ಗೋಕಾಕ:ಸೂತಕ ಕಳೆಯುವ ಮುನ್ನವೇ ಬಿಜೆಪಿಯಲ್ಲಿ ಬೆಳಗಾವಿ ಎಂ ಪಿ ಆಗಲು ಶುರುವಾಗಿದೆ ಕಸರತ್ತು
ಸೂತಕ ಕಳೆಯುವ ಮುನ್ನವೇ ಬಿಜೆಪಿಯಲ್ಲಿ ಬೆಳಗಾವಿ ಎಂ ಪಿ ಆಗಲು ಶುರುವಾಗಿದೆ ಕಸರತ್ತು
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಸೆ 29 :
ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಕೊರೋನಾ ಸೋಂಕಿನಿಂದ ಮೃತಪಟ್ಟು ಒಂದು ವಾರ ಕಳೆದಿಲ್ಲ ಅಷ್ಟರಲ್ಲೇ ದಿವಂಗತ ಸುರೇಶ ಅಂಗಡಿ ಅವರ ಉತ್ತರಾಧಿಕಾರಿ ಯಾರು ? ಎಂಬ ಚರ್ಚೆಗಳು ಶುರುವಾಗಿವೆ. ನಿಯಮಗಳ ಪ್ರಕಾರ 6 ತಿಂಗಳಲ್ಲಿ ಈ ಸ್ಥಾನಕ್ಕೆ ಚುನಾವಣೆ ನಡೆಯಬೇಕು ಆದರೆ ಇನ್ನೂ ಜಿಲ್ಲೆಯಲ್ಲಿ ಅಂಗಡಿ ನಿಧನದ ಸೂತಕ ಆವರಿಸಿದ್ದು ಅದು ಮುಗಿಯುವ ಮುಂದೆಯೇ ಬಿಜೆಪಿಯಲ್ಲಿ ಈ ಸ್ಥಾನಕ್ಕಾಗಿ ತೆರೆಮರೆಯಲ್ಲಿ ಕಸರತ್ತುಗಳು ನಡೆದಿದು , ಬಿಜಿಪಿಗರಲ್ಲಿಯ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತಿದೆ.
ದಿವಂಗತ ಸುರೇಶ ಅಂಗಡಿ ಅವರಿಗೆ ಶೃದ್ದಾಂಜಲಿ ಸಲ್ಲಿಸಿ ಅವರ ಕುಟುಂಬಕ್ಕೆ ಸ್ವಂತಾನ ಹೇಳಲು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟಿಲ್ ಅವರು ಮಂಗಳವಾರದಂದು ಜಿಲ್ಲೆಗೆ ಆಗಮಿಸಲ್ಲಿದ್ದು , ನಂತರ ಖಾಸಗಿ ಹೋಟೆಲ್ ಒಂದರಲ್ಲಿ ಬಿಜೆಪಿ ಕಾರ್ಯಕರ್ತರ ಅನೌಪಚಾರಿಕ ಸಭೆ ನಡೆಯಲ್ಲಿದ್ದು , ಅಲ್ಲಿ ಈ ವಿಷಯದ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಪಕ್ಷದ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ , ಕಾರ್ಯದರ್ಶಿ ರಾಜು ಚಿಕ್ಕನಗೌಡರ , ಜಾಧವ , ಸೇರಿದಂತೆ ಅನೇಕರು ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿ ಚುನಾವಣೆಗೆ ಸ್ವರ್ಧಿಸಲೂ ಚಿಂತನೆ ನಡೆಸಿದ್ದಾರೆ ಎಂಬ ಸುದ್ದಿಗಳು ಜೋರಾಗಿ ಹಬ್ಬುತ್ತಿವೆ.