ಗೋಕಾಕ:ಆರ್.ಎಸ್. ಎಸ್ ಮುಸ್ಲಿಂ ವಿರೋಧಿಯಲ್ಲ : ಸಚಿವ ರಮೇಶ
ಆರ್.ಎಸ್. ಎಸ್ ಮುಸ್ಲಿಂ ವಿರೋಧಿಯಲ್ಲ : ಸಚಿವ ರಮೇಶ
ಗೋಕಾಕ ನ 7 : ಆರ್.ಎಸ್. ಎಸ್ ಮುಸ್ಲಿಂ ವಿರೋಧಿಯಲ್ಲ , ದೇಶವನ್ನು ಬಲಿಷ್ಠಗೋಳಿಸಲು ಶ್ರಮಿಸುತ್ತಿರುವ ಸಂಘಟನೆಯಾಗಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು
ಶನಿವಾರದಂದು ನಗರದ ಸಮುದಾಯದ ಭವನದಲ್ಲಿ ಬಾರತೀಯ ಜನತಾ ಪಕ್ಷದ ಗೋಕಾಕ ಗ್ರಾಮೀಣ ಮಂಡಲ ಪದಾಧಿಕಾರಿಗಳಿಗೆ ಹಮ್ಮಿಕೊಂಡ ಪ್ರಶಿಕ್ಷಣ ವರ್ಗದ ಎರೆಡು ದಿನಗಳ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು
ನಾನು ಬಾಲ್ಯದಿಂದಲೇ ಆರ್.ಎಸ್.ಎಸ್. ಕಾರ್ಯಕ್ರಮಗಳಿಲ್ಲಿ ಪಾಲ್ಗೊಂಡು ಅಲ್ಲಿನ ಶಿಸ್ತು ಮತ್ತು ತತ್ವಬದ್ದ ನೀತಿಗಳನ್ನು ಮನಗಂಡಿದ್ದರಿಂದಲೆ ಇಂದು ಭಾರತೀಯ ಜನತಾ ಪಕ್ಷದಲ್ಲಿ ಕಾರ್ಯನಿರ್ವಹಿಸಲು ಸಲಿಸಾಗುತ್ತಿದ್ದೆ . ತಾವುಗಳು ಈ ಶಿಬಿರದಲ್ಲಿ ಪಕ್ಷದ ಸಿದ್ದಾಂತಗಳ ಬಗ್ಗೆ ಕಲಿತು ಕಾರ್ಯಕರ್ತರಿಗೆ ತಲುಪಿಸುವ ಮೂಲಕ ಪಕ್ಷವನ್ನು ಬಿಲಿಷ್ಠಗೋಳಿಸಬೇಕು ಎಂದು ಹೇಳಿದರು
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ ಬಿಜೆಪಿ ಕಾರ್ಯಕರ್ತರ ಆಧಾರಿತ ಪಕ್ಷ ಪಕ್ಷವಾಗಿದ್ದು, ಸಾಮಾನ್ಯ ಕಾರ್ಯಕರ್ತನಿಗೂ ಹೆಚ್ಚಿನ ಅವಕಾಶಗಳು ಪಕ್ಷದಲ್ಲಿವೆ. ಬಿಜೆಪಿ ಪಕ್ಷ ಉಳಿದ ಪಕ್ಷಗಳಿಗಿಂತ ಭಿನ್ನವಾದ ರೀತಿಯಲ್ಲಿ ಕಾರ್ಯನಿರ್ವಹಿಸಿ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಪದಾಧಿಕಾರಿಗಳು , ಕಾರ್ಯಕರ್ತರು ಮೌಲ್ಯಾಧಾರಿತವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು ಕಾರ್ಯನಿರ್ವಹಿಸುವಂತೆ ಹೇಳಿದರು
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಷ ಪಾಟೀಲ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ ಇದ್ದರು
ಎಲ್.ಎಚ್ ಬಂಡಿ ಸ್ವಾಗತಿಸಿ, ವಂದಿಸಿದರು