RNI NO. KARKAN/2006/27779|Friday, October 18, 2024
You are here: Home » breaking news » ಘಟಪ್ರಭಾ:ಧರ್ಮದ ಹೆಸರಿನಲ್ಲಿ ಬಿಜೆಪಿಯವರು ಬೆಂಕಿ ಹಚ್ಚುವ ಕೆಲಸವನ್ನು ಮಾಡುತ್ತಿದ್ದಾರೆ : ಡಿ.ಕೆ.ಶಿ ಆರೋಪ

ಘಟಪ್ರಭಾ:ಧರ್ಮದ ಹೆಸರಿನಲ್ಲಿ ಬಿಜೆಪಿಯವರು ಬೆಂಕಿ ಹಚ್ಚುವ ಕೆಲಸವನ್ನು ಮಾಡುತ್ತಿದ್ದಾರೆ : ಡಿ.ಕೆ.ಶಿ ಆರೋಪ 

ಧರ್ಮದ ಹೆಸರಿನಲ್ಲಿ ಬಿಜೆಪಿಯವರು ಬೆಂಕಿ ಹಚ್ಚುವ ಕೆಲಸವನ್ನು ಮಾಡುತ್ತಿದ್ದಾರೆ : ಡಿ.ಕೆ.ಶಿ ಆರೋಪ

 
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಅ 2 :

 


ದೇಶದಲ್ಲಿ ಅಶಾಂತಿ ಹರಡತಾ ಇದೆ. ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಬಿಜೆಪಿಯವರು ಬೆಂಕಿ ಹಚ್ಚುವ ಕೆಲಸವನ್ನು ಮಾಡುತ್ತಿದ್ದಾರೆಂದು ಪ್ರದೇಶ ಕಾಂಗ್ರೇಸ ಸಮೀತಿಯ ಅಧ್ಯಕ್ಷ ಡಿ.ಕೆ.ಶಿವುಕುಮಾರ ಆರೋಪಿಸಿದರು.
ಅವರು ಸ್ಥಳೀಯ ಕಾಂಗ್ರೇಸ ಸೇವಾದಳದ ಡಾ.ಎನ್.ಎಸ್.ಹರ್ಡಿಕರ್ ರಾಷ್ಟ್ರೀಯ ತರಬೇತಿ ಅಕಾಡೆಮಿಯಲ್ಲಿ ಬೆಳಗಾವಿ ಹಾಗೂ ಚಿಕ್ಕೋಡಿ ಜಿಲ್ಲಾ ಕಾಂಗ್ರೇಸ ಸಮೀತಿವತಿಯಿಂದ ಶುಕ್ರವಾರ ಹಮ್ಮಿಕೊಂಡ ಮಹಾತ್ಮಾ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತ, ದೇಶ ಮತ್ತು ಸಂವಿಧಾನದ ರಕ್ಷಣೆಗೆ ಕಾಂಗ್ರೇಸ ಕಾರ್ಯಕರ್ತರು ಮುಂದಾಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಸಹಿಗಳನ್ನು ಸಂಗ್ರಹಿಸಿ ರಾಷ್ಟ್ರಪತಿಗಳಿಗೆ ಕಳುಹಿಸಲಾಗುವುದು ಎಂದು ಹೇಳಿದರು.
ಮಹಾತ್ಮಾ ಗಾಂಧಿಯವರ ಆದರ್ಶಗಳು ಮತ್ತು ತತ್ವಗಳನ್ನು ಯುವಕರು ತಮ್ಮ ಜೀವನದಲ್ಲಿ ಅಳವಡಿಕೊಳ್ಳಬೇಕು. ಗಾಂಧಿಯವರ ಆದರ್ಶಗಳು ಮತ್ತು ತತ್ವಗಳೇ ಕಾಂಗ್ರೇಸ ಪಕ್ಷದ ಸಿದ್ದಾಂತಗಳು. ಸ್ವಾತಂತ್ರ್ಯ ಹೋರಾಟದಲ್ಲಿ ಬೆಳಗಾವಿ ಜಿಲ್ಲೆಯ ಪಾತ್ರ ಮಹತ್ವದಾಗಿದೆ ಎಂದ ಅವರು ಗಾಂಧಿಜಿಯವರ ಜೊತೆ ಕೈಜೋಡಿಸಿದ ಜಿಲ್ಲೆಯ ಅನೇಕ ಹೋರಾಟಗಾರರಿಗೆ ನಮನಗಳನ್ನು ಸಲ್ಲಿಸಿದರು.
ವಿರೋಧ ಪಕ್ಷ ನಾಯಕ ಸಿದ್ಧರಾಮಯ್ಯನವರು ಮಾತನಾಡಿ, ಕಾಂಗ್ರೇಸ ಪಕ್ಷ ಮಹಾತ್ಮಾ ಗಾಂಧಿಜಿ ಹಾಗೂ ಲಾಲಬಹಾದೂರ ಶಾಸ್ತ್ರಿಯವರ ತತ್ವಗಳ ಮೇಲೆ ನಡೆಯುತ್ತಿದೆ. ಗಾಂಧಿಜಿಯವರು ಹಿಂದೂ ಮುಸ್ಲಿಂ ಐಕ್ಯತೆಗಾಗಿ ಹೋರಾಡಿದರು. ಕಾಂಗ್ರೇಸ ಪಕ್ಷ ಯಾವತ್ತ್ತೂ ಜಾತಿ ಆಧಾರಿತ ರಾಜಕೀಯ ಮಾಡಿಲ್ಲ. ಗಾಂಧೀಜಿ ಹಾಗೂ ಡಾ.ಎನ್.ಎಸ್.ಹರ್ಡಿಕರ್ ಅವರು ಕಟ್ಟಿರುವ ಕಾಂಗ್ರೇಸ ಸೇವಾದಳ ರಾಷ್ಟ್ರಕ್ಕೆ ಅನೇಕ ಮಹಾ ನಾಯಕರನ್ನು ನೀಡಿದೆ. ಬಿಜೆಪಿ ಮತ್ತು ಆರ್.ಎಸ್.ಎಸ್ ನವರು ಜನರಲ್ಲಿ ದ್ವೇಶ ಭಾವನೆಗಳನ್ನು ಬಿತ್ತುವದನ್ನು ನಿಲ್ಲಿಸಬೇಕು. ನಮಗೆ ಗಾಂಧಿಜಿ ಆರಾಧ್ಯ ದೈವರಾದರೆ ಅವರಿಗೆ ಗಾಂಧಿ ಹಂತಕ ಗೋಡಸೆ ಆದರ್ಶ ವಾಗಿದ್ದಾನೆ. ಇದು ವಿಪರ್ಯಾಸದ ಸಂಗತಿ ಎಂದರು.
ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಪ್ರಾಸ್ತಾಹಿಕವಾಗಿ ಮಾತನಾಡಿ ಕಾಂಗ್ರೆಸ್ ಸೇವಾದಳದ ಡಾ.ಎನ್.ಎಸ್.ಹರ್ಡಿಕರ್ ರಾಷ್ಟ್ರೀಯ ತರಬೇತಿ ಅಕಾಡೆಮಿಯಲ್ಲಿ ಯುವಕರಿಗೆ ದೈಹಿಕ ಹಾಗೂ ಮಾನಸಿಕವಾಗಿ ದೃಡವಾಗುವಂತ ತರಬೇತಿ ನೀಡಲಾಗುತ್ತದೆ. ಸಧೃಢ ಹಾಗೂ ಐಕ್ಯತೆಯ ಬಾರತ ನಿರ್ಮಾಣದ ಗುರಿ ಸೇವಾದಳದ್ದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಕಾಂಗ್ರೆಸ್ ಸೇವಾದಳದ ಅಧ್ಯಕ್ಷರಾದ ಶ್ರೀಮತಿ ಪ್ಯಾರಿಜಾನ, ಮಾಜಿ ಸಂಸದ ಬಿ.ಕೆ. ಹರಿಪ್ರಸಾದ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ವಿಧಾನ ಪರಿಷತ ಸದಸ್ಯರಾದ ಎಸ್.ಆರ್. ಪಾಟೀಲ ಮಾತನಾಡಿದರು.
ವೇದಿಕೆ ಮೇಲೆ ಘನಶ್ಯಾಮ ವೈದ್ಯ, ಶಾಸಕರುಗಳಾದ ಮಹಾಂತೇಶ ಕೌಜಲಗಿ, ಗಣೇಶ ಹುಕ್ಕೇರಿ, ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ, ಆಯ್.ಜಿ.ಸನದಿ, ವೀರಣ್ಣಾ ಮತ್ತ್ತಿಕಟ್ಟಿ, ಬಿ.ಆರ್. ಪಾಟೀಲ, ವೀರಕುಮಾರ ಪಾಟೀಲ, ಶ್ಯಾಮರಾವ ಘಾಟಗೆ, ಕಾಕಾಸಾಹೇಬ ಪಾಟೀಲ, ಅಶೋಕ ಪಟ್ಟಣ, ಶಹಾಜಹಾನ ಡೊಂಗರಗಾವ, ಮಹಾವೀರ ಮೊಹಿತೆ, ಮಹೇಂದ್ರ ತಮ್ಮಣ್ಣನವರ, ಗಜಾನನ ಮಂಗಸೂಳಿ, ಅರವಿಂದ ದಳವಾಯಿ ಸೇರದಂತೆ ಅನೇಕರು ಇದ್ದರು.
ಮುಂಜಾನೆ ಗಣ್ಯರು ಡಾ.ನಾ.ಸು.ಹರ್ಡಿಕರ ಅವರ ಸಮಾದಿಗೆ ಬೇಟಿ ನೀಡಿ ಪುಷ್ಪಾರ್ಚನೆ ಮಾಡಿದರು. ನಂತರ ಸೇವಾದಳ ಧ್ವಜಾರೋಹಣ ಕಾರ್ಯಕ್ರಮ ಜರುಗಿತು. ಸಮಾರಂಭದಲ್ಲಿ ನೂರಾರು ಜನ ಕಾಂಗ್ರೇಸ್ ಕಾರ್ಯಕರ್ತರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಚಿಕ್ಕೋಡಿ ಜಿಲ್ಲಾ ಕಾಂಗ್ರೇಸ ಸಮೀತಿ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ನಿರೂಪಿಸಿದರು, ಕಲ್ಪನಾ ಜೋಶಿ ಸ್ವಾಗತಿಸಿದರು, ಭೀಮಾ ನಾಯಿಕ ವಂದಿಸಿದರು.

Related posts: