RNI NO. KARKAN/2006/27779|Sunday, December 22, 2024
You are here: Home » breaking news » ಘಟಪ್ರಭಾ:ಯುವಕರು ಕನ್ನಡ ನಾಡು, ನುಡಿ, ಜಲಕ್ಕಾಗಿ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ : ಕೆಂಪವ್ವ ಹರಿಜನ

ಘಟಪ್ರಭಾ:ಯುವಕರು ಕನ್ನಡ ನಾಡು, ನುಡಿ, ಜಲಕ್ಕಾಗಿ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ : ಕೆಂಪವ್ವ ಹರಿಜನ 

ಯುವಕರು ಕನ್ನಡ ನಾಡು, ನುಡಿ, ಜಲಕ್ಕಾಗಿ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ : ಕೆಂಪವ್ವ ಹರಿಜನ

 

ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ನ 1 :

 
ಯುವಕರು ಕನ್ನಡ ನಾಡು, ನುಡಿ, ಜಲಕ್ಕಾಗಿ ಶ್ರಮಿಸುವ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಮಾಜಮುಖಿ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಕೆಂಪವ್ವ ಹರಿಜನ ಹೇಳಿದರು.

ರವಿವಾರದಂದು ಅವರು ಸಮೀಪದ ಅರಭಾವಿ ಗ್ರಾಮದ ಕರವೇ ಹಾಗೂ ಭೋವಿ ವಡ್ಡರ ಕ್ಷೇಮಾಭಿವೃದ್ದಿ ಸಂಘ(ಘಟಕ) ಇವರ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ಹಾಗೂ ಲಿ.ಶ್ರೀ ಶರಣ ಬಸವ ಮಹಾಸ್ವಾಮಿಜಿಯವರ 11ನೇ ಪುಣ್ಯಸ್ಮರಣೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದೆ. ನನಗೆ ರಾಜ್ಯ ಸರ್ಕಾರ ನನ್ನ ಕಲೆಯನ್ನು ಗುರುತಿಸಿ ಈ ವರ್ಷ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಮಾಡಿದ್ದು ನನಗೆ ಹೆಮ್ಮೆ ತಂದಿದೆ ಎಂದು ಹೇಳಿದರು.

ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಂಚಾಲಕರಾದ ಗಣಪತಿ ಈಳಿಗೇರ ಮಾತನಾಡಿ ನಮ್ಮ ಗ್ರಾಮದ ಬಯಲಾಟ ಕಲಾವಿದೆ ಕೆಂಪವ್ವ ಹರಿಜನ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತ್ತಿದ್ದು ನಮ್ಮ ಗ್ರಾಮದ ಮತ್ತು ತಾಲೂಕು,ಜಿಲ್ಲೆಯ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಿದ್ದಾರೆ. ಬಡತನದಲ್ಲಿ ಬೆಳೆದ ಕೆಂಪವ್ವ ಹರಿಜನ ಅವರ ಕಲೆಗೆ ಬೆಲೆ ಸಿಕ್ಕಿದೆ.

ಡಿಎಸ್‍ಎಸ್ ಮುಖಂಡ ರಮೇಶ ಮಾದರ ಮಾತನಾಡಿ ದಲಿತ ಮಹಿಳಾ ಕಲಾವಿದೆ ಕೆಂಪವ್ವ ಹರಿಜನ ಅವರನ್ನು ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದು ಶ್ಲಾಘನೀಯ ಕಾರ್ಯವಾಗಿದೆ ಎಂದರು.

ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಶಿವಾನಂದ ಸ್ವಾಮಿಗಳು ವಹಿಸಿದ್ದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷ ಲಕ್ಷ್ಮಣ ನಿಂಗನ್ನವರ, ಉಪಾಧ್ಯಕ್ಷೆ ಸುಶೀಲಾ ಸಗರಿ, ಮುಖಂಡರಾದ ಕೃಷ್ಣಾ ಬಂಡಿವಡ್ಡರ, ರಾಯಪ್ಪ ಬಂಡಿವಡ್ಡರ,ಸುನೀಲ ಜಮಖಂಡಿ,ಮುತ್ತೇಪ್ಪ ಜಲ್ಲಿ,ಅಡಿವೆಪ್ಪ ಬಿಲಕುಂದಿ, ಭೀಮಶಿ ಪಾತ್ರೋಟ, ಮಾರುತಿ ಇಳಿಗೇರ, ಬಸವರಾಜ ಘೀವಾರಿ, ರಿಯಾಜ ಯಾದವಾಡ, ಮಂಜುನಾಥ ಜಲ್ಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.

Related posts: