ಗೋಕಾಕ:ಅಧ್ಯಕ್ಷ ಸ್ಥಾನಕ್ಕೆ ಜಯಾನಂದ ಹುಣಚ್ಯಾಳಿ , ಉಪಾಧ್ಯಕ್ಷ ಸ್ಥಾನಕ್ಕೆ ಬಸವರಾಜ ಅರೆನ್ನವರ ನಾಮ ಪತ್ರ ಸಲ್ಲಿಕೆ
ಅಧ್ಯಕ್ಷ ಸ್ಥಾನಕ್ಕೆ ಜಯಾನಂದ ಹುಣಚ್ಯಾಳಿ , ಉಪಾಧ್ಯಕ್ಷ ಸ್ಥಾನಕ್ಕೆ ಬಸವರಾಜ ಅರೆನ್ನವರ ನಾಮ ಪತ್ರ ಸಲ್ಲಿಕೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 2 :
ಗೋಕಾಕ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರದಂದು ಮಧ್ಯಾಹ್ನ ಚುನಾವಣೆ ಜರುಗಲಿದ್ದು, ಸಾಮಾನ್ಯ ವರ್ಗಕ್ಕೆ ಮೀಸಲಿರುವ ಅಧ್ಯಕ್ಷ ಸ್ಥಾನಕ್ಕೆ ವಾರ್ಡ ನಂ 16 ರ ಸದಸ್ಯ ಜಯಾನಂದ ಹುಣಚ್ಯಾಳಿ ಮತ್ತು ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ವಾರ್ಡ ನಂ 25 ರ ನಗರಸಭೆ ಸದಸ್ಯ ಬಸವರಾಜ ಅರೆನ್ನವರ ಅವರು ಚುನಾವಣಾಧಿಕಾರಿ ಶಿವಾನಂದ ಭಜಂತ್ರಿ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದೆ ನಾಮಪತ್ರ ಸಲ್ಲಿಕೆ ಯಾಗಿರುವುದರಿಂದ ಈ ಅಭ್ಯರ್ಥಿಗಳೇ ಅವಿರೋಧವಾಗಿ ಆಯ್ಕೆಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತೀದ್ದು , ಮಧ್ಯಾಹ್ನ 3 ಘಂಟೆಗೆ ಅಧಿಕೃತ ಘೋಷಣೆಯೊಂದು ಬಾಕಿ ಇದೆ.