RNI NO. KARKAN/2006/27779|Thursday, December 12, 2024
You are here: Home » breaking news » ಘಟಪ್ರಭಾ:ಮಾಸ್ ಮಹಿಳಾ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆ

ಘಟಪ್ರಭಾ:ಮಾಸ್ ಮಹಿಳಾ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆ 

ಮಾಸ್ ಮಹಿಳಾ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆ

 
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ನ 6 :

 
ಸ್ಥಳೀಯ ಮಾಸ್ ಮಹಿಳಾ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆ ಪಟ್ಟಣದ ಮುಗುಳಖೋಡ ಮಠದ ಆವರಣದಲ್ಲಿ ಇತ್ತೀಚಿಗೆ ಜರುಗಿತು.
ಸಂಘದ ಅಧ್ಯಕ್ಷೆ ಶೈಲಾ ಮಡ್ಡಿ ಮಾತನಾಡಿ ಸಂಘವು ಮಹಿಳೆಯರ ಅಭಿವೃದ್ಧಿಗಾಗಿ ಅನೇಕ ವರ್ಷಗಳಿಂದ ಹಗಲಿರುಳು ಶ್ರಮಿಸುತ್ತಿದೆ. ಹೆಚ್ಚಿನ ಅಭಿವೃದ್ಧಿಗಾಗಿ ಸರ್ಕಾರದ ಸಹಾಯ ಮತ್ತು ಸವಲತ್ತುಗಳು ಅವಶ್ಯಕತೆಯಿದೆ ಎಂದು ಹೇಳಿದರು.
ಸಭೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ನೂತನವಾಗಿ ರಚಣೆಯಾದ ತಾಲೂಕುಗಳನ್ನು ಸಂಘದ ಕಾರ್ಯವ್ಯಾಪ್ತಿಗೆ ಸೇರಿಸಿಕೊಳ್ಳುವುದು ಮತ್ತು ಸಂಘದ ಶೇರು ಭಂಡವಾಳವನ್ನು ಹೆಚ್ಚಿಸುವದರ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೀತವ್ವಾ ಜೋಡಟ್ಟಿ, ಉಪಾಧ್ಯಕ್ಷೆ ಸಾಂಯವ್ವಾ ಯಮನಪ್ಪಾ ಹಳಕಲ್, ಮಲ್ಲವ್ವಾ ಬಸಪ್ಪಾ ಬಂಗಾರಿ, ಸುನಂದಾ ಕಾಂಬಳೆ, ಹುವಕ್ಕಾ ಸಣ್ಣಕ್ಕಿ, ರೇಖಾ ಭಂಡಾರಿ, ಗಂಗಾ ಪತ್ತಾರ ಸೇರಿದಂತೆ ಸಂಘದ ನೂರಾರು ಮಹಿಳಾ ಸದಸ್ಯರು ಉಪಸ್ಥಿತರಿದ್ದರು.

Related posts: