ಗೋಕಾಕ:ಮಾದಕ ವಸ್ತುಗಳ ದಂಧೆಗೆ ಕಟ್ಟುನಿಟ್ಟಿನ ತನಿಖೆಗೆ ಆಗ್ರಹಿಸಿ ಜನಜಾಗೃತಿ ವೇದಿಕೆ ಮನವಿ
ಮಾದಕ ವಸ್ತುಗಳ ದಂಧೆಗೆ ಕಟ್ಟುನಿಟ್ಟಿನ ತನಿಖೆಗೆ ಆಗ್ರಹಿಸಿ ಜನಜಾಗೃತಿ ವೇದಿಕೆ ಮನವಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 30 :
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ವತಿಯಿಂದ ಮಾದಕ ವಸ್ತುಗಳ ದಂಧೆಗೆ ಕಟ್ಟುನಿಟ್ಟಿನ ತನಿಖೆ ಮಾಡಬೇಕೆಂದು ತಹಶೀಲ್ದಾರ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಬುಧವಾರದಂದು ಮನವಿ ಸಲ್ಲಿಸಿದರು.
ರಾಜ್ಯಾದ್ಯಂತ ಕಳೆದ ಮೂರು ದಶಕಗಳಿಂದ ಮದ್ಯಪಾನ ಮತ್ತು ಮಾದಕ ವಸ್ತುಗಳ ವಿರುದ್ಧ ಜಾಗೃತಿ ಚಿಕಿತ್ಸೆ ಮತ್ತು ಪುನಶ್ಚೇತನ ಕಾರ್ಯಕ್ರಮಗಳ ಮೂಲಕ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಕಾರ್ಯನಿರ್ವಹಿಸುತ್ತಿದೆ.
ಇದುವರೆಗೆ 1466 ಕ್ಕೂ ಮಿಕ್ಕಿದ ಮದ್ಯವರ್ಜನ ಶಿಬಿರಗಳನ್ನು ನಡೆಸಿ 1.20 ಸಾವಿರಕ್ಕೂ ಮಿಕ್ಕಿದಜನರಿಗೆ ವ್ಯಸನ ಮುಕ್ತರಾಗಲು ನೆರವಾಗಿದೆ. ವಾರ್ಷಿಕವಾಗಿ 1.50 ಲಕ್ಷ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ, ಕರ್ನಾಟಕರಾಜ್ಯ ಮದ್ಯಪಾನ ಸಂಯಮ ಮಡಳಿಯ ಜೊತೆಯಲ್ಲಿ ಕೈಜೋಡಿಸಿ ಹಲವಾರು ಕಾರ್ಯಕ್ರಮಗಳನ್ನು ಈ ನಿಟ್ಟಿನಲ್ಲಿ ವೇದಿಕೆಯುಆಯೋಜಿಸುತ್ತಾ ಬಂದಿದೆ.
ಇದೀಗ ರಾಜ್ಯದಲ್ಲಿ ಮಾದಕವಸ್ತು ಪ್ರಕರಣಗಳಿಗೆ ಸಿನಿಮಾ ಬಾಲಿವುಡ್ ನಂಟಿರುವಕುರಿತಾಗಿ ಚರ್ಚೆಯಾಗುತ್ತಿದೆ. ಮಾದಕ ವಸ್ತುಗಳ ದಂಧೆ ಪ್ರಕರಣಗಳು ಹೆಚ್ಚಾಗುತ್ತಿರುವ ಈ ಪರಿಸ್ಥಿತಿಯಲ್ಲಿ ಸರಕಾರವು ಎಚ್ಚೆತ್ತುಕೊಂಡು ಸರಿಯಾದ ಕ್ರಮ ಕೈಗೊಳ್ಳಬೇಕಾಗಿದೆ. ಮಾದಕವಸ್ತು ನಿಯಂತ್ರಣ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಬೆಕಗಿದೆ. ನರ್ಕೋಟಿಕ್‍ಡ್ರಗ್ಸ್‍ಅಂಡ್ ಸೈಕೊಟ್ರೋಪಿಕ್ ಸಬ್‍ಸ್ಟೇನ್‍ಸ್ಸ್(ಓಆPS) ಕಾಯ್ದೆ1985 ಪ್ರಕಾರ ಮಾದಕ ವಸ್ತುಗಳ ಉತ್ಪಾದನೆ, ಸಾಗಾಟ, ಮಾರಾಟ, ಸೇವನೆ, ಶಿಕ್ಷಾರ್ಹ ಅಪರಾಧ. ಆರೋಪ ಸಾಬೀತಾದರೆದಂಡ, ಜೈಲು, ಮರಣದಂಡನೆಗೂ ಅವಕಾಶವಿದೆ.ಆದುದರಿಂದ ಸರ್ಕಾರ ಈ ನಿಟ್ಟಿನಲಿ ವಿಶೇಷ ಗಮನ ಹರಿಸಿ ಮಾಧಕ ವಸ್ತುಗಳ ದಂಧೆಯಲ್ಲಿ ತೊಡಗಿಸಿಕೊಂಡವರ ಬಗ್ಗೆ ಸೂಕ್ತ ತನಿಖೆ ನಡೆಸಿ ಕಟ್ಟುನಿಟ್ಟಿನ ಕ್ರಮಕೈಗೊಂಡು ಯುವಜನತೆ, ಸಮಾಜವನ್ನು ಕಾಪಾಡಿಕೊಳ್ಳುವಂತೆ ಕೋರುತ್ತಿದೇವೆ. ಪ್ರಸ್ತುತ ಸಿನಿಮಾ ಬಾಲಿವುಡ್ ಸೆಲೆಬ್ರಿಟಿಗಳು, ವಿದ್ಯಾವಂತರು, ಬುದ್ದಿವಂತರೇಡ್ರಗ್ಸ್‍ನ ನಂಟಿರುವ ಕುರಿತಾಗಿ ಚರ್ಚೆಯಾಗುತ್ತಿರುವುದು ಅಪಾಯಕಾರಿಯಾಗಿದೆ. ಡ್ರಗ್ಸ್‍ನ ಮೂಲ ಮತ್ತು ತನಿಖೆಗೆ ಇದು ಸಕಾಲವಾಗಿದ್ದು ಶೀಘ್ರವೇ ಈ ಬಗ್ಗೆ ವಿಶೇಷತಂಡವನ್ನು ರಚಿಸಿ ಇದರ ಮಟ್ಟ ಹಾಕಬೇಕೆಂದು ಜಿಲ್ಲಾ ಜನಜಾಗೃತಿ ವೇದಿಕೆ ಗೋಕಾಕ ಆಗ್ರಹಿಸುತ್ತದೆ. ಆದುದರಿಂದ ಮಾದಕ ವಸ್ತುಗಳ ದಂಧೆ ಪ್ರಕರಣಕ್ಕೆ ಸಂಬಂದಿಸಿದಂತೆ ಕಟ್ಟುನಿಟ್ಟಿನ ತನಿಖೆ ಕೈಗೊಂಡು ಯುವಜನತೆ ಮತ್ತು ಸಮಾಜವನ್ನು ಮಾದಕ ವಸ್ತುಗಳ ಅಪಾಯದಿಂದ ರಕ್ಷಿಸಬೇಕಾಗಿದೆ ಎಂದು ಮನವಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಗೋಕಾಕ ಅಧ್ಯಕ್ಷ ಮಾಂತೇಶ ಅಳಾಜ, ಸ್ಥಾಪಕ ಅಧ್ಯಕ್ಷ ಸೋಮಶೇಖರ ಮಗದುಮ, ನಿರ್ದೇಶಕ ಕೇಶವ ದೇವಾಂಗ ಮತ್ತು ಜಿಲ್ಲಾ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.