RNI NO. KARKAN/2006/27779|Saturday, October 19, 2024
You are here: Home » breaking news » ಘಟಪ್ರಭಾ:ಮಾಸ್ಕ್, ಸ್ಯಾನಿಟೈಜರ್, ಫೇಸ್ ಶಿಲ್ಡ, ಹ್ಯಾಂಡ್‍ಗ್ಲೌಜ್ ಪರಿಕರ ವಿತರಣೆ

ಘಟಪ್ರಭಾ:ಮಾಸ್ಕ್, ಸ್ಯಾನಿಟೈಜರ್, ಫೇಸ್ ಶಿಲ್ಡ, ಹ್ಯಾಂಡ್‍ಗ್ಲೌಜ್ ಪರಿಕರ ವಿತರಣೆ 

ಮಾಸ್ಕ್, ಸ್ಯಾನಿಟೈಜರ್, ಫೇಸ್ ಶಿಲ್ಡ, ಹ್ಯಾಂಡ್‍ಗ್ಲೌಜ್ ಪರಿಕರ ವಿತರಣೆ

 

 

ನಮ್ಮ ಬೆಳಗಾವಿ ಇ – ವಾರ್ತೆ , ಘಟಪ್ರಭಾ ಅ 13 :

 

ಲಾಕ್‍ಡೌನ್ ಅವಧಿಯಲ್ಲಿ ಯಾವಾಗ ಜನಕ್ಕೆ ಕೆಲಸವಿಲ್ಲದೇ ಆಹಾರಕ್ಕಾಗಿ ಜನ ಪರದಾಡುವಂತ ಪರಿಸ್ಥಿತಿಯಲ್ಲಿ ಗೋಕಾಕ ಮತ್ತು ಮೂಡಲಗಿ ಕ್ಷೇತ್ರದ ಪ್ರತಿ ಕುಟುಂಬಕ್ಕೆ ಸುಮಾರು 15 ದಿನಕ್ಕೆ ಬೇಕಾಗುವಷ್ಟು ಆಹಾರ ಪದಾರ್ಥದ ವ್ಯವಸ್ಥೆಯನ್ನು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹಾಗೂ ಅರಭಾವಿ ಶಾಸಕರು ಹಾಗೂ ಕೆ.ಎಮ್.ಎಪ್. ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಮಾಡಿದರೆಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಸಿ.ಮನ್ನಿಕೇರಿ ಹೇಳಿದರು.
ಅವರು ಮಂಗಳವಾರದಂದು ಸ್ಥಳೀಯ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಲ್ಲಾಪೂರ ಪಿ.ಜಿ.ಯ ಕೊರೊನಾ ವಾರಿಯರ್ಸಗಳಿಗೆ ಸಚಿವ ರಮೇಶ ಜಾರಕಿಹೊಳಿ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಂದ ವಯಕ್ತಿಕವಾಗಿ ಕೊಡಲ್ಪಟ್ಟ ಕೊವಿಡ್ ರಕ್ಷಕ ಕಿಟ್ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೋವಿಡ್-19 ಮಹಾಮಾರಿಯನ್ನು ನಿಯಂತ್ರಿಸಲು ಹಗಲಿರುಳು ದುಡಿಯುತ್ತಿರುವ ಕೊರೊನಾ ವಾರಿಯರ್ಸಗಳಾದ ಪ.ಪಂ.ಸಿಬ್ಬಂದಿ, ಪಿಎಚ್‍ಸಿ.ಸಿಬ್ಬಂದಿ, ಕಂದಾಯ ಇಲಾಖೆ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಜಲ ಸಂಪನ್ಮೂಲ ಸಚಿವರಾದ ರಮೇಶ ಜಾರಕಿಹೊಳಿ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಂದ ವಯಕ್ತಿಕವಾಗಿ ಮಾಸ್ಕ್, ಸ್ಯಾನಿಟೈಜರ್, ಫೇಸ್ ಶಿಲ್ಡ, ಹ್ಯಾಂಡ್‍ಗ್ಲೌಜ್ ಪರಿಕರಗಳನ್ನೊಳಗೊಂಡ ಕೊವಿಡ್ ರಕ್ಷಕ ಕಿಟ್‍ಗಳನ್ನು ವಿತರಿಸಲಾಯಿತು. ಮತ್ತು ಪ್ರತಿ ಕಛೇರಿಗೆ 5ಲೀ. ಸ್ಯಾನಿಟೈಜರ್ ಕ್ಯಾನ್ ಜೊತೆಗೆ ಕಾಲು ಚಾಲಿತ ಸ್ಯಾನಿಟೈಜರ್ ಸ್ಟ್ಯಾಂಡ್‍ನ್ನು ಕೊಡಲಾಯಿತು.
ಕಾರ್ಯಕ್ರಮದಲ್ಲಿ ಪಟ್ಟಣದ ಹಿರಿಯರಾದ ಡಿ.ಎಮ್ ದಳವಾಯಿ, ಈಶ್ವರ ಮಟಗಾರ, ಸುರೇಶ ಪೂಜಾರಿ, ಸುರೇಶ ಪಾಟೀಲ. ಜಿ.ಎಸ್.ರಜಪೂತ. ಬಸವರಾಜ ಹುದ್ದಾರ, ಮಡಿವಾಳಪ್ಪ ಮುಚಳಂಬಿ, ಚಿರಾಕಲಿ ಮಕಾನದಾರ, ಕೆಂಪಣ್ಣಾ ಚೌಕಾಶಿ, ಸುನೀಲ ನಾಯಿಕ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಶೇಖರ ಕುಲಗೂಡ, ಶಿವುಪುತ್ರ ಕೊಗನೂರ, ಕಲ್ಲಪ್ಪ ಕಾಡದವರ, ನಾಗರಾಜ ಜಂಬ್ರಿ. ಪ.ಪಂ. ಸದಸ್ಯರಾದ ಸಲೀಮ ಕಬ್ಬೂರ, ಮಲ್ಲು ಕೋಳಿ, ಪ್ರವೀಣ ಮಟಗಾರ, ಈರಣ್ಣಾ ಕಲಕುಟಗಿ, ವಿಕ್ರಮ ದಳವಾಯಿ, ಇಮ್ರಾನ ಬಟಕುರ್ಕಿ, ಮಾರುತಿ ಹುಕ್ಕೇರಿ, ಮುಖ್ಯಾಧಿಕಾರಿ ಕೆ.ಬಿ.ಪಾಟೀಲ, ಗ್ರಾಮ ಲೆಕ್ಕಾಧಿಕಾರಿ ಜಗದೀಶ ಚೂರಿ, ಕಲಾವತಿ ಹೂಗಾರ ಸೇರಿದಂತೆ ಪ.ಪಂ. ಸದಸ್ಯರು ಇದ್ದರು.
ಕಾರ್ಯಕ್ರಮದಲ್ಲಿ ಬಿ.ಕೆ.ಶಿರಗಾಂವಿ ನಿರೂಪಿಸಿ, ಆರ್.ಎಸ್.ಗೋಡೆರ ಸ್ವಾಗತಿಸಿದರು. ಆರ್.ಎಮ್.ಯಾದವಾಡ ವಂದಿಸಿದರು.

Related posts: