ಗೋಕಾಕ:ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಾಡಿನ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ : ಮಹಾನಂದಾ ಪಾಟೀಲ
ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಾಡಿನ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ : ಮಹಾನಂದಾ ಪಾಟೀಲ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 1 :
ಭವ್ಯವಾದ ಪರಂಪರೆ ಹಾಗೂ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಾಡಿನ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ ಎಂದು ಎಸ್‍ಎಲ್‍ಜೆ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ಮಹಾನಂದಾ ಪಾಟೀಲ ಹೇಳಿದರು.
ರವಿವಾರದಂದು ನಗರದ ಲಕ್ಷ್ಮೀ ಎಜುಕೇಶನ ಟ್ರಸ್ಟಿನ್ ವಿವಿಧ ಅಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಇಂದಿನ ಆಧುನಿಕ ಭರಾಟೆಯಲ್ಲಿ ಕನ್ನಡ ಭಾಷೆ ಆಂಗ್ಲ ಭಾಷೆಯ ಪೈಪೋಟಿಯಿಂದ ಅನೇಕ ಸವಾಲಗಳನ್ನು ಎದುರಿಸುತ್ತಿದೆ. ಸಾಹಿತ್ಯ, ನೆಲ-ಜಲ, ಅಭಿವೃದ್ದಿ ಪಡಿಸಿ ಕನ್ನಡಿಗರ ಅಭಿವೃದ್ದಿಗೆ ಶ್ರಮಿಸಬೇಕು. ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆ ಕನ್ನಡದಲ್ಲಿಯೆ ನೀಡಬೇಕು. ಗಡಿಪ್ರದೇಶವನ್ನು ಬಲಪಡಿಸಿ ಅಲ್ಲಿಯ ಕನ್ನಡ ವಾತಾವರಣವನ್ನು ನಿರ್ಮಿಸಬೇಕು. ಕನ್ನಡ ಭಾಷೆಯನ್ನು ನಾವೆಲ್ಲರೂ ಹೆಚ್ಚು ಹೆಚ್ಚು ದಿನನಿತ್ಯ ಮಾತನಾಡುವುದರಲ್ಲಿ ಬಳಿಸಿ ಹಾಗೂ ಮಕ್ಕಳಲ್ಲಿ ಭಾಷಾಭಿಮಾನ ಬೆಳೆಸುವ ಮೂಲಕ ಕನ್ನಡ ಭಾಷೆಯನ್ನು ಮಾತೃಭಾಷೆಯನ್ನು ಅನ್ನದ ಭಾಷೆಯನ್ನಾಗಿ ಮಾಡಲು ಪಕ್ಷಭೇದ ಮರೆತ ನಾವೆಲ್ಲರೂ ಶ್ರಮಿಸಿ ನಾಡದೇವಿ ಮುಖದಲ್ಲಿ ಹರ್ಷವನ್ನು ತರುವಲ್ಲಿ ಸಫಲವಾದರೇ ಈ ಉತ್ಸವಕ್ಕೆ ಅರ್ಥ ಬರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಅವರು ಉದ್ಘಾಟಿಸಿದರು.ವೇದಿಕೆ ಮೇಲೆ ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರಾದ ಆಯ್.ಎಸ್.ಪವಾರ, ಎನ್.ಕೆ.ಮಿರಾಸಿ, ಪಿ.ಡಿ.ಪಾಂಚಾಳ, ಬಿ.ಕೆ.ಕುಲಕರ್ಣಿ, ಎಚ್.ವಿ.ಪಾಗನೀಸ್, ಪಿ.ವಿ.ಚಚಡಿ ಇದ್ದರು.