RNI NO. KARKAN/2006/27779|Friday, October 18, 2024
You are here: Home » breaking news » ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ರೈತರಿಗೆ ಮೋಸ :: ಕುಮಾರಸ್ವಾಮಿ ಆರೋಪ

ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ರೈತರಿಗೆ ಮೋಸ :: ಕುಮಾರಸ್ವಾಮಿ ಆರೋಪ 

ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ರೈತರಿಗೆ ಮೋಸ :: ಕುಮಾರಸ್ವಾಮಿ ಆರೋಪ

ಚಿಕ್ಕೋಡಿ :: ಫಸಲ ಬೀಮಾ ಯೋಜನೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ರೈತರಿಗೆ ಮೋಸ ಮಾಡುತ್ತಿವೆ ಎಂದು ಹೆಚ್. ಡಿ ಕೆ ಅರೋಪಿಸಿದ್ದಾರೆ.

ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ಮಾತನಾಡಿದ ಅವರು, ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಸರ್ಕಾರ ಕೆರೆಯ ಹೂಳೆತ್ತುತ್ತಿಲ್ಲ. ಜನ ಸ್ವಯಂ ಪ್ರೇರಿತರಾಗಿ ಕೆರೆಗಳ ಹೂಳೆತ್ತುತ್ತಿದ್ದಾರೆ. ಇದರಿಂದಾದರೂ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದರು.

ಉತ್ತರ ಕರ್ನಾಟಕದ ಕೃಷ್ಣಾ ನದಿ ನೀರಾವರಿ ಯೋಜನೆಗಳ ಕುರಿತು ಸರ್ಕಾರ ಪ್ರಾಮಾಣಿಕ ತನಿಖೆ ನಡೆಸಬೇಕು. ಕೃಷ್ಣಾ ನದಿ ನೀರು ಬಳಕೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ನೀರಾವರಿ ಯೋಜನೆ ಹೆಸರಿನಲ್ಲಿ ರಾಜ್ಯ ಸರ್ಕಾರ ಹಣ ಲೂಟಿ ಮಾಡಿದೆ. ನೀರಾವರಿ ಯೋಜನೆಗಳ ಕುರಿತು ರಾಜ್ಯ ಸರ್ಕಾರ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಹಲವು ನಾಯಕರು ನಮ್ಮ ಪಕ್ಷಕ್ಕೆ ಬರವವರಿದ್ದಾರೆ. ಹಿಂದುಳಿದ ಅಲ್ಪಸಂಖ್ಯಾತ ನಾಯಕರು ನಮ್ಮ ಪಕ್ಷಕ್ಕೆ ಬರುವ ನಿಟ್ಟಿನಲ್ಲಿ ಚರ್ಚೆಗಳು ನಡಿತಾ ಇವೆ. ಬೆಳಗಾವಿ ಜಿಲ್ಲೆ ವಿಂಗಡಿಸುವ ಎಲ್ಲ ಅನಿವಾರ್ಯತೆ ಇದೆ. ಆದರೆ ಎಂಇಎಸ್ ಸಂಘಟನೆ ಮುರಿಯಬೇಕಾದರೆ ಬೆಳಗಾವಿ ಅಖಂಡ ಜಿಲ್ಲೆಯಾಗಿ ಉಳಿಯೋದು ಅನಿವಾರ್ಯ ಎಂದರು.

ಮುಂದಿನ ಚುನಾವಣೆಯಲ್ಲಿ ಜೆಡಿಎಸ್ 120 ಸ್ಥಾನ ಪಡೆದು ಅಧಿಕಾರಕ್ಕೆ ಬರಲಿದೆ. ಉತ್ತರ ಕರ್ನಾಟಕದಿಂದ ವಿಧಾನಸಭೆಗೆ ಸ್ಪರ್ಧಿಸುವಂತೆ ಕಾರ್ಯಕರ್ತರ ಅಭಿಲಾಶೆಯಾಗಿದೆ. ಈ ಕುರಿತು ಚುನಾವಣೆ ಸಂದರ್ಭದಲ್ಲಿ ಸೂಕ್ತವಾದ ನಿರ್ಧಾರ ಕೈಕೊಳ್ಳಲಾಗುವುದು ಎಂದರು.

Related posts: