RNI NO. KARKAN/2006/27779|Thursday, November 21, 2024
You are here: Home » breaking news » ಮೂಡಲಗಿ:ಹೆಚ್ಚಿನ ಮಳೆಯಿಂದಾಗಿ ಇಳುವರಿ ಕುಂಠಿತ-ರೋಗ/ಕೀಟ ಬಾಧೆ ನಿಯಂತ್ರಣಕ್ಕೆ ಕೃಷಿ ಅಧಿಕಾರಿಗಳಿಂದ ಸಲಹೆಗಳು.

ಮೂಡಲಗಿ:ಹೆಚ್ಚಿನ ಮಳೆಯಿಂದಾಗಿ ಇಳುವರಿ ಕುಂಠಿತ-ರೋಗ/ಕೀಟ ಬಾಧೆ ನಿಯಂತ್ರಣಕ್ಕೆ ಕೃಷಿ ಅಧಿಕಾರಿಗಳಿಂದ ಸಲಹೆಗಳು. 

ಹೆಚ್ಚಿನ ಮಳೆಯಿಂದಾಗಿ ಇಳುವರಿ ಕುಂಠಿತ-ರೋಗ/ಕೀಟ ಬಾಧೆ ನಿಯಂತ್ರಣಕ್ಕೆ ಕೃಷಿ ಅಧಿಕಾರಿಗಳಿಂದ ಸಲಹೆಗಳು.

 

 

ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ಅ 2 :

 

ಜಿಲ್ಲೆಯಲ್ಲಿ ಸೆಪ್ಟೆಂಬರ ತಿಂಗಳಿನಲ್ಲಿ ವ್ಯಾಪಕವಾಗಿ ಮಳೆಯಾಗಿದ್ದು ಇದರಿಂದ ಕಬ್ಬು, ಗೋವಿನ ಜೋಳ,ಹತ್ತಿ, ಮತ್ತು ತರಕಾರಿಗಳ ಇಳುವರಿ ಕುಂಠಿತ ವಾಗುವ ಸಂಭವವಿದೆ ಎಂದು ಸಹಾಯಕ ಕೃಷಿ ನಿರ್ದೇಶಕರಾದ ಎಂ.ಎಂ.ನದಾಫ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಗುರುವಾರದಂದು ಬಡ್ರ್ಸ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಜೋತೆ ಜಮೀನುಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿರುವ ಅವರು ತೇವಾಂಶದಿಂದ ಬೆಳೆ ಕುಂಠಿತಗೊಳ್ಳುತ್ತಿರುವುದರಿಂದ ರೈತರು ನೀರನ್ನು ಹೋರಹಾಕಲು ಕಾಲುವೆ ಮಾಡಿ ನೀರು ನಿಲ್ಲದಂತೆ ಕ್ರಮವಹಿಸಬೇಕು, ವಾತಾವರಣದಲ್ಲಿ ಹೆಚ್ಚಿನ ತೇವಾಂಶದಿಂದ ಸದರಿ ಬೆಳೆಗಳಲ್ಲಿ ಕೀಟ ರೋಗ ಬಾಧೆಗೆ ಸಸ್ಯ ಸಂರಕ್ಷಣಾ ಕ್ರಮ ಕೈಗೋಳ್ಳಲು ತಿಳಿಸಿದ್ದರು.
ತುಕ್ಕಾನಟ್ಟಿ ಬಡ್ರ್ಸ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ತಜ್ಞರಾದ ಪರಶುರಾಮ ಪಾಟೀಲ ಅವರು ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಕೀಟ ರೋಗಗಳ ನಿರ್ವಹಣೆ ತುಂಬಾ ಖರ್ಚುದಾಯಕ ಮತ್ತು ವಿಷಪೂರಿತ ರಾಸಾಯನಿಕಗಳಿಂದ ರೋಗ ಮತ್ತು ಕೀಟಗಳ ನಿರ್ವಹಣೆ ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕವಾಗಿವೆ ಆದ್ದರಿಂದ ನಿಸರ್ಗದತ್ತವಾಗಿ ಸಿಗುವ ಬೇವಿನ ಎಲೆ ಮತ್ತು ಚದುರಂಗ ಚುಕ್ಕೆ ಎಲೆಗಳ ಕಷಾಯವನ್ನು ತಯಾರಿಸಿಕೊಂಡು ಬೆಳೆಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಬೆಳೆಯ ಮೊದಲ ಹಂತದಿಂದ 15 ಅಥವಾ 30 ದಿನಗಳ ಅಂತರದಲ್ಲಿ ಬೆಳೆಯ ಕೊನೆಯ ಹಂತದವರೆಗೂ ಸಿಂಪರಣೆ ಮಾಡುವುದರಿಂದ ಬೆಳೆಗಳಿಗೆ ಉತ್ತೇಜಕವಾಗುವುದಲ್ಲದೆ ಶೀಲಿಂದ್ರದಿಂದ ಬರುವ ರೋಗಗಳನ್ನು ಮತ್ತು ಕೆಲ ರಸ ಹಿರುವ ಕೀಟಗಳನ್ನು ಕೂಡ ನಿಯಂತ್ರಿಸಬಹುದು ಎಂದು ಸಲಹೆ ನೀಡಿದರು.
ಹತ್ತಿ ಬೆಳೆಯಲ್ಲಿ- ಗುಲಾಬಿ ಬಣ್ಣದ ಕಾಯಿಕೊರಕ (ಪಿಂಕ ಬಾಲ್ ವರ್ಮ) ಹತ್ತಿ ತಿಗಣೆ, ಕೀಟಗಳ ಬಾಧೆ, ಕಬ್ಬು ಬೆಳೆಯಲ್ಲಿ ತುಕ್ಕು ರೋಗದ ಬಾಧೆ, ಗೋವಿನ ಜೋಳಕ್ಕೆ ತೇವಾಂಶ ಹೆಚ್ಚಾಗಿ ಬೇಳವಣಿಗೆ ಕುಂಠಿತವಾಗಿರುವುದು, ಅರಿಶಿಣದಲ್ಲಿ ಎಲೆ ಚುಕ್ಕೆ ರೋಗ & ಎಲೆ ಮಚ್ಚೆ ರೋಗದ ಬಾಧೆ, ಕ್ಯಾಬೆಜನಲ್ಲಿ ವಜ್ರದ ಬೆನ್ನಿನ ಪತಂಗ (ಡೈಮಂಡ ಬ್ಯಾಕ್ ಮೊಥ) , ಟೊಮ್ಯಾಟೊ ಬೆಳೆಗಳಲ್ಲಿ ಕೊನೆಯ ಅಂಡಮಾರಿ ರೋಗದ ಬಾಧೆಯ ಲಕ್ಷಣಗಳಿಗೆ ಕಡಿಮೆ ಖರ್ಚಿನ ನಿರ್ವಹಣಾ ಕ್ರಮಗಳನ್ನು ತಜ್ಞರು ರೈತರಿಗೆ ಸೂಚಿಸಿದರು .
ತಜ್ಞರೋಂದಿಗೆ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ:ಶಶೀಧರ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳಾದ ಎಸ್ ಬಿ ಕರಗಣ್ಣಿ, ಶಂಕರ ಹಳದಮನಿ ಮತ್ತು ಆತ್ಮ ಯೋಜನೆಯ ತಾಂತ್ರಿಕ ಅಧಿಕಾರಿ ಛಾಯಾ ಪಾಟೀಲ ಮತ್ತು ರೈತ ಮುಖಂಡರು ಕ್ಷೇತ್ರ ಬೇಟಿಯಲ್ಲಿ ಉಪಸ್ಥಿತರಿದ್ದರು.

Related posts: