ಗೋಕಾಕ:ಸರಕಾರದ ಸೌಲಭ್ಯಗಳನ್ನು ಪಡೆದು ಭವಿಷ್ಯ ಉಜ್ವಲ ಗೋಳಿಸಿಕೋಳ್ಳಿ : ವಿದ್ಯಾರ್ಥಿಗಳಿಗೆ ಸಚಿವ ರಮೇಶ ಕರೆ
ಸರಕಾರದ ಸೌಲಭ್ಯಗಳನ್ನು ಪಡೆದು ಭವಿಷ್ಯ ಉಜ್ವಲ ಗೋಳಿಸಿಕೋಳ್ಳಿ : ವಿದ್ಯಾರ್ಥಿಗಳಿಗೆ ಸಚಿವ ರಮೇಶ ಕರೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 27 :
ಶೈಕ್ಷಣಿಕ ಪ್ರಗತಿಗಾಗಿ ಹಲವಾರು ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಸರಕಾರ ಕಲ್ಪಿಸಿದ್ದು, ಇವುಗಳ ಸದುಪಯೋಗದಿಂದ ತಮ್ಮ ಭವಿಷ್ಯವನ್ನು ಉಜ್ವಲಗೋಳಿಸಿಕೋಳ್ಳಿರೆಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು
ಮಂಗಳವಾರದಂದು ನಗರದ ಸಚಿವರ ಕಾರ್ಯಾಲಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಗೋಕಾಕ ವಲಯದ ವಿದ್ಯಾರ್ಥಿಗಳಿಗೆ ಲ್ಯಾಪಟಾಫ್ ಹಾಗೂ ಶೇಕಡಾ ನೂರಷ್ಟು ಫಲಿತಾಂಶ ಪಡೆದ ಶಾಲೆಯ ಮುಖ್ಯೋಪಾಧ್ಯಾಯರಿಗೆ ಪ್ರಮಾಣ ಪತ್ರ ಮತ್ತು ಫಲಕ ಹಾಗೂ ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ತಲಾ 25 ಸಾವಿರ ಪ್ರೋತ್ಸಾಹ ಧನದ ಚೆಕ್ಕಗಳನ್ನು ವಿತರಿಸಿ ಮಾತನಾಡುತ್ತಿದ್ದರು.
ಇಂದಿನ ಸ್ವರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಸರಕಾರಿ ಸೌಲಭ್ಯಗಳ ಸದುಪಯೋಗದಿಂದ ಪ್ರಯತ್ನ ಶೀಲರಾಗಿ, ಪ್ರತಿಭಾನ್ವಿತರಾಗಿರಿ. ಶಿಕ್ಷಕರು ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಅವರ ಶೈಕ್ಷಣಿಕ ಪ್ರಗತಿಗೆ ಶ್ರಮಿಸುವಂತೆ ಕರೆ ನೀಡಿದರು.
ಈ ಸಂಧರ್ಭದಲ್ಲಿ ಜಿ.ಪಂ ಸದಸ್ಯರುಗಳಾದ ಟಿ.ಆರ್.ಕಾಗಲ , ಮಡೆಪ್ಪ ತೋಳಿನವರ , ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಇದ್ದರು