RNI NO. KARKAN/2006/27779|Friday, October 18, 2024
You are here: Home » breaking news » ಬೆಟಗೇರಿ:ಗ್ರಾಮೀಣ ವಲಯದ ಸಹಕಾರಿ ಸಂಘ, ಸಂಸ್ಥೆಗಳು ಹಳ್ಳಿಯ ಜನರ ಜೀವನಾಡಿವಿದ್ದಂತೆ : ಸತೀಶ ಕಡಾಡಿ

ಬೆಟಗೇರಿ:ಗ್ರಾಮೀಣ ವಲಯದ ಸಹಕಾರಿ ಸಂಘ, ಸಂಸ್ಥೆಗಳು ಹಳ್ಳಿಯ ಜನರ ಜೀವನಾಡಿವಿದ್ದಂತೆ : ಸತೀಶ ಕಡಾಡಿ 

ಗ್ರಾಮೀಣ ವಲಯದ ಸಹಕಾರಿ ಸಂಘ, ಸಂಸ್ಥೆಗಳು ಹಳ್ಳಿಯ ಜನರ ಜೀವನಾಡಿವಿದ್ದಂತೆ : ಸತೀಶ ಕಡಾಡಿ

 

 
ನಮ್ಮ ಬೆಳಗಾವಿ ಇ – ವಾರ್ತೆ, ಬೆಟಗೇರಿ ನ 2 :

 
ಗ್ರಾಮೀಣ ವಲಯದ ಸಹಕಾರಿ ಸಂಘ, ಸಂಸ್ಥೆಗಳು ಹಳ್ಳಿಯ ಜನರ ಜೀವನಾಡಿವಿದ್ದಂತೆ. ಸಂಘ ಸಂಸ್ಥೆಗಳು ಸಮಗ್ರ ಪ್ರಗತಿ ಸಾಧಿಸಲು ಸ್ಥಳೀಯರ ಸಹಕಾರ ಅವಶ್ಯಕವಾಗಿದೆ ಎಂದು ಬಿಡಿಸಿಸಿ ಬ್ಯಾಂಕ್‍ನ ನೂತನ ನಿರ್ದೇಶಕ ಸತೀಶ ಕಡಾಡಿ ಅವರು ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಕಲ್ಲೋಳಿ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಶಾಖೆಯಲ್ಲಿ ಸೋಮವಾರ ನ.2ರಂದು ನಡೆದ ಬಿಡಿಸಿಸಿ ಬ್ಯಾಂಕ್‍ನ ನೂತನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಸತೀಶ ಕಡಾಡಿ ಅವರ ಸತ್ಕಾರ ಹಾಗೂ ಸ್ಥಳೀಯ ಶಾಖೆಯ 5ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಜ್ಯೊತಿ ಪ್ರಜ್ವಲಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿ, ಎಲ್ಲಕ್ಕಿಂತ ನಿಮ್ಮೆಲ್ಲರ ಪ್ರೀತಿ, ಅಭಿಮಾನ ದೊಡ್ಡದು ಎಂದರು.
ಸ್ಥಳೀಯ ಶಾಖೆಯ ಸಲಹಾ ಸಮೀತಿ ಅಧ್ಯಕ್ಷ ಈರಪ್ಪ ದೇಯನ್ನವರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಹಾಲಕ್ಷ್ಮೀದೇವಿಯ ಭಾವಚಿತ್ರಕ್ಕೆ ಗಂಗಯ್ಯ ಹಿರೇಮಠ ಪೂಜೆ ನೆರವೇರಿಸಿದರು. ಸ್ಥಳೀಯ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಶಾಖೆಯ ವತಿಯಿಂದ ಬಿಡಿಸಿಸಿ ಬ್ಯಾಂಕ್‍ನ ನೂತನ ನಿರ್ದೇಶಕ ಸತೀಶ ಕಡಾಡಿ ಅವರನ್ನು ಈ ವೇಳೆ ಸನ್ಮಾನಿಸಲಾಯಿತು.
ಸಹಕಾರಿ ಧುರೀಣರಾದ ಶ್ರೀಶೈಲ ತುಪ್ಪದ, ಬಸಪ್ಪ ಗೌಡರ, ಶ್ರೀಕಾಂತ ಕರೆಪ್ಪಗೋಳ, ಮಾಯಪ್ಪ ಬಾಣಸಿ, ಅಜ್ಜಪ್ಪ ಪೇದನ್ನವರ,ಪ್ರಧಾನ ಕಛೇರಿ ಮುಖ್ಯ ವ್ಯವಸ್ಥಾಪಕ ಹನುಮಂತ ಕಲಕುಟ್ರಿ, ಶಾಖಾ ವ್ಯವಸ್ಥಾಪಕ ಪರಪ್ಪ ಗಿರೆಣ್ಣವರ, ಶಾಖೆಯ ಸಲಹಾ ಸಮಿತಿ ಸದಸ್ಯರು, ಇತರರು ಇದ್ದರು.

Related posts: