RNI NO. KARKAN/2006/27779|Wednesday, December 25, 2024
You are here: Home » breaking news » ಘಟಪ್ರಭಾ:ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ತಾರತಮ್ಯ ಮಾಡಬೇಡಿ : ಜಲಸಂಪನ್ಮೂಲ ಸಚಿವ ರಮೇಶ

ಘಟಪ್ರಭಾ:ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ತಾರತಮ್ಯ ಮಾಡಬೇಡಿ : ಜಲಸಂಪನ್ಮೂಲ ಸಚಿವ ರಮೇಶ 

ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ತಾರತಮ್ಯ ಮಾಡಬೇಡಿ : ಜಲಸಂಪನ್ಮೂಲ ಸಚಿವ ರಮೇಶ

ಘಟಪ್ರಭಾ ನ 6 : ಅಭಿವೃದ್ಧಿ ಕಾರ್ಯಗಳಲ್ಲಿ ಎಂದಿಗೂ ತಾರತಮ್ಯ ಮಾಡಬೇಡಿ ಎಂದು ಜಲಸಂಪನ್ಮೂಲ ಸಚಿವರು ಹಾಗೂ ಬೆಳಗಾವಿ ಉಸ್ತುವಾರಿಗಳಾದ ರಮೇಶ ಜಾರಕಿಹೊಳಿ ಹೇಳಿದರು.
ಶುಕ್ರವಾರ ಸಚಿವರ ಕಾರ್ಯಾಲಯದಲ್ಲಿ ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿನ 2 ನೇ ಅವಧಿಗೆ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ ಸರಕಾರದಿಂದ ಇನ್ನೂ ಹೆಚ್ಚಿನ ಅನುದಾನ ತರಲಾಗುವುದು. ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲಾಗುವುದು. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಏಳ್ಗೆಗಾಗಿ ಶ್ರಮಿಸಿ ಮಾದರಿ ಪಟ್ಟಣವನ್ನಾಗಿಸಬೇಕು ಎಂದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಮಾಲನ ದಳವಾಯಿ, ಉಪಾಧ್ಯಕ್ಷ ಈರಗೌಡ ಕಲಕುಟಗಿ, ಪಟ್ಟಣದ ಹಿರಿಯರಾದ ಡಿ.ಎಮ್.ದಳವಾಯಿ, ಪ.ಪಂ ಸದ್ಯಸರಾದ ಪಾರವ್ವ ಮೇತ್ರಿ, ಸುಜಾತಾ ಪೂಜೇರಿ, ಕಸ್ತೂರಿ ಚೌಕಶಿ, ಲಕ್ಷ್ಮೀ ತುಕ್ಕಾನಟ್ಟಿ, ಶ್ರೀದೇವಿ ಕೂಗನೂರ, ಸರಸ್ವತಿ ಕುಲಗೋಡ, ಮಾರುತಿ ಹುಕ್ಕೇರಿ, ಗಂಗಾಧರ ಬಡಕುಂದ್ರಿ, ಪ್ರವೀಣ ಮಟಗಾರ, ರಾಮಪ್ಪ ನಾಯಿಕ, ಸಲೀಮ ಕಬ್ಬೂರ, ಮಲ್ಲಪ್ಪ ಕೋಳಿ, ವಿಕ್ರಮ ದಳವಾಯಿ, ಇಬ್ರಾಹಿಂ ಬಟಕುರ್ಕಿ, ನಾಗರಾಜ ಚಚಡಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಬಿ.ಪಾಟೀಲ ಹಾಗೂ ಸಿಬ್ಬಂದಿ ವರ್ಗ ಸೇರಿದಂತೆ ಅನೇಕರು ಹಿರಿಯರು ಹಾಗೂ ಯುವಕರು ಇದ್ದರು

Related posts: