ಗೋಕಾಕ:ಬಸವಣ್ಣನವರ ಮೂರ್ತಿ ವಿರೂಪಗೊಳಿಸಿದನ್ನು ಖಂಡಿಸಿ ನಾಳೆ ಪ್ರತಿಭಟನೆ : ಮುರಘರಾಜೆಂದ್ರ ಶ್ರೀ
ಬಸವಣ್ಣನವರ ಮೂರ್ತಿ ವಿರೂಪಗೊಳಿಸಿದನ್ನು ಖಂಡಿಸಿ ನಾಳೆ ಪ್ರತಿಭಟನೆ : ಮುರಘರಾಜೆಂದ್ರ ಶ್ರೀ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 11 :
ಇತ್ತೀಚಿಗೆ ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ಬಸವಣ್ಣನವರ ಮೂರ್ತಿ ವಿರೂಪಗೊಳಿಸಿದನ್ನು ಖಂಡಿಸಿ ನಾಳೆ ಗುರುವಾರ ದಿ. 12 ರಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೋಳ್ಳಲಾಗಿದೆ ಎಂದು ಇಲ್ಲಿನ ಶೂನ್ಯ ಸಂಪಾದನ ಮಠದ ಮುರಘರಾಜೆಂದ್ರ ಮಹಾಸ್ವಾಮಿಗಳು ಹೇಳಿದರು .
ಬುಧವಾರದಂದು ನಗರದ ಶೂನ್ಯ ಸಂಪಾದನ ಮಠದಲ್ಲಿ ಕರೆದ ಪೂರ್ವಭಾವಿ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡುತ್ತಿದ್ದರು.
ಕಳೆದ ಹಲವಾರ ದಶಕಗಳಿಂದ ಹಿಂತಹ ಕೃತ್ಯಗಳು ಸಮಾಜದಲ್ಲಿ ಜರಗುತ್ತಿರುವುದು ಖಂಡನೀಯವಾಗಿದ್ದು, ಈ ಪ್ರಕರಣವನ್ನು ವಿರೋಧಿಸಿ ನಾಳೆ ಮುಂಜಾನೆ 10:30 ಕ್ಕೆ ಬಸವೇಶ್ವರ ವೃತ್ತದಿಂದ ತಹಸೀಲ್ದಾರ್ ಕಛೇರಿವರೆಗೆ ಮೆರವಣಿಗೆ ನಡೆಯಿಸಿ ತಹಶೀಲ್ದಾರ ಅವರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಲ್ಲರು ಜಾತ್ಯಾತೀತವಾಗಿ ಈ ಹೋರಾಟದಲ್ಲಿ ಭಾಗವಹಿಸಬೇಕು .ಮುಂದಿನ ದಿನಗಳಲ್ಲಿ ಹಿಂತಹ ಘಟನೆಯಾದರೆ ಉಗ್ರ ಹೋರಾಟ ಮಾಡಲು ಎಲ್ಲ ಸಮಾಜ ಭಾಂಧವರು ಒಗ್ಗೂಡಬೇಕೆಂದು ಶ್ರೀಗಳು ಕರೆ ನೀಡಿದರು .
ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಮಾತನಾಡಿ ದೇಶದಲ್ಲಿ ಹಿಂತಹ ದೃಶಕೃತ್ಯಗಳು ನಿರಂತರವಾಗಿ ನಡೆದುಕೊಂಡು ಬಂದು ಸಮಾಜದ ಸ್ವಾಸ್ಥ ಕೆಡಸುವ ವ್ಯವಸ್ಥಿತ ಷಂಡಯಂತ್ರ ನಡೆಯುತ್ತಿದೆ. ರಾಜ್ಯದಲ್ಲಿ ಪ್ರತಿಷ್ಠಾಪಿಸಿರುವ ಮಹಾನ ಪುರಷರ ಮೂರ್ತಿಗಳಿಗೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸುವ ಕಾರ್ಯ ಸ್ಥಳೀಯ ಆಡಳಿತ ಮಾಡಬೇಕು ಆ ನಿಟ್ಟಿನಲ್ಲಿ ನಾವುಗಳು ಸರಕಾರದ ಕಣ್ಣತೆರೆಯುವ ಕಾರ್ಯಕ್ಕೆ ಮಾಡಬೇಕು ಎಂದರು
ಈ ಸಂದರ್ಭದಲ್ಲಿ ಕಪರಟ್ಟಿ ಕಳ್ಳಿಗುದ್ದಿ ಹಿರೇಮಠದ ಬಸವರಾಜ ಕಪ್ಪರಟ್ಟಿ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಮುಖಂಡರುಗಳಾದ ಅಶೋಕ ಪಾಟೀಲ, ಶಶಿಧರ ದೇಮಶೆಟ್ಟಿ, ವಿವೇಕ ಜತ್ತಿ ಇದ್ದರು .