RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಸರಕಾರ ಕೂಡಲೇ ಗೌರಿ ಲಂಕೇಶ ಹತ್ಯಗೈದ ಕೊಲೆಗಡುಕರನ್ನು ಬಂಧಿಸಬೇಕು : ಕರವೇ ಅಧ್ಯಕ್ಷ ಖಾನಪ್ಪನವರ ಆಗ್ರಹ

ಗೋಕಾಕ:ಸರಕಾರ ಕೂಡಲೇ ಗೌರಿ ಲಂಕೇಶ ಹತ್ಯಗೈದ ಕೊಲೆಗಡುಕರನ್ನು ಬಂಧಿಸಬೇಕು : ಕರವೇ ಅಧ್ಯಕ್ಷ ಖಾನಪ್ಪನವರ ಆಗ್ರಹ 

ಸರಕಾರ ಕೂಡಲೇ ಗೌರಿ ಲಂಕೇಶ ಹತ್ಯಗೈದ ಕೊಲೆಗಡುಕರನ್ನು ಬಂಧಿಸಬೇಕು : ಕರವೇ ಅಧ್ಯಕ್ಷ ಖಾನಪ್ಪನವರ ಆಗ್ರಹ 
ಗೋಕಾಕ ಸೆ 6: ವಿಚಾರವಾದಿಗಳು, ಚಿಂತಕರ, ನಿಷ್ಠುರುವಾದಿಗಳ, ಮನೆಗಳು ಸಾವಿನ ಮನೆಗಳಾಗುತ್ತಿವೆ. ಇದು ಹೇಡಿಗಳ ಕೃತ್ಯ, ಸರಕಾರ ಕೂಡಲೇ ಗೌರಿ ಲಂಕೇಶ ಹತ್ಯಗೈದ ಕೊಲೆಗಡುಕರನ್ನು ಬಂಧಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಗೋಕಾಕ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಆಗ್ರಹಿಸಿದ್ದಾರೆ.

ಬುಧವಾರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಾಲದಯಲ್ಲಿ ಕ.ರ.ವೇ. ಗೋಕಾಕ ತಾಲೂಕಾ ಘಟಕ ಹಮ್ಮಿಕೊಂಡ ಖಂಡನಾ ಮತ್ತು ಶೃದ್ಧಾಂಜಲಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.
ಖ್ಯಾತ ಲೇಖಕ, ಪತ್ರಕರ್ತ ಲಂಕೇಶ ಪುತ್ರಿಯಾಗಿದ್ದ ಗೌರಿ ಲಂಕೇಶ ಶೋಷಿತರ ಪರ ಧ್ವನಿಯಾಗಿದ್ದರು. ದಲಿತ, ರೈತ ಹಾಗೂ ಮಹಿಳಾ ಪರ ಹೋರಾಟಗಳಲ್ಲಿ ತಮ್ಮನ್ನು ಸಕ್ರೀಯವಾಗಿ ಗುರುತಿಸಿಕೊಂಡಿದ್ದ ಗೌರಿ ಲಂಕೇಶ ಅವರು ನಕ್ಸಲೀಯರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ನಿರಂತರ ಪ್ರಯತ್ನವನ್ನು ನಡೆಸಿ ಹಾಲಿ ರಾಜ್ಯ ಸರಕಾರದ ಅವಧಿಯಲ್ಲಿ ಕೆಲವು ನಕ್ಸಲೀಯರ ಶರಣಾಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕನ್ನಡದ ಬೆರಳಿಣಿಕೆಯ ಮಂದಿ ಸಂಪಾದಕೀಯರಲ್ಲಿ ಗೌರಿ ಲಂಕೇಶರು ಪ್ರಮುಖರಾಗಿದ್ದರು. ಎಡಪಂಥೀಯ ಚಿಂತನೆಗಳು ಅವರಲ್ಲಿ ಹೆಚ್ಚು ಗೋಚರಿಸುತ್ತಿದ್ದವು. ತನ್ನ ತಂದೆಯ ಲಂಕೇಶರವರ ಜಾತ್ಯಾತೀತ ತತ್ವದ ಭದ್ರ ತಳಹದಿ ಹಾಕಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದ ಗೌರಿ ಲಂಕೇಶ ಅವರನ್ನು ಗುಂಡಿಕ್ಕಿ ಹತ್ಯಗೈದಿದ್ದು ಅಕ್ಷಮ್ಯ ಅಪರಾಧ. ರಾಜ್ಯ ಸರಕಾರ ಕೂಡಲೇ ಕಾರ್ಯಪ್ರವೃತ್ತರಾಗಿ ತಕ್ಷಣದಲ್ಲಿ ಗೌರಿ ಲಂಕೇಶ ಅವರನ್ನು ಹತ್ಯಗೈದವರನ್ನು ಬಂಧಿಸಬೇಕೆಂದು ಖಾನಪ್ಪನವರ ಹೇಳಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಸಾಧಿಕ ಹಲ್ಯಾಳ, ದೀಪಕ ಹಂಜಿ, ಕೃಷ್ಣಾ ಖಾನಪ್ಪನವರ, ರಹಿಮಾನ ಮೋಕಾಶಿ, ಎ.ಕೆ. ದೇಸಾಯಿ, ಬಸು ಗಾಡಿವಡ್ಡರ, ಶೆಟ್ಟೆಪ್ಪ ಗಾಡಿವಡ್ಡರ, ಅಜೀತ ಮಲ್ಲಾಪೂರ, ಮುಗಟ ಫೈಲವಾನ, ಮಲ್ಲು ಸಂಪಗಾರ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

Related posts: