ಚಿಕ್ಕೋಡಿ:ಬುಲೆರೋ ಮತ್ತು ಬೈಕಗಳ ನಡುವೆ ಡಿಕ್ಕಿ ಓರ್ವ ಸ್ಥಳದಲ್ಲೇ ಸಾವು :ಕೇರೂರ ಕ್ರಾಸ್ ಬಳಿ ಘಟನೆ
ಬುಲೆರೋ ಮತ್ತು ಬೈಕಗಳ ನಡುವೆ ಡಿಕ್ಕಿ ಓರ್ವ ಸ್ಥಳದಲ್ಲೇ ಸಾವು :ಕೇರೂರ ಕ್ರಾಸ್ ಬಳಿ ಘಟನೆ
ಚಿಕ್ಕೋಡಿ ಸೆ 5: ಬುಲೆರೋ ವಾಹನ ಮತ್ತು ಎರೆಡು ಬೈಕಗಳ ನಡುವೆ ಡಿಕ್ಕಿಯಾದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕೇರೂರ ಕ್ರಾಸ್ ಬಳಿ ಮಂಗಳವಾರ ಮಧ್ಯಾಹ್ನ ನಡೆದಿದೆ
ಸಂಕೇಶ್ವರ ಪಟ್ಟಣದ ನಿವಾಸಿ ಕಿಶೋರ ಕುಮಾರ ಶಹಾ 38 ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ
ಘಟನೆಯಲ್ಲಿ ಮಹಾರಾಷ್ಟ್ರ ಮೂಲದ ಬಾರಸಿದ ಮಹಾಜನನಾಂದ ಜಗದಾಳೆ (40),ದಶರಥ ಜಗದಾಳೆ(52), ಅಂಕಲಿ ಗ್ರಾಮದ ನವೀನ ಕರಾಡಕರ(29) ತೀವ್ರ ಗಾಯಗೊಂಡಿದ್ದಾರೆ ಗಾಯಗೊಂಡ ಮೂವರಿಗೆ ಚಿಕ್ಕೋಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ
ಈ ಕುರಿತು ಅಂಕಲಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ