RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ :ಪುಣೆ ಮೂಲದ ಮುಕುಲ್ ಮಾಧವ ಫೌಂಡೇಷನ್ ಮತ್ತು ರೋಟರಿ ಕ್ಲಬ್ ವತಿಯಿಂದ ಪ್ರವಾಹ ಪೀಡಿತ ಬಿಪಿಎಲ್ ಕಾರ್ಡದಾರರಿಗೆ ಕಿಟ್ ವಿತರಣೆ

ಗೋಕಾಕ :ಪುಣೆ ಮೂಲದ ಮುಕುಲ್ ಮಾಧವ ಫೌಂಡೇಷನ್ ಮತ್ತು ರೋಟರಿ ಕ್ಲಬ್ ವತಿಯಿಂದ ಪ್ರವಾಹ ಪೀಡಿತ ಬಿಪಿಎಲ್ ಕಾರ್ಡದಾರರಿಗೆ ಕಿಟ್ ವಿತರಣೆ 

ಪುಣೆ ಮೂಲದ ಮುಕುಲ್ ಮಾಧವ ಫೌಂಡೇಷನ್ ಮತ್ತು ರೋಟರಿ ಕ್ಲಬ್ ವತಿಯಿಂದ ಪ್ರವಾಹ ಪೀಡಿತ ಬಿಪಿಎಲ್ ಕಾರ್ಡದಾರರಿಗೆ ಕಿಟ್ ವಿತರಣೆ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 6 :

 
ಗೋಕಾಕದಲ್ಲಿ ಶುಕ್ರವಾರ ಫಿನೋಲೆಕ್ಸ್ ಇಂಡಸ್ಟ್ರೀಜ್ ಸಂಸ್ಥೆಯ ಸಿ.ಎಸ್.ಆರ್. ಪಾಲುದಾರ ಪುಣೆ ಮೂಲದ ಮುಕುಲ್ ಮಾಧವ ಫೌಂಡೇಷನ್ ಮತ್ತು ರೋಟರಿ ಕ್ಲಬ್ ಆಶ್ರಯದಲ್ಲಿ ಪ್ರವಾಹ ಪೀಡಿತ ಬಿಪಿಎಲ್ ಕಾರ್ಡದಾರರಿಗೆ 19 ಜೀವನಾಂಶಗಳನ್ನು ಒಳಗೊಂಡ ಕಿಟ್‍ಗಳನ್ನು ವಿತರಿಸಲಾಯಿತು.

ಫಿನೋಲೆಕ್ಸ್ ಇಂಡಸ್ಟ್ರೀಜ್ ಸಂಸ್ಥೆಯಿಂದ ಪ್ರವಾಹ ಪೀಡಿತರಿಗೆ 300ಕ್ಕೂ ಅಧಿಕ ಜೀವನಾಂಶ ಕಿಟ್ ವಿತರಣೆ
ಗೋಕಾಕ: ಕೃಷಿ ಚಟುವಟಿಕೆಗಳಿಗೆ ಪೂರಕ ಉದ್ದೇಶದೊಂದಿಗೆ ಪಿವ್ಹಿಸಿ ಪೈಪ್ ಉತ್ಪಾದನೆಯಲ್ಲಿ ತೊಡಗಿದ್ದ ಫಿನೋಲೆಕ್ಸ್ ಸಂಸ್ಥೆ ಪ್ರವಾಹ ಪೀಡಿತರ ಕಷ್ಟ-ಕಾರ್ಪಣ್ಯಗಳಲ್ಲಿ ಭಾಗಿಯಾಗುವ ಮೂಲಕ ಮಾನವಿಯತೆ ಮೆರೆದಿದೆ ಎಂದು ನಗರಸಭೆ ಪ್ರಭಾರ ಪೌರಾಯುಕ್ತ ಶಿವಾನಂದ ಹಿರೇಮಠ ಹೇಳಿದರು.
ಶುಕ್ರವಾರ ಇಲ್ಲಿನ ಕೆ.ಎಲ್.ಇ. ಸಂಸ್ಥೆಯ ದಿ. ಮಹಾದೇವಪ್ಪಣ್ಣ ಮುನವಳ್ಳಿ ಆಂಗ್ಲ ಮಾಧ್ಯಮ ಶಾಲಾ ಸಂಕೀರ್ಣದಲ್ಲಿ ಪುಣೆ ಮೂಲದ ಫಿನೋಲೆಕ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಸಿ.ಎಸ್.ಆರ್. ಪಾಲುದಾರ ಮುಕುಲ್ ಮಾಧವ ಫೌಂಡೇಷನ್ ಆಶ್ರಯದಲ್ಲಿ ಹಾಗೂ ಗೋಕಾಕ ರೋಟರಿ ಕ್ಲಬ್ ಸಹಯೋಗದಲ್ಲಿ ಮುಂಬರುವ ದೀಪಾವಳಿ ಹಬ್ಬವನ್ನು ಆಚರಿಸಲು ಅನುಕೂಲ ಆಗುವಂತೆ ಕಳೆದ ವರ್ಷದ ಪ್ರವಾಹ ಪೀಡಿತ ಕಡು-ಬಡವ ಬಿಪಿಎಲ್ ಕಾರ್ಡದಾರರಿಗೆ ಒಟ್ಟು 19 ಬಗೆಯ ಜೀವನಾಂಶಗಳನ್ನು ಒಳಗೊಂಡ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಖಾಸಗಿ ಸಂಸ್ಥೆಯೊಂದು ದೇಶದ ಸುಮಾರು 24 ರಾಜ್ಯಗಳಲ್ಲಿ 70 ಸಾವಿರ ಕುಟುಂಬಗಳಿಗೆ ನೆರವು ಒದಗಿಸಲು ಮುಂದಾಗಿರುವುದು ಮಾನವೀಯತೆಯ ಪ್ರತೀಕವಾಗಿದೆ ಎಂದು ಬಣ್ಣಿಸಿದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ರೋಟರಿ ಸೇವಾ ಸಂಸ್ಥೆಯ ಮುಖ್ಯಸ್ಥ ಸೋಮಶೇಖರ ಮಗದುಮ್ ಅವರು ಮಾತನಾಡಿ, ವಿಶ್ವಗುರು ಬಸವಣ್ಣನವರು ಹಾಕಿಕೊಟ್ಟ ಸನ್ಮಾರ್ಗದಂತೆ ‘ಇವನಾರವ, ಇವನಾರವ …’ ಎನ್ನದೇ ಹಸಿವಿನಿಂದ ಬಳಲುತ್ತಿರುವ ಎಲ್ಲರಿಗೂ ಜೀವನಕ್ಕೆ ಅಗತ್ಯವಿರುವ ಪದಾರ್ಥಗಳನ್ನು ವಿತರಿಸುತ್ತಿರುವ ಫಿನೋಲೆಕ್ಸ್ ಸಂಸ್ಥೆಯ ಕಾರ್ಯ ಇತರರಿಗೆ ಮಾದರಿಯಾಗಲಿ ಎಂದರು.
ಫಿನೋಲೆಕ್ಸ್ ಸಂಸ್ಥೆಯ ಬೆಳಗಾವಿ ಜಿಲ್ಲಾ ಪ್ರತಿನಿಧಿ ರಾಮಕೃಷ್ಣ ಜಿ.ಎಸ್. ಮತ್ತು ಸಂಸ್ಥೆಯ ಸ್ಥಳೀಯ ವಿತರಕ ವಿವೇಕಾನಂದ ಚುನಮರಿ ಮೊದಲಾದವರು ನೆರೆದಿದ್ದ 300ಕ್ಕೂ ಅಧಿಕ ಬಿಪಿಎಲ್ ಕಾರ್ಡದಾರ ಫಲಾನುಭವಿಗಳಿಗೆ ಕಿಟ್‍ಗಳನ್ನು ವಿತರಿಸಿದರು.
ವೇದಿಕೆಯಲ್ಲಿ ಕೆ.ಎಲ್.ಇ. ಸಂಸ್ಥೆಯ ಸ್ಥಳೀಯ ಆಡಳಿತ ಮಂಡಳಿ ಚೇರಮನ್ ಮಲ್ಲಿಕಾರ್ಜುನ ಚುನಮರಿ, ರೋಟರಿ ಕ್ಲಬ್ ಚೇರಮನ್ ವಿಶ್ವನಾಥ ಕಡಕೋಳ, ಜಗದೀಶ ಚುನಮರಿ, ರಾಜು ವರದಾಯಿ, ದಿಲೀಪ ಮೆಳವಂಕಿ, ಸತೀಶ ಬೆಳಗಾವಿ, ಸಚಿನ ಜಾಧವ ಮೊದಲಾದವರು ಇದ್ದರು.
ಫಿನೋಲೆಕ್ಸ್ ಸಂಸ್ಥೆಯ ಬೆಳಗಾವಿ ಜಿಲ್ಲಾ ಪ್ರತಿನಿಧಿ ಸುನೀಲ ಮಾಳಿ ಸ್ವಾಗತಿಸಿದರು. ಮಾರಾಟ ವ್ಯವಸ್ಥಾಪಕ ಅರುಣ ಅಲಾಸೆ ಪರಿಚಯಿಸಿದರು. ಸತೀಶ ನಾಡಗೌಡ ನಿರೂಪಿಸಿದರು.

Related posts: