RNI NO. KARKAN/2006/27779|Wednesday, November 6, 2024
You are here: Home » breaking news » ಘಟಪ್ರಭಾ:ರಾಷ್ಟ್ರೀಯ ಪಕ್ಷವೊಂದರ ಪದಾಧಿಕಾರಿಗಳೆಂಬ ಹೆಮ್ಮೆ ನಿಮಗಿರಲಿ : ಈರಣ್ಣಾ ಕಡಾಡಿ

ಘಟಪ್ರಭಾ:ರಾಷ್ಟ್ರೀಯ ಪಕ್ಷವೊಂದರ ಪದಾಧಿಕಾರಿಗಳೆಂಬ ಹೆಮ್ಮೆ ನಿಮಗಿರಲಿ : ಈರಣ್ಣಾ ಕಡಾಡಿ 

ರಾಷ್ಟ್ರೀಯ ಪಕ್ಷವೊಂದರ ಪದಾಧಿಕಾರಿಗಳೆಂಬ ಹೆಮ್ಮೆ ನಿಮಗಿರಲಿ : ಈರಣ್ಣಾ ಕಡಾಡಿ

ಅರಭಾವಿ ಮಂಡಲ ಪ್ರಶಿಕ್ಷಣ ವರ್ಗ ಕಾರ್ಯಾಗಾರದ ಉದ್ಘಾಟನೆ

 

ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ನ 8 :
ಬಿಜೆಪಿಯಿಂದ ಪ್ರತಿ ಮೂರು ವರ್ಷಗಳಿಗೊಮ್ಮೆ ಪ್ರಶಿಕ್ಷಣ ವರ್ಗವನ್ನು ನಡೆಸುತ್ತಿದ್ದು, ಇದರಲ್ಲಿ ಪದಾಧಿಕಾರಿಗಳ ಪರಿಚಯ ಮತ್ತು ಪಕ್ಷದ ತತ್ವ ಸಿದ್ಧಾಂತಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತದೆ ಎಂದು ರಾಜ್ಯಸಭಾ ಸದಸ್ಯ ಮತ್ತು ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಈರಣ್ಣಾ ಕಡಾಡಿ ಹೇಳಿದರು.
ಇಲ್ಲಿಗೆ ಸಮೀಪದ ಬಸವೇಶ್ವರ ಸಭಾ ಭವನದಲ್ಲಿ ರವಿವಾರದಂದು ಅರಭಾವಿ ಮಂಡಲ ಪ್ರಶಿಕ್ಷಣ ವರ್ಗ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪದಾಧಿಕಾರಿಗಳ ಜವಾಬ್ದಾರಿ ಕಾರ್ಯಗಳನ್ನು ಇದರಲ್ಲಿ ತಿಳಿಸಲಾಗುತ್ತದೆ ಎಂದು ಹೇಳಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಇರುವದರಿಂದ ಕಾರ್ಯಕರ್ತರು ಉಭಯ ಸರ್ಕಾರಗಳ ಜನಪರ ಹಾಗೂ ರೈತಪರ ಸಾಧನೆಗಳನ್ನು ಜನರ ಮುಂದಿಡುವಂತೆ ಹೇಳಿದರು. ಪದಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು. ಶಿಸ್ತಿನ ಪಕ್ಷವಾಗಿರುವ ಬಿಜೆಪಿಯ ಪದಾಧಿಕಾರಿಗಳೆಂಬ ಹೆಮ್ಮೆ ನಿಮ್ಮದಾಗಬೇಕು. ಈ ದಿಸೆಯಲ್ಲಿ ಪಕ್ಷದ ಆಚಾರ ವಿಚಾರ ಹಾಗೂ ಯೋಜನೆಗಳನ್ನು ವಿವರಿಸಬೇಕು. ಪದಾಧಿಕಾರಿಗಳ ಜವಾಬ್ದಾರಿ ಪಕ್ಷವನ್ನು ಮುನ್ನಡೆಸಲು ಸಹಕಾರಿಯಾಗುತ್ತದೆ. ರಾಷ್ಟ್ರೀಯ ಪಕ್ಷದ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವುದು ನಿಮ್ಮಗಳ ಸೌಭಾಗ್ಯವೆಂದು ಕಡಾಡಿ ಹೇಳಿದರು.
ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ, ರಾಜ್ಯ ಯುವಮೋರ್ಚಾ ಕಾರ್ಯದರ್ಶಿ ಈರಣ್ಣ ಅಂಗಡಿ, ಸೇರಿದಂತೆ ಇತರೇ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಂತರ ಬಿಜೆಪಿಯ ಇತಿಹಾಸದ ಬಗ್ಗೆ ಭೀಮರಾಜ್ ವಡೇರ, ನಮ್ಮ ಕಾರ್ಯಪದ್ಧತಿ ಮತ್ತು ಸಂಘಟನೆಯ ಸಂರಚನೆಯಲ್ಲಿ ನಮ್ಮ ಪಾತ್ರದ ಬಗ್ಗೆ ರಾಜು ಚಿಕ್ಕನಗೌಡರ, ಸಾಮಾಜಿಕ ಜಾಲತಾಣದ ಬಗ್ಗೆ ಚಿದಾನಂದ ದೇಮಶೆಟ್ಟಿ, ವ್ಯಕ್ತಿಕ್ವ ವಿಕಾಸದ ಬಗ್ಗೆ ರಾಮಚಂದ್ರ ಕಾಕಡೆ, ನಮ್ಮ ವಿಚಾರ ಪರಿವಾರದ ಬಗ್ಗೆ ಸಂದೀಪ ದೇಶಪಾಂಡೆ ಅವರು ವಿಶೇಷ ಉಪನ್ಯಾಸ ನೀಡಿದರು.
ಅರಭಾವಿ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪರಸಪ್ಪ ಬಬಲಿ ಸ್ವಾಗತಿಸಿದರು. ಮಹಾಂತೇಶ ಕುಡಚಿ ನಿರೂಪಿಸಿದರು. ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷ ಬಸವರಾಜ ಮಾಳೇದವರ ವಂದಿಸಿದರು.
ಅರಭಾವಿ ಮಂಡಲದ ಎಲ್ಲ 115 ಪದಾಧಿಕಾರಿಗಳು ಅಭ್ಯಾಸ ವರ್ಗದಲ್ಲಿ ಪಾಲ್ಗೊಂಡಿದ್ದರು.

Related posts: