ಗೋಕಾಕ:ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬಡಿಗವಾಡ ಗ್ರಾಮದಲ್ಲಿ ಕರವೇ ಪ್ರತಿಭಟನೆ
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬಡಿಗವಾಡ ಗ್ರಾಮದಲ್ಲಿ ಕರವೇ ಪ್ರತಿಭಟನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 28 :
ಕೈ ಪಂಪ ಹಾಗೂ ಜಲಕುಂಭಗಳನ್ನು ದುರಸ್ತಿಗೋಳಿಸಿ , ಶೌಚಾಲಯಗಳ ಬಾಕಿ ಬಿಲ್ಲಗಳನ್ನು ಬಿಡುಗಡೆಗೋಳಿಸಿ, ಘಟಪ್ರಭಾ – ಬಡಿಗವಾಡ ಮುಖ್ಯ ರಸ್ತೆ ದುರಸ್ತಿಗೋಳಿಸಿ, ಕೆನಾಲ್ ಗೆ ತಡೆಗೋಡೆ ನಿರ್ಮಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಬಡಿಗವಾಡ ಗ್ರಾಮದ ಕಾರ್ಯಕರ್ತರು ಪ್ರತಿಭಟನೆ ನಡೆಯಿಸಿ ಪಂಚಾಯತ ಪಿಡಿಓ ಅವರಿಗೆ ಮನವಿ ಅರ್ಪಿಸಿದರು.
ಬುಧವಾರದಂದು ಗ್ರಾಮದ ಬಡಿಗವಾಡ ಪಂಚಾಯಿತಿ ಕಾರ್ಯಾಲಯದ ಮುಂದೆ ಸೇರಿದ ಕರವೇ ಕಾರ್ಯಕರ್ತರು ಪಂಚಾಯತಿ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು.
ಕಳೆದ ಐದಾರು ತಿಂಗಳಿನಿಂದ ಸಾರ್ವಜನಿಕರಿಗೆ ಅನುಕೂಲವಾಗಲು ಪಾಮಲದಿನ್ನಿ ಕ್ರಾಸ ಹುನುಮಂತ ದೇವರ ಹತ್ತಿರ ತೆರೆದಿದ್ದ ಕೈ ಪಂಪ ಮತ್ತು ಗ್ರಾಮದ ಸಂಪಗಾರ ತೋಟದ ಹತ್ತಿರವಿರುವ ಕೈ ಪಂಪಗಳು ಕಳೆದ ಐದಾರು ತಿಂಗಳಿನಿಂದ ಕೆಟ್ಟಿದ್ದು, ಈ ವಿಷಯ ಪಂಚಾಯಿತಿ ಅವರಿಗೆ ಗೊತ್ತಿದ್ದರು ಸಹ ಇದನ್ನು ದುರಸ್ತಿ ಮಾಡುವ ಗೋಜಿಗೆ ಹೋಗಿಲ್ಲ ಇದರಿಂದ ಈ ಕೈಪಂಪ ಬೋರುಗಳನ್ನು ಅವಲಂಬಿಸಿರುವ ಸಾರ್ವಜನಿಕರು ಬಾರಿ ತೊಂದರೆಯನ್ನು ಅನುಭವಿಸುತ್ತಿದ್ದಾರೆ.
ಇದ್ದಲದೆ ಗ್ರಾಮದಲ್ಲಿ 14ನೇ ಹಣಕಾಸು ಯೋಜನೆಯಡಿಯಲ್ಲಿ ಗ್ರಾಮದಲ್ಲಿ ಜಲಕುಂಭ ನಿರ್ಮಿಸಲಾಗಿದ್ದು , ಜಲಕಂಭಕ್ಕೆ ಕೆಲವು ಕಡೆ ಇನ್ನೂ ನೀರಿನ ವ್ಯವಸ್ಥೆ , ನಳಗಳ ವ್ಯವಸ್ಥೆ ಕಲ್ಪಿಸದೆ ಅವೈಜ್ಞಾನಿಕವಾಗಿ ಬಿಲ್ಲ ಮಾಡಲಾಗಿದೆ ಆದರೂ ಸಹ ಇದನ್ನು ಸಾರ್ವಜಿಕರ ಉಪಯೋಗಕ್ಕೆ ಇವುಗಳನ್ನು ಲಭ್ಯ ಮಾಡದೆ ಸರಕಾರ ಮತ್ತು ಗ್ರಾಮದ ಸಾರ್ವಜನಿಕರಿಗೆ ಮೋಸ ಮಾಡಲಾಗುತ್ತಿದೆ ಅಲ್ಲದೆ ಗ್ರಾಮದಲ್ಲಿ ಸರಕಾರದ ಯೋಜನೆಯಡಿ ಶೌಚಾಲಯಗಳನ್ನು ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಪಂಚಾಯಿತಿಯಿಂದ ಬಿಲ್ಲ ಆಗಿಲ್ಲ ಯಾರು ಶೌಚಾಲಯಗಳನ್ನು ನಿರ್ಮಿಸಿಕೊಂಡಿಲ್ಲ ಅಂತಹವರ ಹೆಸರಿನಲ್ಲಿ ಬಿಲ್ಲಗಳು ಮಂಜೂರಾಗಿರುವ ಪ್ರಸಂಗಗಳು ಬಡಿಗವಾಡ ಪಂಚಾಯಿತಿ ವ್ಯಾಪ್ತಿಯಲ್ಲಿ ಜರುಗುತ್ತಿವೆ ಇದು ಪಂಚಾಯಿತಿ ಪಿಡಿಓ ಮತ್ತು ಕಾರ್ಯದರ್ಶಿಯವರ ಯಡವಟ್ಟಾಗಿದ್ದು, ತಕ್ಷಣ ಇದನ್ನು ಸರಿಪಡಿಸಿ ಅರ್ಹ ಫಲಾನುಭವಿಗಳಿಗೆ ಶೌಚಾಲಯಗಳ ಬಿಲ್ಲ ಮಂಜೂರಾಗುವಂತೆ ಕ್ರಮ ಕೈಗೊಳ್ಳಬೇಕು.
ಇದಲ್ಲದೆ ಕಳೆದ ಒಂದು ವರ್ಷದಿಂದ ಘಟಪ್ರಭಾ ದಿಂದ ಬಡಿಗವಾಡ ಹೋಗುವ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟು ರಸ್ತೆ ನಡುವೆ ತೆಗ್ಗು ಗುಂಡಿಗಳು ಬಿದ್ದಿವೆ ಇದರಿಂದ ಈ ರಸ್ತೆ ಮೇಲೆ ದಿನಂಪ್ರತಿ ಸಂಚರಿಸುವ ವಾಹನ ಸವಾರರು ಮತ್ತು ಕಬ್ಬು ತಗೆದುಕೊಂಡು ಹೋಗುವ ರೈತರು ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ರಸ್ತೆ ಪಕ್ಕದಲ್ಲಿ ಮನೆಗಳು ಇರುವುದರಿಂದ ರಸ್ತೆ ಮೇಲೆ ಬಿದ್ಧ ತೆಗ್ಗುಗಳನ್ನು ತಪ್ಪಿಸಲು ವಾಹನ ಸವಾರರು ರಸ್ತೆ ದಾಟಿ ವಾಹನಗಳನ್ನು ಚಲಿಸುವ ಸಂದರ್ಭದಲ್ಲಿ ಮನಗಳ ಮುಂದೆ ಆಟವಾಡುವ ಮಕ್ಕಳಿಗೆ ತೊಂದರೆ ಆಗುತ್ತಿದ್ದು, ಅಪಘಾತಗಳು ಸಂಭವಿಸುವ ಸಂಭವವಿದೆ. ಇದ್ದಲದೆ ಮುಖ್ಯ ರಸ್ತೆಯಲ್ಲಿರುವ ಸರಕಾರಿ ಕನ್ನಡ ಶಾಲೆಯ ಎದುರು ಕಟ್ರಿ ತೋಟಕ್ಕೆ ಹೋಗುವ ಕೆನಾಲ್ ನ ತಡೆಗೋಡೆ ಬಿದ್ದು ಎರೆಡು ವರ್ಷಗಳಾದರೂ ಸಹ ಸಂಬಂಧಪಟ್ಟ ಇಲಾಖೆಯವರು ಅದನ್ನು ದುರಸ್ಥಿ ಮಾಡದೆ ಹಾಗೆಯೇ ಬಿಟ್ಟಿದ್ದಾರೆ. ಇದರಿಂದ ಈ ಕೆನಾಲ್ ಮೇಲೆ ಒಂದು ಕಾರು, ಟ್ರ್ಯಾಕ್ಟರ್ ಗಳು ಕೆನಾಲನಲ್ಲಿ ಬಿದ್ದು ಅಪಘಾತಗಳು ಸಂಭವಿಸಿವೆ ಆದರೂ ಸಹ ಅಧಿಕಾರಿಗಳು ಇತ್ತಕಡೆ ಗಮನ ಹರಿಸದಿರುವುದು ತರವಲ್ಲ ಆದ್ದರಿಂದ ದಯಾಳುಗಳಾದ ತಾವುಗಳು ಮುಖ್ಯರಸ್ತೆ ಮತ್ತು ಕೆನಾಲ್ ಗೆ ತಡೆಗೋಡೆ ನಿರ್ಮಿಸಿ ಸಾರ್ವಜನಿಕರು ಪಡುತ್ತಿರುವ ಗೋಳನ್ನು ತಪ್ಪಿಸಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.
ಈ ಸಂದರ್ಭದಲ್ಲಿ ಕರವೇ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ , ಕೃಷ್ಣಾ ಖಾನಪ್ಪನವರ , ಬಡಿಗವಾಡ ಗ್ರಾಮದ ಅಧ್ಯಕ್ಷ ಮಲಪ್ಪ ಸಂಪಗಾರ, ದೀಪಕ ಹಂಜಿ ಸೇರಿದಂತೆ ಅನೇಕರು ಇದ್ದರು