RNI NO. KARKAN/2006/27779|Thursday, December 12, 2024
You are here: Home » breaking news » ಘಟಪ್ರಭಾ:ಡಾ|| ಮೂಜಗಂ ಟ್ರೋಫಿ ಘಟಪ್ರಭಾದಲ್ಲಿ ಎಲ್ಲಾ ವರ್ಗದವರನ್ನು ಸೇರಿಸಿದೆ : ಮಲ್ಲಿಕಾರ್ಜುನ ಶ್ರೀ

ಘಟಪ್ರಭಾ:ಡಾ|| ಮೂಜಗಂ ಟ್ರೋಫಿ ಘಟಪ್ರಭಾದಲ್ಲಿ ಎಲ್ಲಾ ವರ್ಗದವರನ್ನು ಸೇರಿಸಿದೆ : ಮಲ್ಲಿಕಾರ್ಜುನ ಶ್ರೀ 

ಡಾ|| ಮೂಜಗಂ ಟ್ರೋಫಿ ಘಟಪ್ರಭಾದಲ್ಲಿ ಎಲ್ಲಾ ವರ್ಗದವರನ್ನು ಸೇರಿಸಿದೆ : ಮಲ್ಲಿಕಾರ್ಜುನ ಶ್ರೀ

 

 

ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ನ 10 :

 

ಇಲ್ಲಿನ ಎಸ್‍ಡಿಟಿ ಪ್ರೌಢ ಶಾಲಾ ಮೈದಾನದಲ್ಲಿ 8ನೇ ಬಾರಿಗೆ ರವಿವಾರ ನಡೆದ ಡಾ|| ಮೂಜಗಂ ಟ್ರೋಫಿ-2020 ಕ್ರಿಕೇಟ್ ಪಂದ್ಯಾವಳಿಯ ಪೈನಲ್ ಪಂದ್ಯದಲ್ಲಿ ಪತ್ರಕರ್ತರು ಹಾಗೂ ಕಂದಾಯ ಇಲಾಖೆಯ ತಂಡ ಮಲ್ಲಾಪೂರ ಪಟ್ಟಣ ಪಂಚಾಯತ ತಂಡವನ್ನು 6 ವಿಕೆಟಗಳಿಂದ ಸೋಲಿಸಿ ಆಕರ್ಷಕ ಟ್ರೋಪಿಯನ್ನು ಪಡೆದುಕೊಂಡರು.
ಬಹುಮಾನ ವಿತರಣಾ ಸಮಾರಂಭದಲ್ಲಿ ಸಾನಿದ್ಯವಹಿಸಿ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಮಲ್ಲಿಕಾರ್ಜುನ ಶ್ರೀಗಳು ಮಾತನಾಡಿ ಕ್ರೀಡೆ ಮನುಷ್ಯನ ಅವಿಭಾಜ್ಯ ಅಂಗ. ಕ್ರೀಡೆಯಲ್ಲಿ ಭಾಗವಹಿಸಿದ ವ್ಯಕ್ತಿ ಸದೃಢವಾಗಿರುತ್ತೇನೆ. ಮನುಷ್ಯನಿಗೆ ಆರೋಗ್ಯವೆ ಭಾಗ್ಯ ಮತ್ತು ಸಂಪತ್ತು ಆಗಿರುತ್ತದೆ. ಡಾ|| ಮೂಜಗಂ ಟ್ರೋಫಿ ಘಟಪ್ರಭಾದಲ್ಲಿ ಎಲ್ಲಾ ವರ್ಗದವರನ್ನು ಸೇರಿಸಿ ಒಂದು ಹಬ್ಬದ ವಾತಾವರಣ ಸೃಷ್ಠಿ ಮಾಡುತ್ತದೆ. ಈ ಪಂದ್ಯಾವಳಿಯನ್ನು ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಉದ್ದೇಶದಿಂದ ಪ್ರತಿ ವರ್ಷ ನನ್ನ ಗುರುಗಳಾದ ಮೂರು ಸಾವಿರ ಮಠದ ಜಗದ್ಗುರುಗಳಾದ ಲಿಂ. ಡಾ|| ಗಂಗಾಧರ ರಾಜಯೋಗೀಂದ್ರ ಸ್ವಾಮಿಗಳ ಸ್ಮರಣಾರ್ಥಕವಾಗಿ ಆಯೋಜಿಸುತ್ತೇವೆ.
ಈ ಸಂದರ್ಭದಲ್ಲಿ ಶಿವಮೂರ್ತಿ ದೇವರು ಅರಳಿಕಟ್ಟಿ, ಅರ್ಜುನ ಗಾಡಿವಡ್ಡರ, ಮುಖಂಡರಾದ ಡಿ.ಎಮ್.ದಳವಾಯಿ, ತಾ. ಪಂ. ಸದಸ್ಯ ಲಗಮಣ್ಣ ನಾಗನ್ನವರ, ಬಿ.ವಾಯ್.ಹೊಳೆಗಾರ, ಮಲ್ಲು ಕೋಳಿ, ಕಲ್ಲಪ್ಪ ಕಾಡದವರ, ಕಾಡಪ್ಪ ಕರೋಶಿ, ಕೆ.ಬಿ.ಪಾಟೀಲ, ಸಲೀಮ ಕಬ್ಬೂರ, ಬಿ.ಆರ್.ಕರಿಗಾರ, ವಿಜಯ ಹೊಳೆಯಪ್ಪಗೋಳ, ನವೀನ ಹೊಸಮನಿ ಎಮ್.ಎ.ಹಂಚಿನಾಳ, ಎಮ್.ಎಸ್. ಗಡ್ಕರಿ, ಆರ್.ಡಿ.ಉಪ್ಪಾರ ಸೇರಿದಂತೆ ಅನೇಕರು ಇದ್ದರು.

Related posts: