ಘಟಪ್ರಭಾ:ಸರ್ದಾರ ವಲ್ಲವಬಾಯಿ ಪಟೇಲ್ ಜನ್ಮ ದಿನದ ಅಂಗವಾಗಿ ಪೊಲೀಸ್ ಇಲಾಖೆಯಿಂದ ಏಕತಾ ಓಟ
ಸರ್ದಾರ ವಲ್ಲವಬಾಯಿ ಪಟೇಲ್ ಜನ್ಮ ದಿನದ ಅಂಗವಾಗಿ ಪೊಲೀಸ್ ಇಲಾಖೆಯಿಂದ ಏಕತಾ ಓಟ
ಘಟಪ್ರಭಾ ನ 1: ದೇಶದ ಏಕತೆಗೆ ಹೋರಾಟ ನಡೆಸಿದ ಉಕ್ಕಿನ ಮನುಷ್ಯ ಸರ್ದಾರ ವಲ್ಲವಬಾಯಿ ಪಟೇಲ್ ಜನ್ಮ ದಿನದ ಅಂಗವಾಗಿ ಇಂದು ಘಟಪ್ರಭಾ ಪೋಲಿಸ್ ಠಾಣೆ ವತಿಯಿಂದ ಏಕತಾ ಓಟ ಹಾಗೂ ರಾಷ್ಟ್ರೀಯ ಭದ್ರತೆ ಕುರಿತು ವಿಚಾರಣಾ ಸಂಕೀರ್ಣವನ್ನು ಹಮ್ಮಿಕೊಳ್ಳಲಾಗಿತು.
ಮಲ್ಲಾಪೂರ ಪಿಜಿ ಪಟ್ಟಣದ ಕಾಳಿಕಾ ದೇವಿ ಗುಡಿಯಿಂದ ಪ್ರಾರಂಭಗೊಂಡ ಏಕತಾ ಓಟ ಘಟಪ್ರಭಾ ಪೋಲಿಸ್ ಠಾಣೆಯ ವರೆಗೆ ನಡೆಯಿತು. ನಂತರ ಪೋಲಿಸ್ ಠಾಣೆ ಸಭಾಭವನದಲ್ಲಿ ನಡೆದ ರಾಷ್ಟ್ರೀಯ ಭದ್ರತೆ ಕುರಿತು ವಿಚಾರಣಾ ಸಂಕೀರ್ಣದಲ್ಲಿ ಮೂಡಲಗಿ ವೃತ್ತದ ಸಿಪಿಐ ವೆಂಕಟೇಶ ಮುರನಾಳ ಮಾತನಾಡಿ ಸ್ವತಂತ್ರ ಪೂರ್ವದಿಂದ ಬ್ರಿಟೀಷ್‍ರ ವಿರುದ್ಧ ಜನರನ್ನು ಒಗ್ಗೂಡಿಸಿ ಹೊರಾಡುತ್ತಿದ್ದ ಸರ್ಧಾರ ಪಟೇಲರು ಸ್ವತಂತ್ರ ನಂತರವು ದೇಶದಲ್ಲಿ ಹಲವಾರು ಸ್ವತಂತ್ರ ಸಂಸ್ಥಾನಗಳನ್ನು ಹುಟ್ಟು ಹಾಕಿ ದೇಶದ ಅಖಂಡತೆಯನ್ನು ಕಾಪಾಡಿದವರು. ದೇಶದ ಭದ್ರತೆ ವಿಚಾರದಲ್ಲಿ ಎಂದು ರಾಜಿಯಾಗದ ಪಟೇಲರು ಅಪತ್ರಿಮ ದೇಶಭಕ್ತರಾಗಿದ್ದರು ಎಂದು ಹೇಳಿದರು.
ಘಟಪ್ರಭಾ ಪಿಎಸ್‍ಐ ಹಾಲಪ್ಪ ಬಾಲದಂಡಿ ಪ್ರಾಸ್ತವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಅಡಿಷನಲ್ ಪಿಎಸ್‍ಐ ಎಮ್.ಸಿ.ಹಿರೇಮಠ ಹಾಗೂ ಎಎಸ್‍ಐ ಮಗದುಮ್ಮ ಹಾಗೂ ಪೋಲಿಸ್ ಠಾಣೆಯ ಸಿಬ್ಬಂದಿ ವರ್ಗ ಮತ್ತು ಮಿಲಿಟಿರಿ ತರಭೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಏಕತಾ ಓಟದಲ್ಲಿ ಭಾಗವಹಿಸಿದ್ದರು.