕಿಟ್ಟು ಯೋಧರಂತೆ ಜನರ ಜೀವ ರಕ್ಷಿಸುವ ಕಾರ್ಯ ಮಾಡುತ್ತಿದ್ದಾರೆ. ಅವರನ್ನು ಸತ್ಕರಿಸುವುದರಿಂದ ಅವರಲ್ಲಿಯ ಆತ್ಮಸ್ಥೈರ್ಯವನ್ನು ಹೆಚ್ಚಿಸಿದಂತಾಗುತ್ತದೆ. ನಾವು ಕೂಡಾ ಇಂತಹ ಸಂದಿಗ್ಧ ಕಾಲದಲ್ಲಿ ಜನತೆಯ ಕಷ್ಟಗಳಿಗೆ ಸ್ವಂದಿಸುತ್ತಿರುವುದಾಗಿ ಹೇಳಿದರು
ಸನ್ಮಾನಿತರ ಪರವಾಗಿ ಮಾತನಾಡಿದ ತಾಲೂಕಾ ವೈದ್ಯಾಧಿಕಾರಿ ಡಾ.ಜಗದೀಶ ಜಿಂಗಿ ಇಲ್ಲಿಯ ಸಚಿವರು ಹಾಗೂ ಶಾಸಕರು ವೈಯಕ್ತಿಕವಾಗಿ ಆಕ್ಸಿಜನ್ ಹಾಗೂ ಔಷಧಿ ಕಿಟ್ ಗಳನ್ನು ನೀಡಿ ಕೊರೋನಾ ವೈರಸ್ ತಡೆಯುವ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಸಂಘ ಸಂಸ್ಥೆಗಳು ಸಹಕಾರ ನೀಡುತ್ತಿದ್ದು ಜನತೆ ಸಹಕಾರದ ನಿರ್ದೆಶನಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ಕೊರೋನಾ ವೈರಸನ್ನು ಸಂಪೂರ್ಣವಾಗಿ ಹೊಗಲಾಡಿಸಲು ಸಹಕರಿಸುವಂತೆ ಕೊರಿದರು .
ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ಟ್ರಸ್ಟಿನ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ ವಹಿಸಿದ್ದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ , ವೈದ್ಯಾಧಿಕಾರಿ ಡಾ.ರವೀಂದ್ರ ಅಂಟಿನ , ಪೌರಾಯುಕ್ತ ಶಿವಾನಂದ ಹಿರೇಮಠ , ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಇದ್ದರು
ಇದೇ ಸಂದರ್ಭದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು , ಆರೋಗ್ಯ ಮತ್ತು ಪೊಲೀಸ ಇಲಾಖೆಯ ಸಿಬ್ಬಂದಿಗಳನ್ನು ಅಭಿಮಾನಿ ಬಳಗದ ವತಿಯಿಂದ ಸತ್ಕರಿಸಿದರು .
ವ್ಹಿ.ಬಿ ಕನಿಲದಾರ ಸ್ವಾಗತಿಸಿದರು , ಅರುಣು ಪೂಜೇರ ವಂದಿಸಿದರು