RNI NO. KARKAN/2006/27779|Friday, October 18, 2024
You are here: Home » breaking news » ಘಟಪ್ರಭಾ:ಸಮತಾ ಸೈನಿಕ ದಳದ ವತಿಯಿಂದ ಪಿಎಸ್ಐ ಅವರಿಗೆ ಮನವಿ

ಘಟಪ್ರಭಾ:ಸಮತಾ ಸೈನಿಕ ದಳದ ವತಿಯಿಂದ ಪಿಎಸ್ಐ ಅವರಿಗೆ ಮನವಿ 

ಸಮತಾ ಸೈನಿಕ ದಳದ ವತಿಯಿಂದ ಪಿಎಸ್ಐ ಅವರಿಗೆ ಮನವಿ

ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಅ 5 :
ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದಿರುವ ವ್ಯಾಪಾರಸ್ತರು ಪಟ್ಟಣದಲ್ಲಿ ಕಳಪೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಅವರ ಮೇಲೆ ಕೂಡಲೇ ಕ್ರಮ ಜರುಗಿಸಬೇಕೆಂದು ಸಮತಾ ಸೈನಿಕ ದಳದ ತಾಲೂಕಾ ಅಧ್ಯಕ್ಷ ಅರ್ಜುನ ಗಂಡವ್ವಗೋಳ ಆಗ್ರಹಿಸಿದರು.
ಅವರು ಸೋಮವಾರದಂದು ಸ್ಥಳೀಯ ಮೃತ್ಯುಂಜಯ ವೃತ್ತದಲ್ಲಿ ರಾಜಸ್ಥಾನಿ ವ್ಯಾಪಾರಿಗಳು ವಿರುದ್ಧ ವಿವಿಧ ಸಂಘಟನೆಗಳ ಸಂಯುಕ್ತಾಶ್ರದಲ್ಲಿ ಹಮ್ಮಿಕೊಳ್ಳಲಾದ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಘಟಪ್ರಭಾ ಪಟ್ಟಣಲ್ಲಿ ಬೇರೆ ಬೇರೆ ರಾಜ್ಯಗಳಿಂದ ಬಂದು ಕಿರಾಣಿ, ಸಿಮೇಂಟ ಪತ್ರಾಸ, ಬಟ್ಟೆ ಅಂಗಡಿ ಹಾಗೂ ಇನ್ನೂ ಅನೇಕ ಕಳಪೆ ವಸ್ತುಗಳನ್ನು ಮಾರಾಟ ಮಾಡುವವರ ಜೊತೆಗೆ ವಂಚನೆ, ದರೋಡೆ, ಮತ್ತು ಕೋಲೆಗೆ ಪ್ರಚೋದನೆ ಮಾಡುವವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಅವರು ಒತ್ತಾಯಿಸಿದರು.
ಪ್ರತಿಭಟಣಾ ಮೇರವಣಿಗೆಯು ಮಲ್ಲಾಪೂರ ಪಿ.ಜಿ. ಪಟ್ಟಣದ ವಿಠ್ಠಲ ಮಂದಿರದಿಂದ ಪ್ರಾರಂಭಗೊಂಡು ಮೃತ್ಯುಜಂಯ ವೃತ್ತಕ್ಕೆ ತಲುಪಿ ಕೆಲ ಕಾಲ ರಸ್ತೆ ತಡೆದು ಪ್ರತಿಭಟಿಸಿದರು. ನಂತರ ಅರಬಾವಿ ಉಪ ತಹಶಿಲದಾರ ಎಲ್.ಎಚ್.ಬೋವಿ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಕರ್ನಾಟಕ ಯುವ ಸೇನೆ ರಾಜ್ಯ ಉಪಾಧ್ಯಕ್ಷ ಕೆಂಪನ್ನಾ ಚೌಕಶಿ, ವೀರಣ್ಣ ಸಂಗಮನವರ, ಭರಮು ಗಾಡಿವಡ್ಡರ, ಕೃಷ್ಣಾ ಗಂಡವ್ವಗೋಳ, ಶಂಕರ ವಾಘ, ರಘು ಚಿಂಚಲಿ, ಕಲ್ಲಪ್ಪ ವಗ್ಗರ, ಈಶ್ವರ ನಡುವಿನಮನಿ, ಮಾರುತಿ ಮಾದರ, ಸಂತೋಷ ತೆಳಗಡೆ, ಬಸವರಾಜ ಸಂತೂಗೋಳ, ಮಾರುತಿ ಕಳ್ಳಿಮನಿ, ಕುಮಾರ ತೆಳಗಡೆ, ಎಮ್.ಆರ್. ಗೋಕಾಕ, ರವಿ ಅರ್ಜುನವಾಡ, ಎಮ್.ಕೆ.ತಳವಾರ ಸೇರದಂತೆ ಅನೇಕರು ಇದ್ದರು.
ಘಟಪ್ರಭಾ ಪಟ್ಟಣದ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಬಂದು ಮಾಡಿ ಪ್ರತಿಭಟನೇಗೆ ಬೆಂಬಲ ಸೂಚಿಸಿದರು. ಪಿ.ಎಸ್.ಆಯ್ ಹಾಲಪ್ಪ ಬಾಲದಂಡಿ ಹಾಗೂ ಪೋಲಿಸ ಸಿಬ್ಬಂದಿ ವರ್ಗದವರು ಪ್ರತಿಭಟನೆಗೆ ಸೂಕ್ತ ಬಂದೋಬಸ್ತ ಒದಗಿಸಿದರು

Related posts: